»   » 'ಬಾಕ್ಸರ್' ಆದ ಧನಂಜಯ್ ಜಬರ್ದಸ್ತ್ ಸ್ಟಂಟ್ಸ್

'ಬಾಕ್ಸರ್' ಆದ ಧನಂಜಯ್ ಜಬರ್ದಸ್ತ್ ಸ್ಟಂಟ್ಸ್

Posted By:
Subscribe to Filmibeat Kannada

ಕೈಲಿದ್ದ ಇನ್ಫೊಸಿಸ್ ಕೆಲಸ ಬಿಟ್ಟು 'ಡೈರೆಕ್ಟರ್ಸ್ ಸ್ಪೆಷಲ್' ಸಿನಿಮಾದಲ್ಲಿ ನಾಯಕನಾದ ನಟ ಧನಂಜಯ್ ಈಗ 'ಬಾಕ್ಸರ್' ಆಗಿದ್ದಾರೆ. ಅರ್ಥಾತ್ ಅವರ ಹೊಸ ಸಿನಿಮಾ 'ಬಾಕ್ಸರ್'. ಕರ್ನಾಟಕದಾದ್ಯಂತ 'ರಾಟೆ' ಭರಾಟೆ ಜೋರಾಗಿರುವಾಗಲೇ, ಕೊಂಚ ವಿಭಿನ್ನ ಲುಕ್ ನಲ್ಲಿ ಧನಂಜಯ್ 'ಬಾಕ್ಸರ್' ಆಗಿ ರೆಡಿಯಾಗಿದ್ದಾರೆ.

ಅಸಲಿಗೆ, ಧನಂಜಯ್ ನ 'ಬಾಕ್ಸರ್' ಮಾಡಿರುವುದು ನಿರ್ದೇಶಕ ಪ್ರೀತಂ ಗುಬ್ಬಿ. 'ದಿಲ್ ರಂಗೀಲಾ' ಚಿತ್ರದ ನಂತರ ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ ಚಿತ್ರ 'ಬಾಕ್ಸರ್'. ಬಿರುಸಿನಿಂದ ಚಿತ್ರೀಕರಣ ನಡೆಸುತ್ತಿರುವ 'ಬಾಕ್ಸರ್' ಚಿತ್ರದ ಟೀಸರ್ ರಿಲೀಸ್ ಆಗಿದೆ ನೋಡಿ.....


Watch Dhananjay starrer kannada movie 'Boxer' teaser

ಹೆಸರಿಗೆ ತಕ್ಕಂತೆ ಓರ್ವ ಕಿಕ್ ಬಾಕ್ಸರ್ ಸುತ್ತ ನಡೆಯುವ ಕಥೆಯೇ 'ಬಾಕ್ಸರ್'. ಕಟ್ಟುಮಸ್ತಾದ ದೇಹ ಬೆಳೆಸಿಕೊಂಡು ರವಿವರ್ಮ ಸಾಹಸ ಸಂಯೋಜನೆಯಲ್ಲಿ ಸಖತ್ತಾಗಿ ಸ್ಟಂಟ್ಸ್ ಮಾಡಿದ್ದಾರೆ ನಾಯಕ ಧನಂಜಯ್. 'ಬಾಕ್ಸರ್' ಆಗುವುದಕ್ಕಾಗಿಯೇ ಹಲವು ತಿಂಗಳುಗಳ ಕಾಲ ಟ್ರೇನಿಂಗ್ ಕೂಡ ಪಡೆದಿದ್ದಾರಂತೆ ಧನಂಜಯ್.


ಈಗ ರಿಲೀಸ್ ಆಗಿರುವ ಟೀಸರ್ ನಲ್ಲಿ ಧನಂಜಯ್ ಮತ್ತು ಕೆಲ ಬಾಕ್ಸರ್ ಗಳನ್ನ ಬಿಟ್ರೆ, ಬಾಕಿ ತಾರಾಗಣದಲ್ಲಿ ಯಾರ್ಯಾರಿದ್ದಾರೆ ಅನ್ನೋ ಗುಟ್ಟನ್ನ ಬಿಟ್ಟುಕೊಟ್ಟಿಲ್ಲ. ಹೀರೋಯಿನ್ ಸುಳಿವು ಕೂಡ ಟೀಸರ್ ನಲ್ಲಿಲ್ಲ. ['ದಿಲ್ ರಂಗೀಲಾ': ಸವಕಲು ಕಥೆ ಹೊಸ ನಿರೂಪಣೆ]


Watch Dhananjay starrer kannada movie 'Boxer' teaser

ತಾಂತ್ರಿಕ ವರ್ಗದಲ್ಲಿ ಎಂದಿನ ಪ್ರೀತಂ ಗುಬ್ಬಿ ಟೀಂ ಇದೆ. ಜಯಣ್ಣ-ಭೋಗೇಂದ್ರ ನಿರ್ಮಾಣದಲ್ಲಿ 'ಬಾಕ್ಸರ್' ಅದ್ದೂರಿಯಾಗಿ ರೆಡಿಯಾಗುತ್ತಿದೆ. ತೆರೆಮೇಲೆ 'ಬಾಕ್ಸರ್' ನ ನೋಡುವುದಕ್ಕೆ ಇನ್ನೂ ಕೊಂಚ ಟೈಮ್ ಇದೆ. (ಫಿಲ್ಮಿಬೀಟ್ ಕನ್ನಡ)

English summary
After 'Raate', Kannada Actor Dhananjay is gearing up for his next movie 'Boxer'. Preetham Gubbi directorial 'Boxer' teaser out. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada