twitter
    For Quick Alerts
    ALLOW NOTIFICATIONS  
    For Daily Alerts

    ನಟ ಕಮಲ್ ಹಾಸನ್ ಪೊಲೀಸ್ ಠಾಣೆಗೆ ದೌಡು

    By Rajendra
    |

    Kaml Haasan
    ಅಂದಾಜು ರು.90 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 'ವಿಶ್ವರೂಪಂ' ಚಿತ್ರದ ಮೂಲಕ ನಟ ಕಮಲ್ ಹಾಸನ್ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದ್ದಾರೆ. ತಮ್ಮ ಮಹತ್ವಾಕಾಂಕ್ಷಿ ಚಿತ್ರವನ್ನು ಡಿಟಿಹೆಚ್ ನಲ್ಲಿ ಮನೆಮನೆಗೆ ತಲುಪಿಸಲು ಅವರು ಪಕ್ಕಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

    'ವಿಶ್ವರೂಪಂ' ಚಿತ್ರವನ್ನು ಚಿತ್ರಮಂದಿರಗಳಲ್ಲಿ ಜೊತೆಗೆ ಡಿಟಿಹೆಚ್ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಈ ಮೂಲಕ ಒಂದಷ್ಟು ವಾದ ವಿವಾದ, ಚರ್ಚೆಗಳಿಗೆ ದಾರಿ ಕಮಲ್ ಹಾಸನ್ ಗುರಿಯಾಗಿದ್ದಾರೆ. ಡಿಟಿಹೆಚ್ ಮೂಲಕ ಚಿತ್ರವನ್ನು ನೋಡಬೇಕೆಂದರೆ ಬೇಕೆಂದರೆ ರು.1000 ಕೊಡಬೇಕಾಗುತ್ತದೆ.

    ಚಿತ್ರಮಂದಿರಗಳಲ್ಲಿ 'ವಿಶ್ವರೂಪಂ' ಬಿಡುಗಡೆ ಮಾಡದೆ ಡಿಟಿಹೆಚ್ ಮೂಲಕ ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಬೆದರಿಕೆ ಕರೆಯೂ ಬಂದಿದೆ. ಅದೇನೆಂದರೆ "ನಿಮ್ಮ ಚಿತ್ರವನ್ನು ಪೈರಸಿ ಮಾಡುತ್ತೇವೆ. ಪವರ್ ಕಟ್ ಮಾಡಿ ಜನ ಚಿತ್ರವನ್ನು ವೀಕ್ಷಿಸದಂತೆ ಮಾಡುತ್ತೇವೆ" ಎಂದು ಯಾರೋ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ.

    ಈ ಸಂಬಂಧ ಕಮಲ್ ಹಾಸನ್ ಅವರು ಪೊಲೀಸ್ ಠಾಣೆಗೆ ದೌಡಾಯಿಸಿ ಭಾನುವಾರ (ಜ.6) ಕಂಪ್ಲೇಂಟ್ ರಿಜಿಸ್ಟರ್ಡ್ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡುವ ಮುನ್ನ ತಮಿಳುನಾಡು ಗೃಹ ಕಾರ್ಯದರ್ಶಿ ಆರ್ ರಾಜಗೋಪಾಲ್ ಅವರನ್ನು ಭೇಟಿ ಮಾಡಿದರು.

    ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕಮಲ್, "ನನ್ನ ಚಿತ್ರವನ್ನು ಪೈರಸಿ ಮಾಡುತ್ತೇವೆ. ಜನ ಚಿತ್ರವನ್ನು ವೀಕ್ಷಿಸದಂತೆ ಪವರ್ ಕಟ್ ಮಾಡುತ್ತೇವೆ ಎಂಬ ಬೆದರಿಕೆ ಕರೆಗಳು ನನಗೆ ಬಂದಿವೆ. ಇದು ಕಾನೂನು ಪ್ರಕಾರ ತಪ್ಪು. ಹಾಗಾಗಿ ತಾವು ಪೊಲೀಸರಿಗೆ ದೂರು ನೀಡಿದೆವು" ಎಂದಿದ್ದಾರೆ.

    'ವಿಶ್ವರೂಪಂ' ಚಿತ್ರವನ್ನು ಡಿಟಿಹೆಚ್ ಮೂಲಕ ಬಿಡುಗಡೆ ಮಾಡುತ್ತಿರುವ ಬಗ್ಗೆ ತಮಿಳುನಾಡು ಥಿಯೇಟರ್ ಮಾಲೀಕರು ಗುಡುಗಿದ್ದರು. ಚಿತ್ರವನ್ನು ಪ್ರದರ್ಶಿಸಲ್ಲ ಎಂದಿದ್ದರು. ಈ ಎಲ್ಲಾ ವಿರೋಧಗಳ ನಡುವೆಯೂ 'ವಿಶ್ವರೂಪಂ' ಚಿತ್ರ ಜ.10ರಂದು 390 ಥಿಯೇಟರ್ ಗಳಿಗೂ ಅಪ್ಪಳಿಸುತ್ತಿದೆ. ಅದಕ್ಕೂ ಒಂದು ದಿನ ಮುನ್ನ ಡಿಟಿಹೆಚ್ ನಲ್ಲಿ ಪ್ರಸಾರವಾಗುತ್ತಿದೆ. (ಪಿಟಿಐ)

    English summary
    Ahead of the release of his grand 90-crore movie "Vishwaroopam", Kamal Haasan has been threatened that the movie would be pirated and power supply to the cinemas screening will be suspended. Seeking government aid, the 58-year-old Kollywood actor on Sunday, Jan 7 met Home Secretary to Tamil Nadu R Rajagopal and later filed a police complaint.
    Monday, January 7, 2013, 11:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X