»   » ಅಲೆ ಅಲೆಯಾಗಿ ತೇಲಿಬಂದ 'ಅಪೂರ್ವ' ದೃಶ್ಯ ಕಾವ್ಯ

ಅಲೆ ಅಲೆಯಾಗಿ ತೇಲಿಬಂದ 'ಅಪೂರ್ವ' ದೃಶ್ಯ ಕಾವ್ಯ

Posted By:
Subscribe to Filmibeat Kannada

61 ರ ಆಸುಪಾಸಿನ ನಾಯಕ ಮತ್ತು 19 ರ ತರುಣಿ ಮಧ್ಯೆ ನಡೆಯುವ ಅಪರೂಪದ ಪ್ರೇಮ ಕಾವ್ಯ ಈ 'ಅಪೂರ್ವ'. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ, ಸಂಗೀತ ನಿರ್ದೇಶಕನಾಗಿ ಕ್ರೇಜಿ ಸ್ಟಾರ್ ಮತ್ತೊಮ್ಮೆ ತೆರೆಗೆ ತರುತ್ತಿರುವ 'ಒನ್ ಮ್ಯಾನ್ ಶೋ' ಈ 'ಅಪೂರ್ವ'.

ಈಗಾಗಲೇ ಹಲವು ವಿಶೇಷತೆಗಳಿಂದ 'ಅಪೂರ್ವ' ಚಿತ್ರ ಅಭಿಮಾನಿಗಳ ಕಣ್ಣರಳಿಸಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ 'ಅಪೂರ್ವ' ಚಿತ್ರದ ಫಸ್ಟ್ ಲುಕ್ ಸ್ಟಿಲ್ ಗಳಲ್ಲಿ 'ಪ್ರೇಮಲೋಕ'ದ 'ರಣಧೀರ'ನ ಕಾವ್ಯಾತ್ಮಕ ರೂಪ ಅನಾವರಣವಾಗಿತ್ತು. [ರವಿಚಂದ್ರನ್ 'ಅಪೂರ್ವ' ದೃಶ್ಯಕಾವ್ಯದ ಫಸ್ಟ್ ಲುಕ್]


Ravichandran's Apoorva

ಇದೀಗ 'ಅಪೂರ್ವ' ಚಿತ್ರದ ಟೈಟಲ್ ಟೀಸರ್ ನೋಡುವ ಭಾಗ್ಯ ಕ್ರೇಜಿ ಸ್ಟಾರ್ ಅಭಿಮಾನಿಗಳಿಗೆ ಲಭಿಸಿದೆ. ನೀರಿನ ಅಲೆಯ ಮಧ್ಯೆ, ಬಿಳಿ ಹಾಳೆಯ ಮೇಲೆ ಅಚ್ಚಾಗಿರುವ 'ಅಪೂರ್ವ' ಶೀರ್ಷಿಕೆ, ಅದರೊಂದಿಗೆ ರವಿಚಂದ್ರನ್ ಸಂಯೋಜಿಸಿರುವ ಹಿನ್ನಲೆ ಸಂಗೀತ ಇರುವ ಟೀಸರ್ ಈಗ ರಿಲೀಸ್ ಆಗಿದೆ.
ಕಿವಿಗೆ ಇಂಪು ನೀಡುವ ಸಂಗೀತ ಮತ್ತು ಕಣ್ಮನ ಸೆಳೆಯುವ ದೃಶ್ಯ ಕಾವ್ಯ ಈ 'ಅಪೂರ್ವ' ಅನ್ನುವುದನ್ನ ಈ ಮೊದಲ ನೋಟದಲ್ಲೇ ರವಿಚಂದ್ರನ್ ಸಾರಿ ಸಾರಿ ಹೇಳಿದ್ದಾರೆ. ರವಿಮಾಮನ ಜೊತೆ ಜೋಡಿಯಾಗಿ 'ಅಪೂರ್ವ' ಅನ್ನುವ ಯುವ ಪ್ರತಿಭೆ ಗಾಂಧಿನಗರಕ್ಕೆ ಈ ಚಿತ್ರದ ಮೂಲಕ ಕಾಲಿಡುತ್ತಿದ್ದಾರೆ. [ಕ್ರೇಜಿಸ್ಟಾರ್ ರವಿಚಂದ್ರನ್ 'ಅಪೂರ್ವ' ಅಮೋಘ ದಾಖಲೆ]


Ravichandran's Apoorva

ರವಿಚಂದ್ರನ್ ಮನೆಯ ಟೆರೆಸ್ ನಲ್ಲಿ ಹಾಕಲಾಗಿದ್ದ 'ಲಿಫ್ಟ್' ಸೆಟ್ ನಲ್ಲಿ 'ಅಪೂರ್ವ' ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಮನಸ್ಸಿಗೆ ಮುದ ನೀಡುವ ಸಂಗೀತದೊಂದಿಗೆ ಕನಸುಗಾರನ ಹೊಸ ಕನಸು 'ಅಪೂರ್ವ' ಸದ್ಯದಲ್ಲೇ ತೆರೆಗೆ ಬರಲಿದೆ. ಅಲ್ಲಿಯವರೆಗೂ ಇಂತಹ ಮನತಣಿಸುವ ದೃಶ್ಯಗಳ ಗುಚ್ಛಕ್ಕೆ ಎದುರುನೋಡುತ್ತಿರಿ. (ಫಿಲ್ಮಿಬೀಟ್ ಕನ್ನಡ)

English summary
Crazy Star Ravichandran starrer most awaited movie Apoorva Title teaser is out. Watch the teaser here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada