»   » 'ಕೃಷ್ಣಲೀಲಾ' ಚಿತ್ರಕ್ಕೆ ಸ್ಪೂರ್ತಿ ನೀಡಿರುವ ನೈಜ ಕಥೆ ಯಾವುದು?

'ಕೃಷ್ಣಲೀಲಾ' ಚಿತ್ರಕ್ಕೆ ಸ್ಪೂರ್ತಿ ನೀಡಿರುವ ನೈಜ ಕಥೆ ಯಾವುದು?

Posted By:
Subscribe to Filmibeat Kannada

ನಟ ಅಜೇಯ್ ರಾವ್ ಮೊಟ್ಟ ಮೊದಲ ಬಾರಿಗೆ ನಿರ್ಮಾಣ ಮಾಡಿರುವ ಚಿತ್ರ 'ಕೃಷ್ಣಲೀಲಾ'. ಕಳೆದ ವರ್ಷ, ತಮ್ಮ ಹುಟ್ಟುಹಬ್ಬದಂದು 'ಕೃಷ್ಣಲೀಲಾ' ಚಿತ್ರಕ್ಕೆ ಚಾಲನೆ ನೀಡಿದ ಅಜೇಯ್ ರಾವ್, ಈ ವರ್ಷ ತಮ್ಮ ಜನ್ಮದಿನದಂದೇ 'ಕೃಷ್ಣಲೀಲಾ' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ರಿಲೀಸ್ ಮಾಡಿರುವ 'ಕೃಷ್ಣಲೀಲಾ' ಟ್ರೇಲರ್ ನ ನೀವು ಗಮನಿಸಿದ್ದರೆ, 2010 ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿರುವ ಚಿತ್ರ 'ಕೃಷ್ಣಲೀಲಾ' ಅಂತ ನಿರ್ದೇಶಕ ಶಶಾಂಕ್ ಗುಟ್ಟು ಬಿಟ್ಟುಕೊಟ್ಟಿದ್ದಾರೆ.


Krishna Leela Trailer

2010 ರಲ್ಲಿ ಎಲ್ಲಾ ಕನ್ನಡ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆದ ಸ್ಟೋರಿ 'ಕೃಷ್ಣಲೀಲಾ' ಚಿತ್ರದ ಕಥಾಹಂದರ. ಹಾಗಾದ್ರೆ, ಆ ಕಥೆ ಯಾವುದು ಅಂತ ಎಲ್ಲರೂ ತಲೆ ಕೆರೆದುಕೊಂಡರೂ, ಈವರೆಗೂ ಆ ನೈಜಕಥೆಯ ಚಿತ್ರಣವನ್ನ ಯಾರೂ ಊಹಿಸಿಲ್ಲ.


'ಕೃಷ್ಣಲೀಲಾ' ಚಿತ್ರದಲ್ಲಿ ಅಜೇಯ್ ರಾವ್ ರದ್ದು ಕ್ಯಾಬ್ ಡ್ರೈವರ್ ಪಾತ್ರ. ಇನ್ನೂ, ನಾಯಕಿ ಮಯೂರಿ, ಮಿಡ್ಲ್ ಕ್ಲಾಸ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಲವ್ವಿ-ಡವ್ವಿ ಮತ್ತು ಪೊಲೀಸ್ ಸ್ಟೇಷನ್ ಸನ್ನಿವೇಶಗಳನ್ನ ನೋಡಿದ್ರೆ ಇದು ಲವ್ ಸ್ಟೋರಿ ಅನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ. [ನಿರ್ಮಾಪಕ ಅಜೇಯ್ ರಾವ್ ಜೇಬು ಖಾಲಿ ಖಾಲಿ!]


Krishna Leela Trailer

ಹಾಗೆ, ಅಜೇಯ್ ಕ್ಯಾಬ್ ಡ್ರೈವರ್ ಪಾತ್ರ ನಿರ್ವಹಿಸಿರುವುದರಿಂದ ರಿಯಲ್ ಆಕ್ಸಿಡೆಂಟ್ ಅಥವಾ ರೇಪ್ ಸ್ಟೋರಿಯನ್ನ ನಿರ್ದೇಶಕ ಶಶಾಂಕ್ ಮಿಕ್ಸ್ ಮಾಡಿರುವ ಅನುಮಾನ ಕೂಡ ಮೂಡುತ್ತದೆ. ಹಾಗಾದ್ರೆ, 2010 ರಲ್ಲಿ ಬೆಂಗಳೂರನ್ನ ಬೆಚ್ಚಿಬೀಳಿಸಿದ ಅತ್ಯಾಚಾರ ಪ್ರಕರಣವೊಂದರ ಎಳೆ 'ಕೃಷ್ಣಲೀಲಾ' ಚಿತ್ರದಲ್ಲಿರಬಹುದಾ..? ಇಲ್ಲ, ಇದು ಬರೀ ಲವ್ ಕಿರಿಕ್ ಕಹಾನಿನಾ..? ಗೊತ್ತಿಲ್ಲ.!


ಈ ಪ್ರಶ್ನೆಗೆ ನಿರ್ದೇಶಕ ಶಶಾಂಕ್ ಉತ್ತರ ನೀಡಲಿಲ್ಲ. ''ಈಗಲೇ ಕಥೆ ಯಾವುದು ಅಂತ ಹೇಳಿದ್ರೆ, ಸಿನಿಮಾದಲ್ಲಿ ಸಸ್ಪೆನ್ಸ್ ಇರುವುದಿಲ್ಲ'' ಅಂತ ಹೇಳುತ್ತಾರೆ. ಟ್ರೇಲರ್ ನಲ್ಲೂ ಅಷ್ಟೇ ಸಸ್ಪೆನ್ಸ್ ಮೇನ್ಟೇನ್ ಮಾಡಿರುವ ಶಶಾಂಕ್ ಮುಂದಿನ ತಿಂಗಳ ಹೊತ್ತಿಗೆ ಚಿತ್ರವನ್ನ ತೆರೆಗೆ ತರಲಿದ್ದಾರೆ. [ಧ್ವನಿ ಸಾಂದ್ರಿಕೆ ವಿಮರ್ಶೆ: ಮಸ್ತ್ ಹಾಡುಗಳ ಗುಚ್ಛ 'ಕೃಷ್ಣಲೀಲಾ']


Krishna Leela Trailer

ಸೂಪರ್ ಹಾಡುಗಳಿಂದ ಈಗಾಗಲೇ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ 'ಕೃಷ್ಣಲೀಲಾ', ಈಗ 'ರಿಯಲ್ ಕಹಾನಿ'ಯಿಂದ ಎಲ್ಲರ ತಲೆಗೆ ಹುಳ ಬಿಟ್ಟಿದೆ. ಅದನ್ನೆಲ್ಲಾ ಕೊಂಚ ಪಕ್ಕಕ್ಕಿಟ್ಟು, ಸದ್ಯ ರಿಲೀಸ್ ಆಗಿರುವ ಟ್ರೇಲರ್ ನೋಡಿ ಆನಂದಿಸಿ. (ಫಿಲ್ಮಿಬೀಟ್ ಕನ್ನಡ)

English summary
Ajai Rao starrer Krishna Leela Trailer is out. The movie is said to be based on the Real-life incident which made Headlines in all Kannada News Channels in 2010.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada