Don't Miss!
- Sports
SA Vs Eng 1st ODI: ಚೇಸಿಂಗ್ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್ಗಳ ಜಯ
- News
Assembly elections: ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಯ ನಂತರವೇ ರಾಜ್ಯ ವಿಧಾನಸಭೆ ಚುನಾವಣೆ?
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯೂಟ್ಯೂಬರ್ ಡಾ ಬ್ರೋಗೆ ಮೋಸ, ಕ್ಷಮೆ ಕೇಳಿದ ವ್ಲಾಗರ್ ಲೋಹಿತ್: ಏನಿದು ವಿಷಯ?
ಡಾ ಬ್ರೋ, ಕನ್ನಡದ ಅತಿ ಜನಪ್ರಿಯ ಯೂಟ್ಯೂಬರ್. ವಿದೇಶಗಳನ್ನು ಸುತ್ತುತ್ತಾ ಆಡು ಕನ್ನಡ ಭಾಷೆಯಲ್ಲಿಯೇ ವಿವರಣೆ ನೀಡುವ, ತೀರ ಅಪಾಯಕಾರಿ ಸನ್ನಿವೇಶಗಳಲ್ಲಿಯೂ ಧೈರ್ಯದಿಂದ ನುಗ್ಗುವ ಛಾತಿಯುಳ್ಳ ಈ ಯೂಟ್ಯೂಬರ್ ಎಂದರೆ ಕನ್ನಡ ಜನಕ್ಕೆ ವಿಶೇಷ ಪ್ರೀತಿ.
ಆದರೆ ಇತ್ತೀಚೆಗೆ ಡಾ ಬ್ರೋ ಯೂಟ್ಯೂಬರ್ ಒಬ್ಬನಿಂದಾಗಿ ತೀವ್ರ ಬೇಸರಕ್ಕೆ ಒಳಗಾಗಿದ್ದರು. ''ಸಹಾಯ ಮಾಡಿದವರಿಗೇ ಬೆನ್ನ ಹಿಂದೆ ಚೂರಿ ಹಾಕುವ ಜನರರಿರುತ್ತಾರೆ ಎಂದು ಕೇಳಿದ್ದೆ ಈಗ ನನಗೇ ಸ್ವತಃ ಅನುಭವ ಆಗಿದೆ'' ಎಂದು ಬೇಸರದಿಂದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪೋಸ್ಟ್ ಒಂದನ್ನು ಹಾಕಿದ್ದರು.
ಇವರ ಈ ಪೋಸ್ಟ್ ಮತ್ತೊಬ್ಬ ಟ್ರಾವೆಲ್ ವ್ಲಾಗರ್, ಯೂಟ್ಯೂಬರ್ ಲೋಹಿತ್ ಎಂಬಾತನ ವಿರುದ್ಧ ಆಗಿತ್ತು. ಡಾ ಬ್ರೋ ಪೋಸ್ಟ್ ನೋಡಿ ಹಲವರು ಅವರ ಬೆಂಬಲಕ್ಕೆ ಧಾವಿಸಿದರು. ಲೋಹಿತ್ ವಿರುದ್ಧ ಟೀಕೆಗಳನ್ನು ಮಾಡಿದರು. ಕೊನೆಗೂ ತನ್ನ ತಪ್ಪಿನ ಅರಿವು ಮಾಡಿಕೊಂಡಿರುವ ಲೋಹಿತ್ ಕ್ಷಮೆ ಕೇಳಿದ್ದಾರೆ.

ಘಟನೆ ಏನು?
ಡಾ ಬ್ರೋ ವ್ಲಾಗಿಂಗ್‌ಗಾಗಿ ತಾಂಜಾನಿಯಾ ದೇಶದ ಪ್ರವಾಸಕ್ಕೆ ಹೋಗಿದ್ದಾಗ ಅವರಿಗೆ ಮೆಸೇಜ್ ಮಾಡಿರುವ 'ಲೋಹಿತ್ ಕನ್ನಡ ಟ್ರಾವೆಲರ್' ನೀವು ತಾಂಜಾನಿಯಾದ ಹಾಡ್ಜಬಿ ಬುಡಕಟ್ಟು ಜನಾಂಗದವರ ವಿಡಿಯೋ ಮಾಡ್ತೀರಾ? ಎಂದು ಕೇಳಿದ್ದಾರೆ. ಅದಕ್ಕೆ ಡಾ ಬ್ರೋ ಹೌದು, ನಾನಾಗಲೇ ಅವರ ಬಗ್ಗೆ ಅಧ್ಯಯನ ಮಾಡಿದ್ದೇನೆ ಭಾನುವಾರ ವಿಡಿಯೋ ಶೂಟ್ ಮಾಡ್ತೀನಿ ಎಂದಿದ್ದಾರೆ. ಅಂತೆಯೇ ಶೂಟ್ ಸಹ ಮಾಡಿದ್ದಾರೆ. ಆದರೆ ಈ ಲೋಹಿತ್ ಕನ್ನಡ ಟ್ರಾವೆಲರ್ ಕೂಡಲೇ ತಾಂಜಾನಿಯಾಗೆ ಹೋಗಿ ಅಲ್ಲಿ ಹಾಡ್ಜಬಿ ಬುಡಕಟ್ಟು ಜನರೊಟ್ಟಿಗೆ ವಿಡಿಯೋ ಮಾಡಿ ಅದನ್ನು ಅಪ್‌ಲೊಡ್ ಮಾಡಿಬಿಟ್ಟಿದ್ದಾರೆ. ಇದು ಡಾ ಬ್ರೋಗೆ ಬೇಸರಕ್ಕೆ ಕಾರಣವಾಗಿತ್ತು.

ಕ್ಷಮೆ ಕೇಳಿದ ವ್ಲಾಗರ್ ಲೋಹಿತ್
ಇದೀಗ ಕ್ಷಮೆ ಕೇಳಿರುವ ಲೋಹಿತ್, ''ನಿಮಗೆ ತೊಂದರೆ ಕೊಡುವ ಉದ್ದೇಶವನ್ನು ಹೊಂದಿರಲಿಲ್ಲ, ನೀವು ಅಲ್ಲಿಗೆ ಹೋಗುತ್ತೀರಾ ಎಂದು ನಾನು ನಿಮ್ಮನ್ನು ಕೇಳಿ ಆಗಲೇ ಒಂದು ವಾರವಾಗಿತ್ತು. ನೀವು ಅದರ ಬಗ್ಗೆ ಯಾವುದೇ ವೀಡಿಯೊವನ್ನು ಅಪ್‌ಲೋಡ್ ಮಾಡಿಲ್ಲ. ನೀವು ಅಲ್ಲಿಗೆ ಹೋಗಿಲ್ಲ ಎಂದು ನಾನು ಭಾವಿಸಿದೆ, ಹಾಗಾಗಿ ನಾನು ಹೋಗಿ ಚಿತ್ರೀಕರಿಸಿ ಅಪ್‌ಲೋಡ್ ಮಾಡಿದ್ದೇನೆ ಏಕೆಂದರೆ ಅದು ಉತ್ತಮ ವಿಷಯವಾಗಿದೆ. ಆ ಬುಡಕಟ್ಟಿನ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದೆ. ಅಂತಹ ಆಸಕ್ತಿದಾಯಕ ಸ್ಥಳವನ್ನು ಜನರಿಗೆ ತೋರಿಸುವುದು ನನಗೆ ಇಷ್ಟ. ಹಾಗಾಗಿ ನಾನು ತಾಂಜಾನಿಯಾಗೆ ಹೋಗಿ ವಿಡಿಯೋ ಶೂಟ್ ಮಾಡಿ ಅಪ್‌ಲೋಡ್ ಮಾಡಿದೆ'' ಎಂದಿದ್ದಾರೆ.

ನೀವೇ ನನಗೆ ಸ್ಪೂರ್ತಿ: ಲೋಹಿತ್
ಮುಂದುವರೆದು, ''ನೀವು ಆ ದೇಶದಲ್ಲಿದ್ದರೆ ನಾನು ಆ ದೇಶಕ್ಕೆ ಬರಬಾರದು ಎಂದು ನನಗೆ ತಿಳಿದಿರಲಿಲ್ಲ. ನಾನು ನಿಮ್ಮನ್ನು ಸಹಾಯಕ್ಕಾಗಿ ಅಥವಾ ವಿವರಗಳಿಗಾಗಿ ಕೇಳಲಿಲ್ಲ. ನೀವು ಅಲ್ಲಿಗೆ ಹೋಗುತ್ತೀರಾ ಎಂದು ನಾನು ಕೇಳಿದೆ ಅಷ್ಟೆ. ಆ ಒಂದು ವಿಡಿಯೋ ನಿಮಗೆ ತುಂಬಾ ತೊಂದರೆ ಕೊಡುತ್ತಿದ್ದರೆ. ನನ್ನನು ಕ್ಷಮಿಸಿ, ನಾನು ನಿಮಗೆ ಹೇಳಿದ ಹಾಗೆ ನೀನೇ ನನ್ನ ಸ್ಫೂರ್ತಿ, ನಾನು ನಿಮ್ಮನ್ನು ತುಂಬಾ ಮೆಚ್ಚುತ್ತೇನೆ. ನನ್ನ ಕನಸಿನಲ್ಲಿಯೂ ನಾನು ನಿಮಗೆ ತೊಂದರೆ ಕೊಡಲು ಪ್ರಯತ್ನಿಸುವುದಿಲ್ಲ, ನೀವು ಪ್ರತಿಯೊಬ್ಬ ಕನ್ನಡಿಗನಿಗೆ ಮಾದರಿ, ನೀವು ಅರ್ಥಮಾಡಿಕೊಳ್ಳುವಿರಿ ಎಂದು ಭಾವಿಸುತ್ತೇವೆ. ದಯವಿಟ್ಟು ಕ್ಷಮಿಸಿ ಬ್ರೋ'' ಎಂದಿದ್ದಾರೆ ಲೋಹಿತ್ ಕುಮಾರ್.