»   » ಊಟಿಯ ಲವ್ಲಿ ವಾತಾವರಣದಲ್ಲಿ 'ಜೆಸ್ಸಿ' ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯ

ಊಟಿಯ ಲವ್ಲಿ ವಾತಾವರಣದಲ್ಲಿ 'ಜೆಸ್ಸಿ' ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಪುನೀತ್ ಅಭಿನಯಿಸಿದ್ದ 'ರಣವಿಕ್ರಮ' ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಕಂಡ ಮೇಲೆ ಇದೀಗ ಪವನ್ ಒಡೆಯರ್ 'ಜೆಸ್ಸಿ' ಕೈಯಲ್ಲಿ ಹಿಡಿದಿದ್ದಾರೆ. ಡೈರೆಕ್ಟರ್ ಸ್ಪೆಷಲ್ ಹುಡುಗ ಧನಂಜಯ್ ಹಾಗೂ ಪಾರುಲ್ ಯಾದವ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಜೆಸ್ಸಿ' ರೋಮ್ಯಾಂಟಿಕ್ ಚಿತ್ರ.

ಇದೀಗ 'ಜೆಸ್ಸಿ' ಚಿತ್ರತಂಡದಿಂದ ಖಾಸ್ ಖಬರ್ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ ಪವನ್ ಒಡೆಯರ್ 'ಜೆಸ್ಸಿ' ಚಿತ್ರ ಮೊದಲ ಹಂತದ ಶೂಟಿಂಗ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದೆಯಂತೆ.[ಪವನ್ ಒಡೆಯರ್ 'ಜೆಸ್ಸಿ' ಚಿತ್ರದ ಫಸ್ಟ್ ಲುಕ್ ಔಟ್]

ಊಟಿಯಲ್ಲಿ 'ಜೆಸ್ಸಿ' ಯ ಮೊದಲ ಭಾಗದ ಚಿತ್ರೀಕರಣ ಪ್ರಾರಂಭಿಸಿದ್ದು, ಇದೀಗ ಯಶಸ್ವಿಯಾಗಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿದೆ ಪವನ್ ಒಡೆಯರ್ ತಂಡ.

ಕ್ಯೂಟ್, ರೋಮ್ಯಾಂಟಿಕ್ ಕಥೆ ಹೊಂದಿರುವ 'ಜೆಸ್ಸಿ' ಚಿತ್ರದಲ್ಲಿ ಕ್ರಿಶ್ಚಿಯನ್ ಹುಡುಗ 'ಜೆಸ್ಸಿ' ಗೆ (ಧನಂಜಯ್) ಪ್ಯಾರ್ಗೆ ಆಗ್ಬುಟ್ಟೈತೆ ಹುಡುಗಿ ಪಾರುಲ್ ಯಾದವ್ ಮಿಸ್ ನಂದಿನಿಯಾಗಿ ಟಿಪಿಕಲ್ ಸಂಪ್ರದಾಯಸ್ಥ ಹುಡುಗಿಯಾಗಿ ಮಿಂಚಿದ್ದಾರೆ.[ಟೀಸರ್: ಪ್ರೇಮದ ಕಾಣಿಕೆ ಜೊತೆಗೆ ಬಂದ 'ಜೆಸ್ಸಿ']

ಧನಂಜಯ, ಪಾರುಲ್ ಯಾದವ್ ಹಾಗೂ ರಘುಮುಖರ್ಜಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ 'ಜೆಸ್ಸಿ' ತ್ರಿಕೋನ ಪ್ರೇಮಕಥೆಯಂತೆ ತೋರುತ್ತದೆ. ಚಿತ್ರದ ಮೊದಲನೇ ಭಾಗದ ಚಿತ್ರೀಕರಣ ಮುಕ್ತಾಯಗೊಳಿಸಿದ ಸಂಭ್ರಮವನ್ನು 'ಜೆಸ್ಸಿ' ಚಿತ್ರತಂಡ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಮುಂದೆ ಓದಿ...

ಪವನ್ ಒಡೆಯರ್ ಮತ್ತು 'ಜೆಸ್ಸಿ' ಫ್ಯಾಮಿಲಿ

'ಜೆಸ್ಸಿ' ಯ ಮೊದಲ ಭಾಗ ಮುಗಿಸಿದ ಸಂಭ್ರಮದಲ್ಲಿ ಪವನ್ ಒಡೆಯರ್ 'ಜೆಸ್ಸಿ' ಬಳಗ, ಧನಂಜಯ್, ಪಾರುಲ್ ಹಾಗೂ ರಘು ಮುಖರ್ಜಿ ಜೊತೆ ಕೆಲಸ ಮಾಡಿದ್ದು, ಸೂಪರ್ ಎಂದ ಪವನ್ ಒಡೆಯರ್

ಧನಂಜಯ್, ಪಾರುಲ್, ಒಡೆಯರ್ ಪೋಸ್

ಮೊದಲ ಹಂತದ ಚಿತ್ರೀಕರಣ ಸಾವಕಾಶವಾಗಿ ನಡೆಯಿತು. ಇನ್ನೂ ಫೋಟೋ ಸೆಷನ್ ಮಾಡೋಣ.

ಪಾರುಲ್ ಅಲಿಯಾಸ್ ನಂದಿನಿ ಸುಸ್ತೋ ಸುಸ್ತು

ಅಬ್ಬಾ!! ಶೂಟಿಂಗ್ ಮುಗಿಸಿ ಸುಸ್ತಾಗಿದೆ ಸ್ವಲ್ಪ ರೆಸ್ಟ್ ಮಾಡೋಣ ಅಂತ ಹಾಗೆ ಕಣ್ಣು ಮುಚ್ಚಿದ್ದು. ಸೈಲೆನ್ಸ್ ಪ್ಲೀಸ್.

ಪಾರುಲ್ ಯಾದವ್, ಜೊತೆ ರೀಲ್ ಅಪ್ಪ

ಶೂಟಿಂಗ್ ಸ್ಪಾಟ್ ನಲ್ಲಿ 'ಜೆಸ್ಸಿ' ಅಂತ ಕೈ ಹಿಡಿದು ಬರೆಸುತ್ತಿರುವ ಪಾರುಲ್ ಅಲಿಯಾಸ್ ನಂದಿನಿ ರೀಲ್ ಅಪ್ಪಾ

'ಜೆಸ್ಸಿ' ಫ್ಯಾಮಿಲಿ ಜೊತೆ ರಾತ್ರಿ ಊಟ

ಅಬ್ಬಾ ಅಂತೂ ಇಂತೂ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಇದೀಗ ಊಟದ ಸರದಿ. ವಾವ್! ವಿಧ ವಿಧದ ಭೋಜನ ಕಾದಿದೆ, ಯಾವುದು ಫಸ್ಟ್ ಯಾವುದು ನೆಕ್ಟ್!!

ಹೋ!! ಫಸ್ಟ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್

ಊಟಿಯ ಲವ್ಲಿ ವಾತಾವರಣದಲ್ಲಿ 'ಜೆಸ್ಸಿ' ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯ. ಊಟಿಯ ತಂಪಾದ ವಾತಾವರಣ ರೋಮ್ಯಾಂಟಿಕ್ ಸೀನ್ ಗಳಿಗೆ ಹೇಳಿ ಮಾಡಿಸಿದ ಜಾಗ.

English summary
Kannada movie 'Jessie' completed its first schedule shooting in Ooty. Kannada actor Dhananjaya, kannada actor Raghu Mukherjee, kannada actress Parul Yadav in the lead role. The movie is Directed by Pawan Wadeyar of 'Rana Vikrama' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada