»   » ಚಾಲೆಂಜಿಂಗ್ ಸ್ಟಾರ್ 'ಮಿಸ್ಟರ್ ಐರಾವತ' ಟೀಸರ್ ಔಟ್

ಚಾಲೆಂಜಿಂಗ್ ಸ್ಟಾರ್ 'ಮಿಸ್ಟರ್ ಐರಾವತ' ಟೀಸರ್ ಔಟ್

Posted By:
Subscribe to Filmibeat Kannada

ಅಂತೂ ಇಂತೂ ಎಲ್ಲಾ ವಿವಾದಗಳಿಗೆ ಬ್ರೇಕ್ ಹಾಕಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮಿಸ್ಟರ್ ಐರಾವತ' ಚಿತ್ರ, ಟೀಸರ್ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದೆ.

ಹೌದು ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅಭಿಮಾನಿಗಳ ನಿರೀಕ್ಷೆಯಂತೆ ಇಂದು(ಜುಲೈ 29) ಚಾಲೆಂಜಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಮಿಸ್ಟರ್ ಐರಾವತ' ಚಿತ್ರದ ಟೀಸರ್ ಬಿಡುಗಡೆಯಾಗಿದೆ.[ಚಾಲೆಂಜಿಂಗ್ ಸ್ಟಾರ್ 'ಐರಾವತ' ಚಿತ್ರದ ಟೈಟಲ್ ಚೇಂಜ್]


ಶ್ರೀ ಸಂದೇಶ್ ನಾಗರಾಜು ಎಮ್.ಎಲ್.ಸಿ. ಅರ್ಪಿಸುವ, ನಿರ್ದೇಶಕ ಎ.ಪಿ.ಅರ್ಜುನ್ ಆಕ್ಷನ್ -ಕಟ್ ಹೇಳಿರುವ 'ಮಿಸ್ಟರ್ ಐರಾವತ' ಚಿತ್ರದ ಟೀಸರ್ ಇಲ್ಲಿದೆ ನೋಡಿ...[ನಿರ್ದೇಶಕ ಎ.ಪಿ.ಅರ್ಜುನ್ ರನ್ನ ದೂರ ತಳ್ಳಿದ್ರಾ ದರ್ಶನ್.?]


Watch Darshan's

'ಮಿಸ್ಟರ್ ಐರಾವತ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಡಕ್ ಪೋಲಿಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಊರ್ವಶಿ ರೌಟೇಲ ಚಿತ್ರದಲ್ಲಿರುವ ರೋಮ್ಯಾಂಟಿಕ್ ಹಾಡುಗಳಿಗೆ ದರ್ಶನ್ ಜೊತೆ ಡ್ಯುಯೆಟ್ ಹಾಡಿದ್ದಾರೆ.


'ಅಂಬಾರಿ', 'ಅದ್ದೂರಿ' ಮತ್ತು 'ರಾಟೆ'ಯಂತಹ ಹಿಟ್ ಚಿತ್ರಗಳನ್ನು ಸ್ಯಾಂಡಲ್ ವುಡ್ ಗೆ ಕೊಡುಗೆಯಾಗಿ ನೀಡಿರುವ ನಿರ್ದೇಶಕ ಎ.ಪಿ.ಅರ್ಜುನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಮಿಸ್ಟರ್ ಐರಾವತ'.[ಕಿರಿಕ್ ನಂತ್ರ 'ನೈಸಾಗಿ' ಶೂಟಿಂಗಿಗೆ ಬಂದ ಐರಾವತ]


ಒಟ್ನಲ್ಲಿ ಎಲ್ಲಾ ವಿವಾದಗಳಿಗೆ ಫುಲ್ ಸ್ಟಾಪ್ ಇಟ್ಟ 'ಮಿಸ್ಟರ್ ಐರಾವತ' ಆಗಸ್ಟ್ 16 ಕ್ಕೆ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಮಾಡಲಿದೆ. ಇನ್ನೂ ದರ್ಶನ್ ಹಾಗೂ ಎ.ಪಿ.ಅರ್ಜನ್. ಕಾಂಬಿನೇಷನ್ ಪ್ರೇಕ್ಷಕರನ್ನು ಕಮಾಲ್ ಮಾಡುತ್ತೋ ಇಲ್ವೋ ಅನ್ನೋದನ್ನ ಚಿತ್ರ ತೆರೆಗೆ ಬಂದ ಮೇಲೆ ಹೇಳಬೇಕಿದೆ. (ಫಿಲ್ಮಿಬೀಟ್)

English summary
Kannada Movie "Mr Airavata" official teaser is released. 'Mr Airavata' features Kannada actor Darshan, Actress Urvashi Rautela, in the lead role. The movie is directed by A.P Arjun of 'Addhuri' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada