For Quick Alerts
  ALLOW NOTIFICATIONS  
  For Daily Alerts

  ಬರ್ತ್ ಡೇ ಬಾಯ್ ವಿಜಿಗೆ 'ಮಾಸ್ತಿ ಗುಡಿ' ಟೀಸರ್ ಗಿಫ್ಟ್

  By Suneetha
  |

  ಸ್ಯಾಂಡಲ್ ವುಡ್ ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸೈಡ್ ರೋಲ್ ಗಳಲ್ಲಿ ಮಿಂಚುತ್ತಿದ್ದ ನಟನನ್ನು ನಿರ್ದೇಶಕ ದುನಿಯಾ ಸೂರಿ ಅವರು 'ದುನಿಯಾ' ಸಿನಿಮಾದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಪರಿಚಯಿಸಿದರು.

  ತದನಂತರ ಗಾಂಧಿನಗರದಲ್ಲಿ 'ದುನಿಯಾ' ವಿಜಯ್ ಅಂತಾನೇ ಖ್ಯಾತಿ ಗಳಿಸಿದ ನಟ ಪಕ್ಕಾ ಮಾಸ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಮತ್ತು ಸಾಮಾಜಿಕ ಸೇವೆಗಳನ್ನು ಮಾಡುವ ಮೂಲಕ ಅಭಿಮಾನಿಗಳ ನೆಚ್ಚಿನ ನಾಯಕರಾದರು.[ವೀಕೆಂಡ್ ನಲ್ಲಿ ದುನಿಯಾ ವಿಜಯ್ ಕಣ್ಣೀರ ಕಥೆ ಅನಾವರಣ]

  ಇದೀಗ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟನಿಗೆ 'ಮಾಸ್ತಿ ಗುಡಿ' ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಸ್ಪೆಷಲ್ ಉಡುಗೊರೆ ನೀಡಿದ್ದಾರೆ. ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಅವರು ಬೇರೆ ಬೇರೆ ಲುಕ್ ಗಳಲ್ಲಿ ಡಿಫರೆಂಟ್ ಆಗಿ ಮಿಂಚಿದ್ದಾರೆ.

  ಇದೇ ಮೊದಲ ಬಾರಿಗೆ 'ದುನಿಯಾ' ವಿಜಿ ಅವರು ಮೂರು ವಿಭಿನ್ನ ಶೇಡ್ ನಲ್ಲಿ ಮಿಂಚಲಿದ್ದು, 25 ವರ್ಷದಲ್ಲಿ, 35 ವರ್ಷದಲ್ಲಿ ಮತ್ತು 75 ವರ್ಷದ ಮುದುಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.[75ರ ಮುದುಕನ ಪಾತ್ರದಲ್ಲಿ ದುನಿಯಾ ವಿಜಿ ಮಿಂಚಿಂಗು]

  ನಿಜ ಘಟನೆಯಾಧರಿತ ಕಥೆಯನ್ನು ಹೊಂದಿರುವ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ಕಾಡು ಕಾಯುವ ಕೆಲಸ ಮಾಡುತ್ತಿದ್ದು, ಪ್ರಾಣಿಗಳ ರಕ್ಷಣೆಗೆ ಪಣ ತೊಟ್ಟು ನಿಂತಿದ್ದಾರೆ.

  ಒಟ್ನಲ್ಲಿ ತಮ್ಮ ಹುಟ್ಟಹಬ್ಬದಂದು ತಾವೇ ಕಥೆ ಬರೆದಿರುವ 'ಮಾಸ್ತಿ ಗುಡಿ' ಸಿನಿಮಾದ ಟೀಸರ್ ಬಿಡುಗಡೆ ಮಾಡಿರುವ ನಿರ್ದೇಶಕ ನಾಗಶೇಖರ್ ಮತ್ತು ಚಿತ್ರತಂಡದ ಬಗ್ಗೆ ವಿಜಿ ಅವರು ಫುಲ್ ಖುಷ್ ಆಗಿದ್ದಾರೆ. ಅದೇನೇ ಇರಲಿ ಬರ್ತ್ ಡೇ ಬಾಯ್ ಗೆ ನಾವು ವಿಶ್ ಮಾಡೋಣ. ವಿಶ್ ಯೂ ಹ್ಯಾಪಿ ಬರ್ತ್ ಡೇ ದುನಿಯಾ ವಿಜಿ ಅವರೆ.['ಮಾಸ್ತಿ ಗುಡಿ' ದುನಿಯಾ ವಿಜಿ ರಿಯಲ್ ಕಹಾನಿನಾ?]

  ಬರ್ತ್ ಡೇ ಬಾಯ್ ದುನಿಯಾ ವಿಜಯ್ ಅವರು 'ಮಾಸ್ತಿ ಗುಡಿ' ಚಿತ್ರದಲ್ಲಿ ವಿಭಿನ್ನ ವೇಷದಲ್ಲಿ ಯಾವ ರೀತಿ ಮಿಂಚಿದ್ದಾರೆ ಎಂಬುದನ್ನು ನೋಡಲು ಈ ಟೀಸರ್ ನೋಡಿ...

  English summary
  Watch Kannada Actor Duniya Vijay's Kannada Movie 'Maasthi Gudi' Official Teaser. Directed by Nagshekar. Music Composed by Sadhu Kokila.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X