»   » 'ಅಲ್ಲಮ'ನಿಗಾಗಿ ಮದ್ದಳೆ ಕಲಿಯಲು ಧನಂಜಯ್ ಕಸರತ್ತು

'ಅಲ್ಲಮ'ನಿಗಾಗಿ ಮದ್ದಳೆ ಕಲಿಯಲು ಧನಂಜಯ್ ಕಸರತ್ತು

Posted By:
Subscribe to Filmibeat Kannada

ಸಾಮಾನ್ಯವಾಗಿ ಯಾವುದೇ ಹೀರೋ ಅಥವಾ ಹಿರೋಯಿನ್ ಹೊಸ ಚಿತ್ರಕ್ಕಾಗಿ ಹೊಸ ಹೊಸ ವಿದ್ಯೆಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಆದ್ರೆ ಶಾಸ್ತ್ರೀಯ ವಿದ್ಯೆಗಳನ್ನು ಬೇಗ ಕಲಿಯೋದು ಅಷ್ಟು ಸುಲಭದ ಕೆಲಸವಲ್ಲ.

ಆದರೆ 'ರಾಟೆ' ಖ್ಯಾತಿಯ ನಟ ಧನಂಜಯ್ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ವಿಭಿನ್ನ ಸಾಹಸ ಮಾಡಿದ್ದಾರೆ. ಖ್ಯಾತ ನಿರ್ದೇಶಕ ಟಿ.ಎಸ್ ನಾಗಾಭರಣ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಅಲ್ಲಮ' ಚಿತ್ರಕ್ಕಾಗಿ ಧನಂಜಯ್ ಅವರು ಲಯಬದ್ದವಾಗಿ ಮದ್ದಳೆ ಬಾರಿಸೋದನ್ನ ಕಲಿತಿದ್ದಾರೆ.[ಟೀಸರ್: ಪ್ರೇಮದ ಕಾಣಿಕೆ ಜೊತೆಗೆ ಬಂದ 'ಜೆಸ್ಸಿ']


Watch Dhananjay's Kannada movie 'Allama' Making Video

ಈ ವಿದ್ಯೆಯನ್ನು ಕರಗತ ಮಾಡಿಕೊಳ್ಳಲು 'ಬಾಕ್ಸರ್' ಹುಡುಗ ಧನಂಜಯ್ ತೆಗೆದುಕೊಂಡ ಸಮಯ ಬರೋಬ್ಬರಿ 6 ತಿಂಗಳು. ಈ ಸಂಗೀತ ವಾದ್ಯವನ್ನು ಕಲಿತ ಧನಂಜಯ್ ಶೂಟಿಂಗ್ ಸಮಯದಲ್ಲಿ ಒಂದೇ ಒಂದು ತಾಳವನ್ನು ಮಿಸ್ ಮಾಡದೇ ನುಡಿಸಿದರಂತೆ.


ಸಂಗೀತ ಮಾಂತ್ರಿಕ ಬಾಪು ಪದ್ಮನಾಭ ಅವರ ನೇತೃತ್ವದಲ್ಲಿ ನಟ ಧನಂಜಯ್ ಅವರು ಮದ್ದಳೆ ಬಾರಿಸಲು ಕಲಿತಿದ್ದಾರೆ. ಜೊತೆಗೆ ಭಾರವಾದ ಮದ್ದಳೆ ಹಿಡಿದು ನೃತ್ಯ ಕೂಡ ಮಾಡಿದ್ದಾರೆ. ಡ್ಯಾನ್ಸ್ ಮಾಸ್ಟರ್ ಮದನ್ ಹರಿಣಿ ಅವರ ಕೊರಿಯೋಗ್ರಫಿಯಲ್ಲಿ ಧನಂಜಯ್ ಅವರು ಮದ್ದಳೆ ಹಿಡಿದು ಅದ್ಭುತವಾಗಿ ನೃತ್ಯ ಮಾಡಿದ್ದಾರೆ.['ಜೆಸ್ಸಿ' ನಮ್ಮಲ್ಲಿ ಮಾತ್ರವಲ್ಲ, ತಮಿಳು-ತೆಲುಗಲ್ಲೂ ಕಮಾಲ್ ಮಾಡ್ತಾಳೆ]


Watch Dhananjay's Kannada movie 'Allama' Making Video

ಧನಂಜಯ್ ಅವರು ಮದ್ದಳೆ ಹಿಡಿದು ನೃತ್ಯ ಮಾಡಿದ ಮೇಕಿಂಗ್ ಝಲಕ್ ನೋಡಲು ಈ ವಿಡಿಯೋ ನೋಡಿ..'ವಂಶೋದ್ಧಾರಕ' ಚಿತ್ರದ ನಂತರ ಮತ್ತೆ ಗಾಂಧಿನಗರದಲ್ಲಿ ಪ್ರತ್ಯಕ್ಷವಾಗಿರುವ ನಟಿ ಮೇಘನಾ ರಾಜ್ ಅವರು ಧನಂಜಯ್ ಅವರು ಜೊತೆ 'ಅಲ್ಲಮ' ಚಿತ್ರದಲ್ಲಿ ಮಿಂಚುತ್ತಿದ್ದಾರೆ. ಸದ್ಯಕ್ಕೆ ಧನಂಜಯ್ ಅವರು ರೋಮ್ಯಾಂಟಿಕ್ 'ಜೆಸ್ಸಿ' ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

English summary
Music Instrumental Learned by Kannada Actor Dhananjay for upcoming movie 'Allama'. Actress Meghana Raj in the lead role. The movie is directed by TS Nagabharana. Watch how Dhananjaya perfected the art of playing 'Maddale' through hard work and determination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada