twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣುವರ್ಧನ್ ಜನ್ಮದಿನದಂದು 'ಹೃದಯ ಗೀತೆ': ಇದರ ಹಿಂದಿದೆ ಒಳ್ಳೆ ಉದ್ದೇಶ.!

    By Harshitha
    |

    Recommended Video

    ಏನಿದು ಹೃದಯ ಗೀತೆ..? | Filmibeat Kannada

    ಸೆಪ್ಟೆಂಬರ್ 18... ಸಾಹಸ ಸಿಂಹ, ಡಾ.ವಿಷ್ಣುವರ್ಧನ್ ರವರ 68ನೇ ಜನ್ಮದಿನ. ಈ ದಿನವನ್ನ ಅರ್ಥಪೂರ್ಣವಾಗಿ ಆಚರಿಸಲು 'ಹೃದಯವಂತ'ನ ಕುಟುಂಬ ಮುಂದಾಗಿದೆ.

    ವಿಭಾ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಟರಿ ಬೆಂಗಳೂರು ಸೌಥ್ ಸಹಯೋಗದೊಂದಿಗೆ ಸೆಪ್ಟೆಂಬರ್ 14 ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಸಂಜೆ 6 ಗಂಟೆಗೆ 'ಹೃದಯ ಗೀತೆ' ಎಂಬ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.

    ವಿಷ್ಣು ಸ್ಮಾರಕ ವಿಚಾರಕ್ಕೆ ನಾವೇ ಮುಂದೆ ನಿಲ್ಲುತ್ತೇವೆ ಎಂದ ಶಿವಣ್ಣ ವಿಷ್ಣು ಸ್ಮಾರಕ ವಿಚಾರಕ್ಕೆ ನಾವೇ ಮುಂದೆ ನಿಲ್ಲುತ್ತೇವೆ ಎಂದ ಶಿವಣ್ಣ

    ಈ ಸಂಗೀತ ಕಾರ್ಯಕ್ರಮದಲ್ಲಿ ಭಾರತಿ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಖ್ಯಾತ ತಾರೆಯರು ಭಾಗವಹಿಸಲಿದ್ದಾರೆ.

    Vishnuvardhans 68th Birth Anniversary special Program - Hrudaya Geethe

    ಈ ಕಾರ್ಯಕ್ರಮದಿಂದ ಬರುವ ಹಣವನ್ನು ಸುಮಾರು 140ಕ್ಕೂ ಹೆಚ್ಚು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವ ಮಕ್ಕಳ ಶಸ್ತ್ರ ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು.

    ಬರ್ತಡೇ ದಿನ ವಿಷ್ಣು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಸುದೀಪ್ಬರ್ತಡೇ ದಿನ ವಿಷ್ಣು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಸುದೀಪ್

    ಸೆಪ್ಟೆಂಬರ್ 18 ರಂದು ನಗರದ ಪ್ರಖ್ಯಾತ ಆಡಿಟೋರಿಯಂ ನಲ್ಲಿ ಅನಿರುದ್ಧ್ ನಿರ್ದೇಶಕ ಮಾಡಿರುವ ಆರು ಕಿರುಚಿತ್ರಗಳ ಪ್ರದರ್ಶನ ಆಗಲಿದೆ.

    ಒಟ್ಟಾರೆ, ಪ್ರತಿ ವರ್ಷದಂತೆ ಈ ವರ್ಷ ಕೂಡ ಡಾ.ವಿಷ್ಣುವರ್ಧನ್ ಜನ್ಮದಿನವನ್ನ ಕುಟುಂಬ ವರ್ಗ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

    English summary
    Late Kannada Actor Dr.Vishnuvardhan's 68th Birth Anniversary special Program Hrudaya Geethe is organised on September 14th at Chowdaiah Memorial Hall.
    Tuesday, September 4, 2018, 18:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X