For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಬಾಧಿತರಿಗೆ ಬಂಪರ್ ಆಫರ್ ಕೊಟ್ಟ ಪೋರ್ನ್ ವೆಬ್‌ಸೈಟ್

  |

  ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಒಬ್ಬೊಬ್ಬರು ಒಂದೊಂದು ರೀತಿಯ ಸಹಾಯಗಳನ್ನು ಮಾಡುತ್ತಿದ್ದಾರೆ.

  ವಿಶ್ವದಾದ್ಯಂತ ಬಹುತೇಕ ಎಲ್ಲಾ ರಾಷ್ಟ್ರಗಳು ಕೊರೊನಾ ವಿರುದ್ಧ ಹೊರಾಡುತ್ತಿದ್ದು, ಆಯಾ ದೇಶಗಳ ಉದ್ದಿಮೆಗಳು ಸರ್ಕಾರಗಳಿಗೆ, ಕೊರೊನಾ ಪೀಡಿತರಿಗೆ ನೆರವಿನ ಹಸ್ತ ಚಾಚುತ್ತಿವೆ.

  ಕೆಲವೆಡೆ ಹೋಟೆಲ್ ಉದ್ದಿಮೆಗಳು ತಮ್ಮ ಹೋಟೆಲ್‌ಗಳನ್ನು ಕೊರೊನಾ ಪೀಡಿತರಿಗಾಗಿ ಉಚಿತವಾಗಿ ಬಿಟ್ಟುಕೊಟ್ಟಿದ್ದರೆ, ಕೆಲವೆಡೆ ಮೋಟಾರು ಉದ್ಯಮದವರು ವೈದ್ಯರ, ರೋಗಿಗಳ, ಕೊರೊನಾ ಶಂಕಿತರ ಸಾಗಾಟಕ್ಕೆ ಉಚಿತವಾಗಿ ವಾಹನ ಒದಗಿಸಿವೆ.

  ಈ ನಡುವೆ ವಿಚಿತ್ರವಾದ ಸಹಾಯವನ್ನು ಪೋರ್ನ್ ವೆಬ್‌ಸೈಟ್ ಒಂದು ಮಾಡಿದೆ. ಪೋರ್ನ್ ಹಬ್ ಎಂಬ ಖ್ಯಾತ ಅಶ್ಲೀಲ ವಿಡಿಯೋಗಳ ವೆಬ್‌ಸೈಟ್ ಸಹ ಕೊರೊನಾ ಬಾಧಿತರ ಸಹಾಯಕ್ಕೆ ಮುಂದಾಗಿದ್ದು, ಅದು ನೀಡಿರುವ ಸಹಾಯ ಮಾತ್ರ ವಿಚಿತ್ರವಾಗಿದೆ.

  ಉಚಿತವಾಗಿ ವಿಡಿಯೋ ನೀಡುತ್ತಿದೆ ಪೋರ್ನ್ ಹಬ್

  ಉಚಿತವಾಗಿ ವಿಡಿಯೋ ನೀಡುತ್ತಿದೆ ಪೋರ್ನ್ ಹಬ್

  ಕೊರೊನಾದಿಂದ ಬಾಧಿತವಾಗಿರುವ ದೇಶದ ಮಂದಿ ಪೋರ್ನ್ ಹಬ್‌ ನಲ್ಲಿನ ಪಾರ್ನ್ ವಿಡಿಯೋಗಳನ್ನು ಉಚಿತವಾಗಿ ನೋಡಬಹುದಾಗಿದೆ. ಹೀಗೊಂದು ಆಪರ್ ಅನ್ನು ಪಾರ್ನ್ ಹಬ್ ವೆಬ್‌ಸೈಟ್ ನೀಡಿದೆ.

  ಇಟಲಿ ದೇಶದ ಜನರಿಗೆ ಆಫರ್ ನೀಡಿರುವ ಪೋರ್ನ್ ಹಬ್

  ಇಟಲಿ ದೇಶದ ಜನರಿಗೆ ಆಫರ್ ನೀಡಿರುವ ಪೋರ್ನ್ ಹಬ್

  ಕೊರೊನಾ ದಿಂದ ತೀವ್ರ ಸಂಕಷ್ಟದಲ್ಲಿರುವ ಇಟಲಿ ದೇಶಕ್ಕೆ ಮಾತ್ರವೇ ಸದ್ಯ ಈ ಆಫರ್ ಲಭ್ಯವಿದೆ. ಪೋರ್ನ್ ಹಬ್ ವೆಬ್‌ಸೈಟ್‌ನಲ್ಲಿನ ಹಣ ಕೊಟ್ಟು ನೋಡಬೇಕಾದ ಕೆಲವು ಪ್ರೀಮಿಯಂ ವಿಡಿಯೋಗಳನ್ನು ಇಟಲಿಯ ಮಂದಿ ಉಚಿತವಾಗಿ ನೋಡಬಹುದಾಗಿದೆ. ಈ ಆಫರ್ ಒಂದು ತಿಂಗಳವರೆಗೆ ಮಾತ್ರ.

  ಇಟಲಿಯಲ್ಲಿ ಕೊರೊನಾ ಮರಣಮೃದಂಗ

  ಇಟಲಿಯಲ್ಲಿ ಕೊರೊನಾ ಮರಣಮೃದಂಗ

  ಇಟಲಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 97,676 ಆಗಿದ್ದು, 10,779 ಮಂದಿ (ಮಾರ್ಚ್ 30 ರ ವರೆಗೆ) ಸಾವನ್ನಪ್ಪಿದ್ದಾರೆ. ಇಟಲಿಯು ಅತಿ ಹೆಚ್ಚಿಗೆ ಕೊರೊನಾ ದಿಂದ ಬಾಧಿತವಾಗಿರುವ ಕಾರಣ ಪ್ರಸ್ತುತ ಈ ದೇಶಕ್ಕೆ ಮಾತ್ರವೇ ಪಾರ್ನ್ ಹಬ್ ತನ್ನ ಆಫರ್ ಅನ್ನು ಸೀಪಿತಗೊಳಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ದೇಶಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.

  ಪೋರ್ನ್ ವೆಬ್‌ಸೈಟ್ ಬೇಡಿಕೆ ಹೆಚ್ಚಳ

  ಪೋರ್ನ್ ವೆಬ್‌ಸೈಟ್ ಬೇಡಿಕೆ ಹೆಚ್ಚಳ

  ವಿಚಿತ್ರವೆಂದರೆ ಕೊರೊನಾ ಭೀತಿ ವಿಶ್ವಕ್ಕೆ ಆಕ್ರಮಿಸಿ ವಿಶ್ವದೆಲ್ಲೆಡೆ ಲಾಕ್‌ಡೌನ್ ಪ್ರಾರಂಭವಾದ ನಂತರ ಪೋರ್ನ್ ವೆಬ್‌ಸೈಟ್‌ ಗಳಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆಯಂತೆ.

  ಕೊರೊನಾ ನಡುವೆ ಇದನ್ನು ನೋಡುವರ್ಯಾರು?

  ಕೊರೊನಾ ನಡುವೆ ಇದನ್ನು ನೋಡುವರ್ಯಾರು?

  ಕೊರೊನಾ ಭೀತಿಯೇ ಮನದಲ್ಲಿ ಆವರಿಸಿಕೊಂಡಿರುವ ಹೊತ್ತಿನಲ್ಲಿ ಪಾರ್ನ್ ಹಬ್ ನೀಡುವ ಉಚಿತ ಪೋರ್ನ್ ವಿಡಿಯೋಗಳನ್ನು ಯಾರು ವೀಕ್ಷಿಸುತ್ತಾರೆ ಎಂಬುದು ಅನುಮಾನ.

  English summary
  Vulgar video website giving away free videos in its website to Italy people who were in corona scare now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X