»   » ಸಾಹಸ ಸಿಂಹನಿಗೆ ನಮಿಸಿದ ಕನ್ನಡದ ತಾರೆಗಳು

ಸಾಹಸ ಸಿಂಹನಿಗೆ ನಮಿಸಿದ ಕನ್ನಡದ ತಾರೆಗಳು

Subscribe to Filmibeat Kannada

ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಕನ್ನಡದ ತಾರೆಗಳು ನಮನ ಸಲ್ಲಿಸಿದ್ದಾರೆ. ವಿಷ್ಣುವರ್ಧನ್ ಜನ್ಮದಿನವನ್ನು ಟ್ವಿಟರ್ ಮೂಲಕ ಸುಮಲತಾ ಅಂಬರೀಶ್, ಕಿಚ್ಚ ಸುದೀಪ್, ಛಾಲೆಂಜಿಂಗ್ ಸ್ಟಾರ್ ದರ್ಶನ್, ಚಿರಂಜೀವಿ ಸರ್ಜಾ ಸೇರಿದಂತೆ ಅನೇಕ ತಾರೆಗಳು ನೆನಪು ಮಾಡಿಕೊಂಡಿದ್ದಾರೆ.

'ನನಗೆ ಈಗಲೂ ಅನ್ನಿಸುತ್ತಿದೆ, ಅವರು ನಮ್ಮ ಸುತ್ತಲೇ ಇದ್ದಾರೆ. ಅವರು ನಮ್ಮನ್ನು ಸದಾ ನೋಡುತ್ತಿರುತ್ತಾರೆ. ಸಾಹಸ ಸಿಂಹ ವಿಷ್ಣುವರ್ಧನ್ ಕುಟುಂಬಲ್ಲಿ ಸದಾ ಆರೋಗ್ಯ, ಐಶ್ವರ್ಯ ತುಂಬಿರಲಿ' ಹೀಗೆಂದು ಟ್ವೀಟ್ ಮಾಡಿ ಸಾಹಸ ಸಿಂಹನನ್ನು ನೆನಪು ಮಾಡಿಕೊಂಡಿದ್ದು ಕಿಚ್ಚ ಸುದೀಪ್.

'ರಾಮಾಚಾರಿ' ನಮ್ಮೊಂದಿಗೆ ಎಂದೆಂದಿಗೂ ಇರುತ್ತಾರೆ. ನಮ್ಮ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು ನೋಡುತ್ತಲೇ ಇದ್ದಾರೆ. ಸದಾ ನಮಗೆ ಒಳ್ಳೆಯದನ್ನೇ ಬಯಸುತ್ತಾರೆ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ವಿಷ್ಣುವರ್ಧನ್ ಅವರ ಸಾವಿರಾರು ಅಭಿಮಾನಿಗಳು ಸಾಮಾಜಿಕ ತಾಣಗಳ ಮೂಲಕ ತಮ್ಮ ಗೌರವ ಸಲ್ಲಿಕೆ ಮಾಡುತ್ತಿದ್ದಾರೆ.

ಪುಟ್ಟಣ್ಣ ಕಣಗಾಲ್ ರ ನಾಗರಹಾವಿನ ರಾಮಾಚಾರಿ ನಂತರ ಚಿತ್ರರಂಗದಲ್ಲಿ ಮೂಡಿಸಿದ ಛಾಪನ್ನು ಯಾರು ಮರೆಯುವುದಿಲ್ಲ. ಮುತ್ತಿನ ಹಾರ, ಬಂಧನ, ಯಜಮಾನ, ಆಪ್ರಮಿತ್ರ, ಆಪ್ತರಕ್ಷಕ, ಜಯಸಿಂಹ, ಮಲಯ ಮಾರುತ, ಬಂಗಾರದ ಜಿಂಕೆ, ಗುರು ಶಿಷ್ಯರು, ಮೋಜುಗಾರ ಸೊಗಸುಗಾರ...ಚಿತ್ರಗಳ ಪಟ್ಟಿ ಉದ್ದದಿದೆ, ಅವರಿಗೆ ಅಭಿನಯ ಭಾರ್ಗವ ಬಿರುದು ತಂದುಕೊಟ್ಟವು.

ನೀವು ನಮ್ಮ ಜತೆಗೆ ಇದ್ದೀರಿ

ಸಾಹಸ ಸಿಂಹರ ಸಾಧನೆಯನ್ನು ನೆನಪು ಮಾಡಿಕೊಂಡಿರುವ ಕಿಚ್ಚ ಸುದೀಪ್ ನೀವು(ವಿಷ್ಣುವರ್ಧನ್) ನಮ್ಮ ಸುತ್ತಲೇ ಇದ್ದೀರಿ ಎಂದು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ನಮ್ಮನ್ನು ನೋಡುತ್ತಿರುವ ಚೇತನ

ನಾವು ಮಾಡುವ ಎಲ್ಲ ಕೆಲಸಗಳನ್ನು ನೀವು ನೋಡುತ್ತೊಲೇ ಇರುತ್ತೀರಿ. ನಿಮ್ಮ ಕುಟುಂಬಕ್ಕೆ ಆರೋಗ್ಯ ಮತ್ತು ಐಶ್ವರ್ಯ ವೃದ್ಧಿಸಲಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಆದರ್ಶಗಳ ಮೂಲಕ ಜೀವಂತ

ಡಾ||ವಿಷ್ಣು ಸರ್ ತಮ್ಮ ಆದರ್ಶಗಳ ಮೂಲಕ,ಅತ್ಯದ್ಭುತ ಚಿತ್ರಗಳ ಮೂಲಕ ಎಂದೆಂದೂ ಜೀವಂತವಾಗಿರುತ್ತಾರೆ ಎಂದು ಛಾಲೆಂಜಿಂಗ್ ಸ್ಟಾರ್ ದರ್ಶನ್ ನಮನ ಸಲ್ಲಿಕೆ ಮಾಡಿದ್ದಾರೆ.

ಶಿಸ್ತಿನ ಚೇತನ ಜೀವಂತ

ನಿಜವಾದ ಶಿಸ್ತಿನ ಮನುಷ್ಯ ನಮ್ಮ ಜತೆ ಎಂದೆಂದಿಗೂ ಜೀವಂತವಾಗಿರುತ್ತಾರೆ ಎಂದು ನೆನಪು ಮಾಡಿಕೊಂಡ ಛಾಲೆಂಜಿಂಗ್ ಸ್ಟಾರ್ ದರ್ಶನ್.

ನಮನ ಸಲ್ಲಿಸಿದ ಸುಮಲತಾ

ವಿಷ್ಣುವರ್ಧನ್ ಆಪ್ತಮಿತ್ರ ಅಂಬರೀಶ್ ಪತ್ನಿ ಸಾಹಸ ಸಿಂಹನನ್ನು ನೆನಪು ಮಾಡಿಕೊಂಡಿದ್ದು ಹೀಗೆ.

ಯುವ ನಟಿ ತೇಜಸ್ವಿನಿ

ಅಭಿನಯ ಭಾರ್ಗವ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಜನ್ಮದಿನವನ್ನು ಹಂಚಿಕೊಂಡ ನಟಿ ತೇಜಸ್ವಿನಿ.

200ಕ್ಕೂ ಅಧಿಕ ಚಿತ್ರಗಳು

ವಿಷ್ಣುವರ್ಧನ್ ಕನ್ನಡದಲ್ಲೇ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಹಿಂದಿ, ಮಲೆಯಾಳಂ, ತೆಲುಗು ಚಿತ್ರಗಳಲ್ಲೂ ತಮ್ಮ ಅಭಿನಯ ಚತುರತೆ ತೋರಿಸಿದ್ದರು.

English summary
Kannada actors remembering Sahasa Simha Vishnuvardhan on his 65th birthday. Kichha Sudeep, Darshan and other celebrities express the tribute to Abhinaya Bhargava.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada