»   » ಮೌನ ಮುರಿದ ರಿಯಲ್ ರೌಡಿ 'ಸೈಲೆಂಟ್ ಸುನೀಲ'

ಮೌನ ಮುರಿದ ರಿಯಲ್ ರೌಡಿ 'ಸೈಲೆಂಟ್ ಸುನೀಲ'

Posted By:
Subscribe to Filmibeat Kannada

'ರಿಯಲ್' ರೌಡಿ ಸೈಲೆಂಟ್ ಸುನೀಲ ಗಾಂಧಿನಗರಕ್ಕೆ ಕಾಲಿಟ್ಟ ವಿಷಯ ಕಳೆದ ಒಂದು ವಾರದಿಂದ ಬಿಸಿ ಬಿಸಿ ಸುದ್ದಿಯಾಗುತ್ತಿದೆ. ತಮ್ಮದೇ ಜೀವನದ ಕಹಿ ಸತ್ಯಗಳನ್ನ, ತಮ್ಮದೇ ಹೆಸರಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ, ತಾವೇ ಅಭಿನಯಿಸುತ್ತಿದ್ದಾರೆ ಸೈಲೆಂಟ್ ಸುನೀಲ.

ನಿರ್ದೇಶಕ ದುನಿಯಾ ಸೂರಿ ಏನೇ ಮಾಡಿದರೂ, ಡಿಫರೆಂಟ್ ಆಗಿ ಮಾಡ್ತಾರೆ. ಅಂಥದ್ರಲ್ಲಿ, 'ಸೈಲೆಂಟ್ ಸುನೀಲ' ಹೇಗೆ ರೆಡಿಯಾಗುತ್ತಿದೆ ಅಂತ ಕುತೂಹಲ ಇದ್ದವರಿಗೆ ಇದೋ ಇಲ್ಲಿದೆ ಉತ್ತರ. 'ಸೈಲೆಂಟ್ ಸುನೀಲ' ಚಿತ್ರದ ಫಸ್ಟ್ ಲುಕ್ ಪ್ರೋಮೋ ಬಿಡುಗಡೆಯಾಗಿದೆ ನೋಡಿ....


Watch Duniya Soori

ಚಿತ್ರದ ಥೀಮ್ ಹೇಳುವಂತೆ ಸಖತ್ 'ರಿಯಲ್' ಆಗಿದೆ 'ಸೈಲೆಂಟ್ ಸುನೀಲ' ಚಿತ್ರದ ಫಸ್ಟ್ ಲುಕ್ ಝಲಕ್. ಸೈಲೆಂಟ್ ಸುನೀಲ ಯಾರು? ಆತನ ಹಿನ್ನಲೆ ಏನು? ಅವನ ಜೀವನ ಶೈಲಿ ಹೇಗಿದೆ? ರೌಡಿಸಂಗೆ ಆತ ಇಳಿದದ್ದು ಯಾಕೆ?....ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಸೈಲೆಂಟ್ ಸುನೀಲನ ಬಾಯಲ್ಲೇ ಉತ್ತರ ಹೇಳಿಸಿ, ಪ್ರೋಮೋ ತಯಾರಿಸಿದ್ದಾರೆ ದುನಿಯಾ ಸೂರಿ. [ಯಾರೀ 'ಸೈಲೆಂಟ್ ಸುನೀಲ'..? ರಿಯಲ್ 'ರೌಡಿ' ಕಹಾನಿ]


ತಮ್ಮದೇ ಜೀವನಗಾಥೆ ಆದ್ದರಿಂದ ಅಭಿನಯ ಅನ್ನುವುದಕ್ಕಿಂತ ಹೆಚ್ಚಾಗಿ ನೈಜವಾಗಿ ಕಾಣಿಸಿಕೊಂಡಿದ್ದಾರೆ ಸೈಲೆಂಟ್ ಸುನೀಲ. ತಂದೆ ಇಲ್ಲದೆ, ತಾಯಿಯ ನೆರಳಲ್ಲಿ ಬೆಳೆದ ಸುನೀಲ, ಬಾಲಾಪರಾಧಿಯಾಗಿ ಸೆರೆವಾಸ ಅನುಭವಸಿದ ಘೋರ ಘಟನೆಯ ಚಿತ್ರಣ ಕೂಡ ಇದೇ ಪ್ರೋಮೋದಲ್ಲಿದೆ. [ರೀಲ್ ಮೇಲೆ ಮತ್ತೊಬ್ಬ ರಿಯಲ್ ರೌಡಿಯ ಕರಾಳ ಅಧ್ಯಾಯ]


Watch Duniya Soori

ಇದ್ದಿದ್ದನ್ನ ಇದ್ದ ಹಾಗೆ ತೋರಿಸುವ ಪ್ರಯತ್ನಕ್ಕೆ ಕೈಹಾಕಿರುವ ದುನಿಯಾ ಸೂರಿ, ಮೊದಲ ನೋಟದಲ್ಲೇ 'ಸೈಲೆಂಟ್ ಸುನೀಲ'ನನ್ನ ಕನ್ನಡ ಪ್ರೇಕ್ಷಕರಿಗೆ ಹತ್ತರವಾಗುವಂತೆ ಮಾಡಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ಕೈಚಳಕ ಪ್ರೋಮೋದಲ್ಲಿ ಅಷ್ಟೇ ನೈಜವಾಗಿದೆ. [ಅಗ್ನಿ ಶ್ರೀಧರ್ ಜೊತೆ ದುನಿಯಾ ಸೂರಿ 'ದಾದಾಗಿರಿ']


ದುನಿಯಾ ಸೂರಿ, ಸುಮನಾ ಕಿತ್ತೂರ್ ಮತ್ತು ಅಗ್ನಿ ಶ್ರೀಧರ್. ಈ ಮೂವರು ಸೇರಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಅಗ್ನಿ ಶ್ರೀಧರ್ ಕಥೆಗೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳಿರುವ 'ಸೈಲೆಂಟ್ ಸುನೀಲ', ಪ್ರೋಮೋ ಮೂಲಕ ಗಾಂಧಿನಗರದಲ್ಲಿ ಮತ್ತಷ್ಟು ಹವಾ ಕ್ರಿಯೇಟ್ ಮಾಡಿದೆ. (ಫಿಲ್ಮಿಬೀಟ್ ಕನ್ನಡ)

English summary
Duniya Soori directorial Kannada Movie Silent Sunila first look promo is out. Rowdysheeter Silent Sunila is making his onscreen debut with this movie. Watch the promo here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada