For Quick Alerts
ALLOW NOTIFICATIONS  
For Daily Alerts

  ಬಸ್ ದುರಂತ: ಪವರ್ ಸ್ಟಾರ್ ಸಂಘದ ಅಧ್ಯಕ್ಷ ಮರಣ

  By ಜೇಮ್ಸ್ ಮಾರ್ಟಿನ್
  |

  ಆಂಧ್ರಪ್ರದೇಶ ಮೆಹಬೂಬ್ ನಗರ ಜಿಲ್ಲೆಯ ಪಲ್ಲಂ ಗ್ರಾಮದ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದ ದಾರುಣ ಘಟನೆ ಎಲ್ಲರ ಮನ ಕಲುಕಿದೆ. ಜಬ್ಬಾರ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿರುವ ವೋಲ್ವೋ ಬಸ್ಸಿನಲ್ಲಿ 51 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಡ್ರೈವರ್, ಕ್ಲೀನರ್ ಮತ್ತು ನಾಲ್ಕಾರು ಪ್ರಯಾಣಿಕರು ಮಾತ್ರ ಹೊತ್ತಿ ಉರಿಯುತ್ತಿದ್ದ ಬಸ್ಸಿನಿಂದ ಪಾರಾಗಿದ್ದಾರೆ. ತೀವ್ರವಾಗಿ ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  ಈ ದುರಂತದಲ್ಲಿ ತೆಲುಗಿನ ಪವರ್ ಸ್ಟಾರ್ ಅಭಿಮಾನಿ ಸಂಘಗಳ ಅಧ್ಯಕ್ಷ ಹಾಗೂ ಆತನ ಸೋದರಿ ಕೂಡಾ ಸಾವನ್ನಪ್ಪಿದ್ದು, ಮೃತರ ಮರಣಕ್ಕೆ ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಕುಟುಂಬದವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

  ಬೆಂಗಳೂರಿನ ಕಲಾಸಿಪಾಳ್ಯದ ಕೋಟೆ ನಿವಾಸಿಗಳಾದ ವೆಂಕಟೇಶ್ ಹಾಗೂ ಅವರ ಸೋದರಿ ಅನಿತಾ ಅವರು ಖಾಸಗಿ ಕಾರ್ಯನಿಮಿತ್ತ ಬೆಂಗಳೂರಿನಿಂದ ಹೈದರಾಬಾದಿಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

  ಮೆಗಾ ಫ್ಯಾಮಿಲಿ ಪರವಾಗಿ ಪಿಆರ್ಒ ಎಸ್ಕೆಎನ್ ಅವರು ತಮ್ಮ ಟ್ವಿಟ್ಟರ್ ಪುಟದಲ್ಲಿ ಕರ್ನಾಟಕದ ಮೆಗಾ ಫ್ಯಾನ್ಸ್ ಆಸೋಸಿಯೇಷನ್ ಅಧ್ಯಕ್ಷ ಕೊಟ್ಟೆ ವೆಂಕಟೇಶ್ ಯಾದವ್ ಹಾಗೂ ಅವರ ಸೋದರಿ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

  "Almost 40 passengers burnt alive :( terrible, Overtake & over speed caused the accident. These Luxury buses R drive lyk there is no 2morrow." ಎಂದು ಟ್ವೀಟ್ ಮಾಡಿದ್ದಾರೆ.

  ಜತೆಗೆ ಪವನ್ ಕಲ್ಯಾಣ್ ಅವರ ಜತೆ ವೆಂಕಟೇಶ್ ಇರುವ ಚಿತ್ರವನ್ನು ಪೋಸ್ಟ್ ಮಾಡಿ ಕರ್ನಾಟಕ ಮೆಗಾ ಫ್ಯಾನ್ಸ್ ಸಂಘದ ಅಧ್ಯಕ್ಷ ವೆಂಕಟೇಶ್ ಅವರು ವೋಲ್ವೊ ಬಸ್ ದುರಂತದಲ್ಲಿ ಸಾವನ್ನಪ್ಪಿರುವ ಸುದ್ದಿ ಕೇಳಿ ಪವರ್ ಸ್ಟಾರ್ ಅವರು ತೀವ್ರ ವೇದನೆ ವ್ಯಕ್ತಪಡಿಸಿದ್ದಾರೆ. ವೆಂಕಟೇಶ್ vry vry sad :( RIP ಎಂದು ಪಿ ಆರ್ ಒ ಸಂದೇಶ ಹಾಕಿದ್ದಾರೆ.

  ಕರ್ನಾಟಕದ ಮೆಗಾ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಸಾವಿನ ಸುದ್ದಿಯನ್ನು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಅಧಿಕೃತ ಫೇಸ್ ಬುಕ್ ಪುಟದಲ್ಲಿ ದೃಢಪಡಿಸಲಾಗಿದೆ.

  "Venkatesh #RIP Kotte Venkatesh yadav garu(Akila karnataka Chiranjeevi Fans President)&His sister who died in Today's bus accident at MBNagar..Hes a Nice Gentleman&Great mega fan- Miss U anna." ಎಂದು ಬರೆಯಲಾಗಿದ್ದು, ಮೆಗಾ ಫ್ಯಾಮಿಲಿ ಸಂತಾಪ ಸಂದೇಶವನ್ನು ಹಾಕಲಾಗಿದ್ದು, ವೆಂಕಟೇಶ್ ಅವರ ಗೆಳೆಯರು ಬಂಧು ಮಿತ್ರರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

  English summary
  A private Volvo bus belonging to Jabbar Travels, which was going from Bangalore to Hyderabad, caught fire at Kothakota in Mahaboobnagar district. More than 40 passengers were reportedly burnt alive. The two of the unfortunate passengers were Kotte Venkatesh Yadav, the president of Karnataka Mega Fans Association, and his sister. The shocked Mega family has offered condolences to his family.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more