»   » 'ರನ್ನ'ನ ಅತ್ತೆ ಮಧು ರಿಚ್ ಲುಕ್ ವಿಡಿಯೋ ಔಟ್

'ರನ್ನ'ನ ಅತ್ತೆ ಮಧು ರಿಚ್ ಲುಕ್ ವಿಡಿಯೋ ಔಟ್

Posted By:
Subscribe to Filmibeat Kannada

''ಬೊಂಬೆ ಬೊಂಬೆ..'' ಅಂತ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಮುದ್ದಾಡಿದ ದಂತದ ಗೊಂಬೆ ನಟಿ ಮಧು. ಅಂದು 'ಅಣ್ಣಯ್ಯ' ಚಿತ್ರದಲ್ಲಿ ಖಡಕ್ ಸೊಸೆಯಾಗಿ ಅತ್ತೆಗೆ ಬೆವರಿಳಿಸಿದ್ದ ಮಧು, ಇದೀಗ ವರ್ಷಗಳ ನಂತ್ರ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಅದು ಗಯ್ಯಾಳಿ ಅತ್ತೆಯಾಗಿ.

ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್ ಆಗಿರುವ 'ರನ್ನ' ಚಿತ್ರದಲ್ಲಿ ಸುದೀಪ್ ಗೆ ಸೋದರತ್ತೆ ಪಾತ್ರ ನಿರ್ವಹಿಸುತ್ತಿದ್ದಾರೆ ಮಧು. ಸದ್ದಿಲ್ಲದೇ 'ರನ್ನ' ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇಲ್ಲಿಯವರೆಗೂ ಸುದೀಪ್ ರ ರಿಚ್ ಲುಕ್ ಹೊರಬಿಟ್ಟಿತ್ತೇ ಹೊರತು, ಪ್ರಮುಖ ಪಾತ್ರದಲ್ಲಿರುವ ಮಧು ಈಗ ಹೇಗಿದ್ದಾರೆ ಅಂತ ಕನ್ನಡ ಪ್ರೇಕ್ಷಕರಿಗೆ ದರ್ಶನ ಮಾಡಿಸಿರಲಿಲ್ಲ.


ಇದೀಗ ಔಟ್ ಆಗಿರುವ 'ರನ್ನ' ಮೇಕಿಂಗ್ ವಿಡಿಯೋದಲ್ಲಿ ಸುರಸುಂದರಿ ಮಧು ಕಾಣಿಸಿಕೊಂಡಿದ್ದಾರೆ. ರೇಷ್ಮೆ ಸೀರೆ, ಮೈತುಂಬಾ ಒಡವೆಗಳನ್ನ ತೊಟ್ಟು ಮಧು ಕಂಗೊಳಿಸಿದ್ದಾರೆ. [ಸುದೀಪ್ ಸೋದರತ್ತೆಯಾಗಿ 'ಬೊಂಬೆ' ರೀ ಎಂಟ್ರಿ]


Watch Actress Madhoo

ಹಾಗೆನೋಡಿದ್ರೆ, 'ಅಣ್ಣಯ್ಯ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಂದಿನ ಮಧುಗೂ, ಇಲ್ಲಿನ ಮಧುಗೂ ಯಾವುದೇ ವ್ಯತ್ಯಾಸ ಇಲ್ಲ. 22 ವರ್ಷಗಳ ಹಿಂದೆ ಮಧು ಹೇಗಿದ್ದರೋ, ಈಗಲೂ ಹಾಗೇ 'ರನ್ನ' ಚಿತ್ರದಲ್ಲಿ ಕಾಣ್ತಾರೆ. ಅದಕ್ಕೆಲ್ಲಾ ಕಾರಣ ಅವರ ಫಿಟ್ನೆಸ್ ಮಂತ್ರ.


ಪ್ರತಿ ದಿನ ಜಿಮ್ ನಲ್ಲಿ ವರ್ಕೌಟ್ ಮಾಡುವ ಮಧು, 'ರನ್ನ' ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲೂ ನಟಿ ಹರಿಪ್ರಿಯಾ ಜೊತೆ ವರ್ಕೌಟ್ ಮಾಡುತ್ತಿರುವ ಫೋಟೋ ರಿಲೀಸ್ ಆಗಿದೆ. 'ರನ್ನ' ಚಿತ್ರದಲ್ಲಿ ಸಖತ್ ಪಾಷ್ ಆಗಿ ಕಾಣುವ ಮಧು, ಫ್ರೇಮ್ ಟು ಫ್ರೇಮ್ ನಲ್ಲಿ ಕಣ್ಮನ ಸೆಳೆಯುವುದು ಖಂಡಿತ. [ರೋಜಾ ಖ್ಯಾತಿಯ ಮಧು ಸೆಕೆಂಡ್ ಇನ್ನಿಂಗ್ಸ್]


Watch Actress Madhoo

ಈಗ ರಿಲೀಸ್ ಆಗಿರುವ ಮೇಕಿಂಗ್ ವಿಡಿಯೋ ನೋಡಿದ್ರೆ, ಟಾಲಿವುಡ್ ರೇಂಜಿಗೆ 'ರನ್ನ' ರಿಚ್ ಆಗಿ ರೆಡಿಯಾಗಿದೆ. ಸದ್ಯಕ್ಕೆ ಬ್ಯಾಂಕಾಕ್ ಗೆ ಹಾರಿರುವ ಚಿತ್ರತಂಡ ಸಾಂಗ್ ಶೂಟ್ ಮುಗಿಸುಕೊಂಡು ವಾಪಸ್ ಬಂದ್ರೆ, ಮುಂದಿನ ತಿಂಗಳು 'ರನ್ನ' ನಿಮ್ಮೆಲ್ಲರ ಮುಂದೆ ಬರುತ್ತಾನೆ. (ಫಿಲ್ಮಿಬೀಟ್ ಕನ್ನಡ)

English summary
Multilingual Actress Madhoo has made her comeback to Kannada movies with Kiccha Sudeep starrer 'Ranna'. Madhu's Posh look in the movie Ranna is out. Watch the making video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada