»   » ಶ್ರುತಿ ಹಾಸನ್ ಡಾನ್ಸ್ ಪ್ರಾಕ್ಟೀಸ್ ವಿಡಿಯೋ ಬಹಿರಂಗ

ಶ್ರುತಿ ಹಾಸನ್ ಡಾನ್ಸ್ ಪ್ರಾಕ್ಟೀಸ್ ವಿಡಿಯೋ ಬಹಿರಂಗ

By: ರವಿಕಿಶೋರ್
Subscribe to Filmibeat Kannada

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಅಪ್ಪನಂತೆಯೇ ಬಹುಮುಖಿ ಪ್ರತಿಭೆ. ಇನ್ನು ಬೆಸ್ಟ್ ಡಾನ್ಸರ್ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ವಿಡಿಯೋ ಒಂದು ಬಹಿರಂಗವಾಗಿದ್ದು ಇದೀಗ ಯೂಟ್ಯೂಬ್ ನಲ್ಲಿ ಅವರ ಅಭಿಮಾನಿಗಳೂ ಮುಗಿಬಿದ್ದು ನೋಡುವಂತಾಗಿದೆ.

ತೆಲುಗು, ತಮಿಳಿನ ಸೂಪರ್ ಹಿಟ್ ಹಾಡುಗಳಿಗೆ ಅವರು ಹೆಜ್ಜೆ ಹಾಕಿರುವುದು ಎಲ್ಲರ ಆಕರ್ಷಣೆಗೆ ಪಾತ್ರವಾಗಿದೆ. ಈ ವಿಡಿಯೋ ಬಿಡುಗಡೆಯಾಗಿ ಬಹಳ ದಿನಗಳಾಗಿವೆ. ಆದರೆ ಈಗ ಅಭಿಮಾನಿಗಳು ಮುಗಿಬಿದ್ದು ನೋಡುತ್ತಿರುವುದು ವಿಶೇಷ. ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಶೇರ್ ಆಗುತ್ತಾ ವೈರಲ್ ಆಗಿದೆ. [ಶ್ರುತಿ ಹಾಸನ್ ಉಡುಪು ನೋಡಿರೋ ಅಯ್ಯಯ್ಯೋ]

Watch actress Shruti Haasan dance rehearsal video

ದಕ್ಷಿಣದ ಜನಪ್ರಿಯ ತಾರೆಗಳಲ್ಲಿ ಶ್ರುತಿ ಹಾಸನ್ ಸಹ ಒಬ್ಬರು. "ಸೋಲು ಗೆಲುವಿನ ಬಗ್ಗೆ ಮಾತನಾಡುವುದು, ಅವುಗಳ ಬಗ್ಗೆ ಪದೇ ಪದೇ ಚರ್ಚಿಸುವುದು ನನಗೆ ಸುತಾರಾಂ ಇಷ್ಟವಿಲ್ಲ. ಫಲಿತಾಂಶ ಏನೇ ಇರಲಿ ಅದು ಮನಸ್ಸಿನಲ್ಲಿ ಸ್ವಲ್ಪ ಸಮಯವಷ್ಟೇ ಇರುವುದು ಒಳಿತು" ಎನ್ನುತ್ತಾರೆ ಶ್ರುತಿ.

"ನಾಲ್ಕು ಜನ ನಡೆಯುವ ಹಾದಿಯಲ್ಲಿ ನಾನೂ ಹೆಜ್ಜೆ ಹಾಕುವುದು ನನಗಿಷ್ಟವಿಲ್ಲ. ನನ್ನ ಈ ಗುಣವೇ ನನ್ನನ್ನು ವಿಶೇಷವಾಗಿ ನೋಡುವಂತೆ ಮಾಡಿದೆ. ಯಾವುದೇ ಸಿನಿಮಾ ಒಂದರ ಸೋಲು ಗೆಲುವು ಇಡೀ ಚಿತ್ರತಂಡಕ್ಕೆ ಸಲ್ಲುತ್ತದೆ. ವಿಚಿತ್ರವೇನೆಂದರೆ ಚಿತ್ರವೊಂದರ ಸೋಲು ಗೆಲುವನ್ನು ಹೀರೋ, ಹೀರೋಯಿನ್ ಗೆ ಸೀಮಿತ ಮಾಡಲಾಗುತ್ತಿದೆ".

"ನಾನಂತೂ ಸಿನಿಮಾ ಒಂದರ ಗೆಲುವನ್ನು ಎಲ್ಲರಿಗೂ ಹಂಚುತ್ತೇನೆ. ಅದೇ ರೀತಿ ಸೋಲನ್ನೂ ಅಷ್ಟೇ. ಏನು ಮಾಡಿದರೆ ಇನ್ನೇನಾಗುತ್ತದೋ ಎಂದು ಹೊಸ ಪ್ರಯೋಗಕ್ಕೆ ಹೆಚ್ಚಾಗಿ ಯಾರೂ ಕೈಹಾಕುವುದಿಲ್ಲ. ಆದರೆ ನಾನು ಮಾತ್ರ ಹೊಸಹೊಸ ಪ್ರಯೋಗಗಳಿಗೆ ಸದಾ ಸಿದ್ಧವಾಗಿರುತ್ತೇನೆ" ಎನ್ನುತ್ತಾರೆ ಶ್ರುತಿ ಹಾಸನ್.

English summary
A dance rehearsal video of actress Shruti Haasan shot while she was preparing for an event has gone viral now. The actress is the one of the best dancer also. Watch this video and hope you definately enjoy it!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada