»   » ಕಿರುಚಿತ್ರ: ಕತ್ತಲೆ ತುಂಬಿದ ಜಗಕ್ಕೆ, ಬೆಳಕು ಚೆಲ್ಲಲು ಹೊರಟಿರುವ 'ಆಗಂತುಕ'

ಕಿರುಚಿತ್ರ: ಕತ್ತಲೆ ತುಂಬಿದ ಜಗಕ್ಕೆ, ಬೆಳಕು ಚೆಲ್ಲಲು ಹೊರಟಿರುವ 'ಆಗಂತುಕ'

Posted By:
Subscribe to Filmibeat Kannada

ಹೊಸಬರು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಈ ಕಾಲದಲ್ಲಿ, ಯುವ ಪ್ರತಿಭೆಗಳು ಕಿರುಚಿತ್ರಗಳನ್ನು ಮಾಡುವ ಮೂಲಕ ತಾವು ಯಾರಿಗೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಿ ಕೊಡುತ್ತಿದ್ದಾರೆ.

ಅದಕ್ಕೆ ಒಂದು ಉತ್ತಮ ನಿದರ್ಶನ ಅಂದರೆ ಯುವಕರೇ ಸೇರಿಕೊಂಡು ಮಾಡಿರುವ 'ಆಗಂತುಕ' ಎಂಬ ಕಿರುಚಿತ್ರ. ದೀಪಾವಳಿ ಹಬ್ಬದ ಬಗ್ಗೆ ಹಾಗೂ ಚಿತ್ರದ ಕೊನೆಯಲ್ಲಿ ನಾಗರಿಕ ಸಮಾಜಕ್ಕೆ ಸಂದೇಶ ನೀಡುವ ಈ ಕಿರುಚಿತ್ರ ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

Watch 'Agantuka' Kannada Short Movie

ಭಯೋತ್ಪಾದನೆ, ಉಗ್ರಗಾಮಿಗಳ ಬಗ್ಗೆ ಆಧರಿಸಿದ 'ಆಗಂತುಕ' ಎಂಬ ಈ ಕಿರುಚಿತ್ರದಲ್ಲಿ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ನಿಮಗೆ ಹೇರಳವಾಗಿ ದೊರೆಯುತ್ತದೆ.

'ಜಗವ ತುಂಬಿದೀ ಕತ್ತಲೆಯ ಕಳೆಯಲೊಂದು ಬೆಳಕು ಸಾಕು!, ಬಗೆದು ನಿಜವನ್ನು ತಿಳಿಯಲಾಂತರ್ಯದೊಳಗೆ ಬೆಳಗಬೇಕು'..ಎಂಬ ಸಂದೇಶವನ್ನು ಸಾರುವ ಈ ಕಿರುಚಿತ್ರ ಎಲ್ಲರಿಗೂ ಇಷ್ಟವಾಗುವಂತಿದೆ.

Watch 'Agantuka' Kannada Short Movie

ಕ್ಯಾಮರ ವರ್ಕ್, ಸಂಕಲನ ಜೊತೆಗೆ ನಟ-ನಟಿಯರ ಅಭಿನಯ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪಾತ್ರವರ್ಗದಲ್ಲಿ ರಮ್ಯಾ ಆರ್ ವರ್ಣ, ಶ್ರವಣ್, ರಜತ್, ಭಾರದ್ವಾಜ್ ಡಿ.ಜೆ, ಸಂದೀಪ್ ಟಿ.ಸಿ, ಗೌತಮ್, ಸಿ.ವಿ ಶ್ರೀನಿವಾಸ್, ಸಿ.ಎಸ್ ಶ್ರೀಹರಿ, ಬೇಬಿ ಚಿನ್ಮಯಿ, ಮಾ.ನವನೀತ್ ಮುಂತಾದವರು ಪ್ರಮುಖ ಪಾತ್ರವರ್ಗದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಟೆರರಿಸಂ ಬಗ್ಗೆ ಇಡೀ ಮಾಧ್ಯಮಗಳು ಎಲ್ಲೆಡೆ ಸಾರುತ್ತಲೇ ಇರುತ್ತವೆ. ಇನ್ನು ಈ ಕಾನ್ಸೆಪ್ಟ್ ಇಟ್ಟುಕೊಂಡು ಯುವಕರು ಸೇರಿಕೊಂಡು ಮಾಡಿರುವ 'ಆಗಂತುಕ' ಎಲ್ಲರೂ ಕೆಟ್ಟವರಲ್ಲ, ಬದ್ಲಾಗಿ ಈ ಜಗದಲ್ಲಿ ಒಳ್ಳೆಯವರು ಕೂಡ ಇದ್ದಾರೆ. ಎಲ್ಲವನ್ನೂ ಕೆಟ್ಟದಾಗಿ ಯೋಚನೆ ಮಾಡಬೇಡಿ ಬದ್ಲಾಗಿ ಸ್ವಲ್ಪ ಒಳ್ಳೆಯ ರೀತಿಯಲ್ಲಿ ಯೋಚಿಸಿ ಎಂಬ ಸಂದೇಶವನ್ನು ಈ ಕಿರುಚಿತ್ರ ನೀಡುತ್ತದೆ.

ಯುವ ಪ್ರತಿಭೆ ಶ್ರವಣ್ ಅವರ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದಲ್ಲಿ ಮೂಡಿ ಬಂದಿರುವ 'ಆಗಂತುಕ' ಕಿರುಚಿತ್ರದ ವಿಡಿಯೋ ಇಲ್ಲಿದೆ ನೋಡಿ..

English summary
'Agantuka' is a suspense thriller Kannada Short Movie .The story happens to take place in and around deepavali and ends with a small message note .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada