»   » ಹೆಣ್ಮಕ್ಕಳ 'ರಿಂಗ್ ರೋಡ್' ನಲ್ಲಿ, ಈ ಸಖತ್ ಹಾಡು ಕೇಳ್ಕೊಂಡು ಬನ್ನಿ

ಹೆಣ್ಮಕ್ಕಳ 'ರಿಂಗ್ ರೋಡ್' ನಲ್ಲಿ, ಈ ಸಖತ್ ಹಾಡು ಕೇಳ್ಕೊಂಡು ಬನ್ನಿ

Posted By:
Subscribe to Filmibeat Kannada

ಹೆಂಗಳೆಯರ ಬದಲು ಬರೀ ಗಂಡಸರು ಮನೆಗೆಲಸ, ಮುಸುರೆ ತಿಕ್ಕೋದು, ಕಸ ಗುಡಿಸೋದು, ನೆಲ ಒರೆಸೋದು ಅಂತ ಹೆಂಗಸರ ಕೆಲಸವನ್ನು ಬರೀ ಗಂಡಸರು ಮಾಡುವಂತಿದ್ದರೆ,.. ಹೇಗಿರುತ್ತಿತ್ತು ಅಲ್ವಾ?.

ಆದರೆ ಈಗಿನ ಕಾಲದಲ್ಲಿ ಹೆಂಗಸರು ಎರಡು ಕೆಲಸಗಳನ್ನು ಮ್ಯಾನೇಜ್ ಮಾಡ್ತಾರೆ ಅಲ್ವಾ. ಆದರೆ ಕೆಲವೊಂದು ಕಡೆ ಹೆಂಗಳೆಯರ ಕೆಲಸವನ್ನು ಗಂಡಸರು ಮಾಡುವ ಅಪೂರ್ವ ಸಂಗತಿಗಳು ನಡೆಯುತ್ತವೆ ಅನ್ನೋದು ಅಚ್ಚರಿ ಪಡಬೇಕಾದ ಸಂಗತಿ ಅಲ್ಲ ಬಿಡಿ.[ಕೊಲೆಯ ರಹಸ್ಯ ಭೇದಿಸಿ ಹೊರಟ 'ರಿಂಗ್ ರೋಡ್']


Watch 'Ailesa', song from kannada movie 'Ring Road'

ಅಂದಹಾಗೆ ಇದೀಗ ನಾವ್ಯಾಕೆ ಈ ಪೀಠಿಕೆ ಹಾಕುತ್ತಿದ್ದೇವೆ ಅಂದ್ರೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಬರೀ ಹೆಣ್ಣು ಮಕ್ಕಳೇ ಸೇರಿಕೊಂಡು ಮಾಡಿರುವ ನಿಜ ಘಟನೆಯಾಧರಿತ ಮರ್ಡರ್-ಮಿಸ್ಟರಿ 'ರಿಂಗ್ ರೋಡ್' ಚಿತ್ರ ಸದ್ಯಕ್ಕೆ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡ್ತಾ ಇದೆ.


ಇನ್ನು ಚಿತ್ರದ ಸಖತ್ತಾಗಿರೋ "ಎಲೇಲೋ ಎಲೇಲೋ, ಊರ್ ಗೌಡಾನೇ ಮುಸುರೇನಾ ತಿಕ್ಕ್ ತ್ತವ್ನೆ, ಪಟೇಲ ಒಲೆನ ಹಚ್ಚ್ ತ್ತವ್ನೆ, ಶಾನ್ ಭೋಗಾನೇ ಸೀರೇನಾ ತೊಳಿತವ್ನೆ, ಚೇರ್ ಮೆನ್ ಮಸಾಲೆ ರುಬ್ಬುತವ್ನೆ, "ಕೇಳ್ರಪ್ಪೋ ಹುಡಿಗಿರೇ, ಎಲ್ಲರ್ನು ಕಟ್ಕೊಂಡು ಮಾಡ್ತೀನಿ ಡೈರೆಕ್ಷನ್ನು', ಅನ್ನೋ ಹಾಡಂತೂ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.


ಸಂಗೀತ ನಿರ್ದೇಶಕಿ ವಾಣಿ ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡಿರುವ ಸಖತ್ ಕಿಕ್ ಕೋಡೋ ವಿಶೇಷ ಹಾಡು ನೋಡಲು ಈ ವಿಡಿಯೋ ನೋಡಿ..ತುಂಬಾ ಅಡೆ-ತಡೆಗಳ ನಂತರ ಕೊನೆಗೂ ಬಿಡುಗಡೆಯ ಭಾಗ್ಯ ಪಡೆದುಕೊಂಡಿರುವ 'ರಿಂಗ್ ರೋಡ್' ಟ್ರೈಲರ್ ಮೂಲಕ ಪ್ರೇಕ್ಷಕರಲ್ಲಿ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಇದೀಗ ಚಿತ್ರದ ಹಾಡುಗಳು ಕೂಡ ತುಂಬಾ ಡಿಫರೆಂಟ್ ಆಗಿದ್ದು, ಸಿನಿಪ್ರಿಯರನ್ನು ಕಾತರದಿಂದ ಕಾಯುವಂತೆ ಮಾಡಿದೆ.[ಶುಭ ಅನ್ನಲ್ಲ, ಸುಮ ಇಲ್ಲ.! ಏನಿದ್ರು 'ರಿಂಗ್ ರೋಡ್' ಮಾತ್ರ]


ಕಥೆ-ಚಿತ್ರಕಥೆ-ಸಂಗೀತ-ನಿರ್ದೇಶನದಿಂದ ಹಿಡಿದು ಎಲ್ಲಾ ಕೆಲಸಗಳನ್ನು ಬರೀ ಹೆಣ್ಣು ಮಕ್ಕಳೇ ಸೇರಿಕೊಂಡು ಮಾಡಿರುವ ರಿಯಲ್ ಸ್ಟೋರಿ, ರೀಲ್ ಮೂಲಕ ನಾಳೆ (ಅಕ್ಟೋಬರ್ 22) ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸುತ್ತಿದೆ.


ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಆಕ್ಷನ್-ಕಟ್ ಹೇಳಿರುವ 'ರಿಂಗ್ ರೋಡ್' ನಲ್ಲಿ ದುನಿಯಾ ವಿಜಯ್ ಹಾಗೂ ನಿಖಿತಾ ತುಕ್ರಾಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಖುಷಿ, ಅವಿನಾಶ್ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದಾರೆ.

English summary
Watch 'Ailesa', song from Kannada Movie 'Ring Road', The movie features Kannada actor Duniya Vijay, Kannada Actress Nikita, Kannada Actress Khushie in the lead role. The movie is releasing on October 22nd, directed by Priya Belliyappa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada