Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವರ್ಣಮಾಲೆಯಲ್ಲಿ ವಿಷ್ಣುವರ್ಧನ್ ಸಿನಿಮಾಗಳು: ಅಭಿಮಾನಿಗಳಿಂದ ಹೊಸ ಪ್ರಯತ್ನ
ಕನ್ನಡ ವರ್ಣಮಾಲೆ ಅ,ಆ,ಇ,ಈ ಎಲ್ಲರಿಗೂ ಗೊತ್ತಿರುವುದೇ. ವರ್ಣಮಾಲೆ ಮತ್ತು ಪದ ಗ್ರಹಿಕೆ ಕಲಿಸುವಾಗ ಅ=ಅರಸ, ಆ=ಆನೆ, ಇ=ಇಲಿ ಎಂದು ಕಲಿಸುವುದು ವಾಡಿಕೆ. ವಿಷ್ಣುವರ್ಧನ್ ಅಭಿಮಾನಿಗಳು ಇದನ್ನೇ ತುಸು ಭಿನ್ನವಾಗಿಸಿದ್ದಾರೆ.
ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ವಿಷ್ಣುವರ್ಧನ್ ಚಿತ್ರಗಳುಳ್ಳ 'ಕೋಟಿಗೊಬ್ಬ' 2021 ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದ್ದು, ಕ್ಯಾಲೆಂಡರ್ ನಲ್ಲಿ ವರ್ಣಮಾಲೆಯ ಮುಂದಿನ ಪದಗಳನ್ನು ಪದಲಾಯಿಸಿ ವಿಷ್ಣುವರ್ಧನ್ ಅವರು ನಟಿಸಿದ್ದ ಸಿನಿಮಾಗಳ ಹೆಸರು ಸೇರಿಸಲಾಗಿದೆ.
ಅ=ಅಣ್ಣ-ಅತ್ತಿಗೆ, ಆ=ಆಪ್ತಮಿತ್ರ, ಇ=ಇಂದಿನ ರಾಮಾಯಣ, ಹೀಗೆ ವಿಷ್ಣುವರ್ಧನ್ ನಟಿಸಿರುವ ಹೆಸರುಗಳನ್ನು ಅಕ್ಷರ ಮಾಲೆ ಗುರುತಿಸಲು ಬಳಸಲಾಗಿದೆ.
ಕ್ಯಾಲೆಂಡರ್‌ನಲ್ಲಿ ವಿಷ್ಣುವರ್ಧನ್ ಅವರ ಅಪರೂಪದ ಚಿತ್ರಗಳನ್ನು ಮುದ್ರಿಸಲಾಗಿದ್ದು, ಪ್ರತಿ ತಿಂಗಳಿಗೂ ವಿಶೇಷ ಬಣ್ಣಗಳ ಸಂಯೋಜನೆ ಮಾಡಲಾಗಿದೆ. ಜೊತೆಗೆ ರಜಾದಿನಗಳು, ಅಮಾವಾಸೆ, ಹುಣ್ಣಿಮೆ, ಹಬ್ಬಗಳು, ಗಣ್ಯರ ಜನ್ಮದಿನದಗಳನ್ನು ಒಳಗೊಂಡಿರುವ ಈ ಕ್ಯಾಲೆಂಡರ್ ವೃತಿಪರ ಕ್ಯಾಲೆಂಡರ್ ಗಳಿಗೆ ಸರಿ ಸಮಾನವಾಗಿದೆ ಎಂದಿದೆ ವಿಷ್ಣುಸೇನಾ ಸಮಿತಿ.
ಕೋಟಿಗೊಬ್ಬ ಕ್ಯಾಲೆಂಡರ್ ಗೆ ಇದು 10ನೇ ವಾರ್ಷಿಕೋತ್ಸವ. ಕೋಟಿಗೊಬ್ಬ ಕ್ಯಾಲೆಂಡರ್‌ನ ಮೊದಲ ಸಂಚಿಕೆಯನ್ನು ದಿವಂಗತ ಅನಂತಕುಮಾರ್ ಮತ್ತು ಡಾ.ಭಾರತಿ ವಿಷ್ಣುವರ್ಧನ್ ಅವರು ಈ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ದರು.