»   » 'ಮಿಸ್ಟರ್ ಐರಾವತ' ಟ್ರೈಲರ್ ದರ್ಶನ್ ಖಡಕ್ ಲುಕ್

'ಮಿಸ್ಟರ್ ಐರಾವತ' ಟ್ರೈಲರ್ ದರ್ಶನ್ ಖಡಕ್ ಲುಕ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಬಾಕ್ಸಾಪೀಸ್ ಸುಲ್ತಾನ ಅಂತಾನೇ ಖ್ಯಾತಿ ಗಳಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಮಿಸ್ಟರ್ ಐರಾವತ' ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆಯಾಗಿದೆ.

ಅಂದಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ಮಿಸ್ಟರ್ ಐರಾವತ' ಚಿತ್ರದ ಮೂಲಕ ಪೊಲೀಸ್ ಗಿರಿಯಲ್ಲಿ ಮತ್ತೊಮ್ಮೆ ಧಮಾಕೇದರ್ ಪರ್ಫಾಮೆನ್ಸ್ ನೀಡಿದ್ದಾರೆ. ಆರಡಿ ಎತ್ತರದ ಆಜಾನುಬಾಹು ದೇಹವನ್ನು ಹುರಿಗೊಳಿಸಿರುವ ದರ್ಶನ್ 'ಮಿಸ್ಟರ್ ಐರಾವತ' ಚಿತ್ರದ ಮೂಲಕ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ. [ಚಾಲೆಂಜಿಂಗ್ ಸ್ಟಾರ್ 'ಮಿಸ್ಟರ್ ಐರಾವತ' ಟೀಸರ್ ಔಟ್]


ಅಂದಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಊರ್ವಶಿ ರೌಟೇಲ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಅದ್ದೂರಿ' ನಿರ್ದೇಶಕ ಅರ್ಜುನ ಅವರ ನಿರ್ದೇಶನದ ಮಿಸ್ಟರ್ ಐರಾವತ' ಚಿತ್ರದ ಜಬರ್ದಸ್ತ್ ಟ್ರೈಲರ್ ಇಲ್ಲಿದೆ ನೋಡಿ...[ರಿಯಲ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್ ಗೆ ವಿಶ್ ಮಾಡಿದ ಕಿಚ್ಚ]


Watch Darshan's

ಶ್ರೀ ಸಂದೇಶ್ ನಾಗರಾಜು ಅವರು ಅರ್ಪಿಸುವ 'ಮಿಸ್ಟರ್ ಐರಾವತ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎನರ್ಜಿಟಿಕ್, ಹಾನೆಸ್ಟ್, ಫಿಯರ್ ಲೆಸ್, ಪವರ್ ಫುಲ್ ಹಾಗೂ ಸ್ಟೈಲೀಷ್ ಪೊಲೀಸ್ ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ.


"ರಥ ಬಂದ್ರೆ ಗಾಳಿ ಬೀಸುತ್ತೆ ಈ ಐರಾವತ ಬಂದ್ರೆ ಬಿರುಗಾಳಿ ಬೀಸುತ್ತೆ', 'ಹೆಗಲ ಮೇಲೆ ಸ್ಟಾರ್ ಇದೆ ಅಂತ ಬೇಜಾನ್ ಎಗರಾಡ್ತ ಇದ್ದೀಯಾ', ಜನಗಳು ಕೊಟ್ಟಿರೋ ಸ್ಟಾರ್ ಹಣೆ ಮೇಲಿದೆ, ಇದು ಬರೀ ಅದರ ರಿಫ್ಲೆಕ್ಷನ್ ಅಷ್ಟೆ'. ಅಂತ ದರ್ಶನ್ ಹೊಡಿಯೋ ಡೈಲಾಗ್ ಗೆ ಟ್ರೈಲರ್ ನೋಡಿದ ಅಭಿಮಾನಿಗಳು ಫಿದಾ ಆಗೋದು ಗ್ಯಾರಂಟಿ [ನಿರ್ದೇಶಕ ಎ.ಪಿ.ಅರ್ಜುನ್ ರನ್ನ ದೂರ ತಳ್ಳಿದ್ರಾ ದರ್ಶನ್.?]


'ಹೆಣ್ಣು ಮಕ್ಕಳು ಇಟ್ಕೊಳ್ಳೋ ಅರಿಶಿನ ಕುಂಕುಮಾನ ಬಾವುಟ ಮಾಡ್ಕೊಂಡು ಬದುಕ್ತಿರೋರು ನಾವು, ಬಾವುಟ ಮುಟ್ಟಿದ್ರೇನೆ ಬಿಡಲ್ಲ, ಇನ್ನೂ ಹೆಣ್ಣು ಮಕ್ಕಳನ್ನು ಮುಟ್ಟಿದ್ರೆ ಬಿಡ್ತಿವಾ'?, ಅಂತ ಹೀಗೆ ಸಖತ್ ಡಿಫರೆಂಟ್ ಹಾಗೂ ಫವರ್ ಫುಲ್ ಡೈಲಾಗ್ ಮೂಲಕ ದರ್ಶನ್ 'ಐರಾವತ' ಮೂಲಕ ಪರಕಾಯ ಪ್ರವೇಶ ಮಾಡಿದ್ದಾರೆ.


ಇನ್ನೂ ಚಿತ್ರದ ನಾಯಕಿ ಪರಭಾಷಾ ನಟಿ ಊರ್ವಶಿ ರೌಟೇಲ ಅವರ ಮುದ್ದು ಮುಖ ಹಾಗೂ ಗ್ಲಾಮರ್ ಲುಕ್ ಜೊತೆಗೆ ಬಹುಭಾಷಾ ನಟ ಪ್ರಕಾಶ್ ರೈ ಅವರ ನೆಗೆಟಿವ್ ರೋಲ್ ಟ್ರೈಲರ್ ನ ಮತ್ತೊಂದು ಹೈಲೈಟ್.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ]


ಇನ್ನೂ ಚಿತ್ರದ ಸುಂದರವಾದ ಹಾಡುಗಳಿಗೆ ಸಂಗಿತ ನಿರ್ದೇಶಕ ವಿ.ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿತ್ರದ ಹಾಡುಗಳು ಸಖತ್ ಅಗಿದ್ದು, ಮ್ಯೂಸಿಕ್ ಪ್ರಿಯರ ಮೆಚ್ಚುಗೆ ಗಳಿಸುತ್ತಿದೆ.


ಅದೇನೇ ಇರಲಿ ಆದಷ್ಟು ಬೇಗನೇ ಗಾಂಧಿನಗರಕ್ಕೆ ಕಾಲಿಡುತ್ತಿರುವ 'ಐರಾವತ' ನನ್ನು ಸ್ವಾಗತಿಸಲು ನೀವು ತಯಾರಾಗಿ ಏನಂತೀರಾ.

English summary
Kannada movie 'Mr. Airavatha' official Trailer, is released. 'Mr Airavata' features Kannada actor Darshan, Actress Urvashi Rautela, in the lead role. The movie is directed by A.P Arjun of 'Addhuri' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada