»   » ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!

ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!

Posted By:
Subscribe to Filmibeat Kannada

ಬಹುಶಃ ವರ್ಷಗಳ ನಂತರ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳು ಸಂತಸದಿಂದ ಕುಣಿದು ಕುಪ್ಪಳಿಸಿದ್ದು ನಿನ್ನೆಯೇ. ಅದಕ್ಕೆಲ್ಲಾ ಕಾರಣವಾಗಿದ್ದು 'ನಾಗರಹಾವು' ಸಿನಿಮಾ.

'ನಾಗರಹಾವು' ಎಂದ ಕೂಡಲೆ, ನಮಗೆಲ್ಲ ತಕ್ಷಣ ನೆನಪಾಗುವುದು ವಿಷ್ಣುವರ್ಧನ್ ನಾಯಕ ನಟರಾಗಿ ಅಭಿನಯಿಸಿದ 1972 ರಲ್ಲಿ ತೆರೆಗೆ ಬಂದ ಪುಟ್ಟಣ್ಣ ಕಣಗಾಲ್ ಚಿತ್ರ. 'ರಾಮಾಚಾರಿ' ಆಗಿ ಅಂದು ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಎಬ್ಬಿಸಿದ 'ಆಂಗ್ರಿ ಯಂಗ್ ಮ್ಯಾನ್' ನಿನ್ನೆ ಕೂಡ ಅದೇ 'ನಾಗರಹಾವು' ಮೂಲಕ ಗಾಂಧಿನಗರದಲ್ಲಿ ಬುಸು ಗುಡಲು ಆರಂಭಿಸಿದರು.


ವಿಷ್ಣುವರ್ಧನ್ ನಮ್ಮನ್ನೆಲ್ಲ ಅಗಲಿ ಆರುವರೆ ವರ್ಷಗಳು ಕಳೆದಿರಬಹುದು. ಆದರೂ, ನೂತನ ತಂತ್ರಜ್ಞಾನದ ಮೂಲಕ ಹೊಸ 'ನಾಗರಹಾವು' ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ತೆರೆಮೇಲೆ ಜನ್ಮತಾಳಿದ್ದಾರೆ.


watch-dr-vishnuvardhan-starrer-nagarahavu-teaser

'ನಾಗರಹಾವು' ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ರವರ ಅವತಾರ ಕಂಡು ನಿನ್ನೆ ವಿಷ್ಣುವರ್ಧನ್ ಅಭಿಮಾನಿಗಳು ಸಂಭ್ರಮಪಟ್ಟಿದ್ದು ಅಷ್ಟಿಷ್ಟಲ್ಲ.


ಹೌದು, ನಿನ್ನೆ (ಮೇ 30) ಗಾಂಧಿನಗರದ ಭೂಮಿಕಾ ಚಿತ್ರಮಂದಿರದಲ್ಲಿ 'ನಾಗರಹಾವು' ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. [ಇಂದು 'ನಾಗರಹಾವು' ಟೀಸರ್ ರಿಲೀಸ್ ವಿಶೇಷ ಏನು?]


'ನಾಗರಹಾವು' ಚಿತ್ರದ ಮೊದಲ ನೋಟ, ಅದರಲ್ಲೂ ಡಾ.ವಿಷ್ಣುವರ್ಧನ್ ರವರ ನಾಗ'ರಾಜ'ನ ಅವತಾರ ನೋಡಿ 'ಹೃದಯವಂತ'ನ ಅಭಿಮಾನಿಗಳು ಶಿಳ್ಳೆ-ಚಪ್ಪಾಳೆಗಳ ಸುರಿಮಳೆಗೈದರು.


ಇಡೀ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಸಿ.ಜಿ.ಐ ವರ್ಷನ್ ಮೂಲಕ ಡಾ.ವಿಷ್ಣುವರ್ಧನ್ ರವರನ್ನ ತೆರೆಮೇಲೆ ತಂದಿರುವ ಖ್ಯಾತಿ 'ನಾಗರಹಾವು' ಚಿತ್ರತಂಡದ್ದು.


ಬರೋಬ್ಬರಿ 730 ದಿನಗಳ ಕಾಲ, ಏಳು ದೇಶಗಳ, ನುರಿತ 576 ವಿ.ಎಫ್.ಎಕ್ಸ್ ಆರ್ಟಿಸ್ಟ್ ಗಳ ಶ್ರಮ 'ನಾಗರಹಾವು' ಚಿತ್ರಕ್ಕಿದೆ. ಐದು ವರ್ಷಗಳ ಹಿಂದೆ, ಅಂದ್ರೆ 2011 ರಲ್ಲಿ 'ನಾಗರಹಾವು' ಸಿನಿಮಾ ಸೆಟ್ಟೇರಿತ್ತು. ತೆಲುಗಿನಲ್ಲಿ 'ಅರುಂಧತಿ', 'ಅಮ್ಮೋರು' ಸೇರಿದಂತೆ ಫ್ಯಾಂಟಸಿ, ಪೌರಾಣಿಕ ಸಿನಿಮಾಗಳಿಗೆ ಹೆಸರುವಾಸಿ ಆಗಿರುವ ನಿರ್ದೇಶಕ ಕೋಡಿ ರಾಮಕೃಷ್ಣ ಆಕ್ಷನ್ ಕಟ್ ಹೇಳುತ್ತಿರುವ ಚೊಚ್ಚಲ ಕನ್ನಡ ಚಿತ್ರ ಈ 'ನಾಗರಹಾವು'.


ಶೀರ್ಷಿಕೆಯೇ ಹೇಳುವಂತೆ 'ನಾಗರಹಾವು' ಸರ್ಪಗಳ ಸುತ್ತ ಹೆಣೆದಿರುವ ಫ್ಯಾಂಟಸಿ ಕಥೆ. 'ನಾಗಿಣಿ' ಆಗಿ ಲಕ್ಕಿ ಸ್ಟಾರ್ ಹಾಗೂ ಮಂಡ್ಯದ ಮಾಜಿ ಸಂಸದೆ ರಮ್ಯಾ ಅಭಿನಯಿಸಿದ್ದಾರೆ. ದೂದ್ ಪೇಡಾ ದಿಗಂತ್ 'ನಾಗರಹಾವು' ಚಿತ್ರದ ನಾಯಕ. [ಅಭಿಮಾನಿಗಳಿಗೆ ಅಚ್ಚರಿ: 'ನಾಗರಹಾವಿನ' ಹೆಡೆ ಮುಂದೆ ನಟಿ ರಮ್ಯಾ.!]


watch-dr-vishnuvardhan-starrer-nagarahavu-teaser

ಹಾಗ್ನೋಡಿದ್ರೆ, ಇಡೀ 'ನಾಗರಹಾವು' ಚಿತ್ರದ ಹೈಲೈಟ್ ಡಾ.ವಿಷ್ಣುವರ್ಧನ್. ಕ್ಲೈಮ್ಯಾಕ್ಸ್ ನಲ್ಲಿ ಮಾತ್ರ ನಾಗ'ರಾಜ' ನಾಗಿ ವಿಷ್ಣುವರ್ಧನ್ ತೆರೆಮೇಲೆ ಅಬ್ಬರಿಸುತ್ತಾರೆ. ಸಂಪೂರ್ಣ ಗ್ರಾಫಿಕ್ಸ್, ಹೆಡ್ ರೀಪ್ಲೇಸ್ಮೆಂಟ್ ತಂತ್ರಜ್ಞಾನದ ಮೂಲಕ ವಿಷ್ಣುವರ್ಧನ್ ಪಾತ್ರ ಸೃಷ್ಟಿಸಲಾಗಿದೆ. ಇದಕ್ಕಾಗಿ ನಿರ್ಮಾಪಕರು ಕೋಟಿ ಕೋಟಿ ದುಡ್ಡು ಸುರಿದಿದ್ದಾರೆ. ['ನಾಗರಹಾವು' ಚಿತ್ರದ ಪ್ರಚಾರಕ್ಕೆ ಇಷ್ಟೊಂದು ಹಣವೇ.?!]


ಫ್ರೇಮ್ ಟು ಫ್ರೇಮ್ ಅದ್ಧೂರಿ ಆಗಿ ತಯಾರಾಗಿರುವ 'ನಾಗರಹಾವು' ಚಿತ್ರದ ಟೀಸರ್ ನ ನೀವೂ ಕಣ್ತುಂಬಿಕೊಳ್ಳಿ...ಹಾಗೇ, ನಿಮ್ಮ ಅಭಿಪ್ರಾಯವನ್ನು ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ.....


watch-dr-vishnuvardhan-starrer-nagarahavu-teaser
English summary
For the First time in India, CGI Created version of Legendary Actor Dr.Vishuvardhan's 201st movie 'Nagarahavu' teaser is out and looks dashing. Watch Kodi Ramakrishna directorial, Ramya starrer Fantasy Thriller 'Nagarahavu' movie teaser here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada