For Quick Alerts
  ALLOW NOTIFICATIONS  
  For Daily Alerts

  ಪೂಜಾಗಾಂಧಿ ತಂದೆ ಪವನ್ ಗಾಂಧಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

  By Naveen
  |

  ನಟಿ ಪೂಜಾ ಗಾಂಧಿ ಅವರ ತಂದೆ ಪವನ್‌ ಗಾಂಧಿ ವಿರುದ್ಧ ಚೆಕ್‌ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಪವನ್ ಗಾಂಧಿ ವಿರುದ್ಧ ಬೆಂಗಳೂರಿನ 27ನೇ ಎಸಿಎಂಎಂ ಕೋರ್ಟ್ ನಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಗುರುವಾರದಂದು ಪವನ್‌ ಗಾಂಧಿಯನ್ನು ಬಂಧಿಸಿ ಕರೆತರುವಂತೆ ವಾರೆಂಟ್ ಜಾರಿಗೊಳಿಸಿದೆ.

  ಎಲ್ಲಿ ಹೋದರು ಪೂಜಾ ಗಾಂಧಿ ಸಹೋದರಿ ರಾಧಿಕಾ ಗಾಂಧಿ.?

  ಆದೀಶ್ವರ್ ಎಲೆಕ್ಟ್ರಾನಿಕ್‌ ಶೋರೊಂಗೆ ಭೇಟಿ ನೀಡಿದ್ದ ಪವನ್‌, ಉಡುಗೊರೆಯ ವಸ್ತುಗಳನ್ನು ಖರೀದಿಸಿ 8 ಲಕ್ಷ ಮೌಲ್ಯದ ಚೆಕ್‌ನ್ನು ನೀಡಿದ್ದರು. ಆದರೆ ಬ್ಯಾಂಕ್‌ ಅಕೌಂಟ್ ನಲ್ಲಿ ಹಣವಿಲ್ಲದ ಕಾರಣದಿಂದಾಗಿ ಚೆಕ್‌ ಬೌನ್ಸ್ ಆಗಿತ್ತು. ಈ ಬಗ್ಗೆ ಪ್ರಶ್ನಿಸಲು ಆದೀಶ್ವರ್ ಶೋರೂಂನ ಸಿಬ್ಬಂದಿ ಪವನ್‌ ಗಾಂಧಿಗೆ ಫೋನ್‌ ಮಾಡಿದ್ದಾರೆ. ಆದರೆ, ಪೂಜಾಗಾಂಧಿ ಮನೆಯವರು ಕರೆ ಸ್ವೀಕರಿಸಿಲ್ಲ.

  ಜೊತೆಗೆ ಬನಶಂಕರಿಯ ಅಪಾರ್ಟ್ ಮೆಂಟ್‌ ಬಳಿ ವಿಚಾರಿಸಿದಾಗ, ಪವನ್‌ಗಾಂಧಿ ಮೂರು ತಿಂಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇದಾದ ಬಳಿಕ, ಅನಿವಾರ್ಯವಾಗಿ ಶೋರೂಂ ಆಡಳಿತ ಮಂಡಳಿಯು ಕೋರ್ಟ್‌ಮೊರೆ ಹೋಗಿದೆ.

  ಪ್ರಕರಣ ದಾಖಲಿಸಿಕೊಂಡಿದ್ದ ಮಹಾಲಕ್ಷ್ಮಿ ಲೇಔಟ್‌ ಪೊಲೀಸರು ಮೂರು ಬಾರಿ ವಾರೆಂಟ್ ಹಿಡಿದು, ಬನಶಂಕರಿಯ ಅಪಾರ್ಟ್ಮೆಂಟ್ ಗೆ ಹೋಗಿ ಬಂದಿದ್ದಾರೆ. ಈಗ ಕೋರ್ಟ್ ಆದೇಶದಂತೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪವನ್ ಗಾಂಧಿ ಅವರು ಸಂಸಾರ ಸಮೇತ ಮುಂಬೈಗೆ ಶಿಫ್ಟ್ ಆಗಿರುವ ಸಾಧ್ಯತೆ ಕಂಡು ಬಂದಿದೆ.

  English summary
  Bengaluru City Civil court has issued a warrant against Kannada film actor Pooja Gandhi's father Pawan Gandhi in connection with a cheque bounce case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X