»   » ನಾಯಕಿಯಿಂದ 'ಜಾಕ್ಸನ್' ವಿಜಿಗೆ ಪೊರಕೆ ಸೇವೆ!

ನಾಯಕಿಯಿಂದ 'ಜಾಕ್ಸನ್' ವಿಜಿಗೆ ಪೊರಕೆ ಸೇವೆ!

Posted By:
Subscribe to Filmibeat Kannada

'ದುನಿಯಾ ವಿಜಿ'ಯ 'ಜಾಕ್ಸನ್' ಅವತಾರವನ್ನು ನಿಮ್ಮ ನೆಚ್ಚಿನ ತಾಣ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ನೋಡಿದ್ದೀರಾ. 'ಜಾಕ್ಸನ್' ಚಿತ್ರದಲ್ಲಿ ಸಖತ್ ಸ್ಟೈಲಿಶ್ ಆಗಿ 'ಮೈಕೇಲ್ ಜಾಕ್ಸನ್' ಗೆಟಪ್ ಹಾಕಿರುವುದನ್ನು ಬಿಟ್ಟರೆ 'ಜಾಕ್ಸನ್' ಹೇಗೆ ಅಂತ ನೀವು ಇಲ್ಲಿಯವರೆಗೆ ನೋಡಿರುವುದಕ್ಕೆ ಚಾನ್ಸೇ ಇಲ್ಲ.

ಜನವರಿ 15ಕ್ಕೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ತೆರೆಕಾಣುತ್ತಿರುವ 'ಜಾಕ್ಸನ್' ಚಿತ್ರದ ಟ್ರೇಲರ್ ಈಗ ಔಟ್ ಆಗಿದೆ. ಹೇಳಿ ಕೇಳಿ 'ಆಕ್ಷನ್ ಜಾಕ್ಸನ್' ಅಂತ್ಲೇ ಕರೆಸಿಕೊಳ್ಳುವ ದುನಿಯಾ ವಿಜಿ, ಚಿತ್ರದಲ್ಲಿ ಆಕ್ಷನ್ ಮಾಡ್ಲಿಲ್ಲ ಅಂದ್ರೆ ಹೇಗೆ?

'ಜಾಕ್ಸನ್' ಆಗಿ ಬೆಂಕಿಯೊಂದಿಗೆ ಸರಸವಾಡುವ ದುನಿಯಾ ವಿಜಿ, ವಿಲನ್ ಗಳನ್ನ ಹೇಗೆ ಬಗ್ಗು ಬಡಿಯುತ್ತಾರೆ ಅಂತ ಟ್ರೇಲರ್ ನಲ್ಲಿ ಸಸ್ಪೆನ್ಸ್ ಆಗಿ ಇಟ್ಟಿದ್ದರೂ, ಆರಂಭದಲ್ಲೇ 'ಎಚ್ಚರಿಕೆ ಗಂಟೆ'ಯನ್ನ ನಿರ್ದೇಶಕರು ಮೊಳಗಿಸಿರುವುದು ಕುತೂಹಲಕಾರಿ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Jackson1

ಮೊದಲ ನೋಟಕ್ಕೆ 'ಜಾಕ್ಸನ್' ಕಂಪ್ಲೀಟ್ ಫ್ಯಾಮಿಲಿ ಎಂಟರ್ ಟೇನರ್. ಹಾಡು, ಫೈಟು, ಡ್ಯಾನ್ಸು, ಕಾಮಿಡಿ...ಹೀಗೆ ಮನರಂಜನೆಗೆ ಬೇಕಾದ ಎಲ್ಲಾ ಅಂಶಗಳು 'ಜಾಕ್ಸನ್' ಚಿತ್ರದಲ್ಲಿ ಹೇರಳವಾಗಿದೆ.

'ಜಾನಿ ಮೇರಾ ನಾಮ್' ಚಿತ್ರದ ನಂತ್ರ ಮತ್ತೊಮ್ಮೆ ಸ್ಟೈಲಿಶ್ ಗೆಟಪ್ ಹಾಕಿರುವ ವಿಜಿ, 'ಮೈಕೇಲ್ ಜಾಕ್ಸನ್' ಸ್ಟೆಪ್ ಹಾಕುವುದಕ್ಕೂ ಸೈ, ನಾಯಕಿ ಕೈಯಿಂದ ಪೊರಕೆ ಪೂಜೆ ಮಾಡಿಸಿಕೊಳ್ಳುವುದಕ್ಕೂ ಜೈ.

ಇನ್ನೂ ಮೊದಲ ಬಾರಿ ದುನಿಯಾ ವಿಜಿಗೆ ಜೋಡಿಯಾಗಿರುವುದು ನಟಿ ಪಾವನಾ ಗೌಡ. ಲವ್ವಿ ಡವ್ವಿಗಿಂತ ಕಿತ್ತಾಡುವುರಲ್ಲೇ ಬಿಜಿಯಾಗಿರುವ ಈ ಜೋಡಿಯ ಮಧ್ಯೆ ನಕ್ಕು ನಲಿಸುವುದಕ್ಕಂತಲೇ ರಂಗಾಯಣ ರಘು ಮತ್ತು ಬುಲ್ಲೆಟ್ ಪ್ರಕಾಶ್ ತಂಡ ಇದೆ. ['ದುನಿಯಾ ವಿಜಿ'ಯ ನಾನಾ ಮುಖಗಳು]

Jackson2

ಎಂದಿನ ದುನಿಯಾ ವಿಜಿ ಸಿನಿಮಾಗಳಿಗಿಂತ ಕೊಂಚ ವಿಭಿನ್ನವಾಗಿರುವ 'ಜಾಕ್ಸನ್', ತಮಿಳಿನಲ್ಲಿ ಅದ್ಭುತ ಯಶಸ್ಸು ಕಂಡ 'ಇದಕ್ಕು ತಾನ್ ಆಸೈ ಪಟ್ಟಿಯಾ ಬಾಲಕುಮಾರ' ಚಿತ್ರದ ರೀಮೇಕ್.

ಆದರೂ, ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರಕಥೆಯಲ್ಲಿ ಕೊಂಚ ಬದಲಾವಣೆಯನ್ನು ತಂದು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ ಸನತ್ ಕುಮಾರ್. ವಿಜಿಯ ಆಪ್ತ ಗೆಳೆಯರೇ ಸಿನಿಮಾ ನಿರ್ಮಾಣ ಮಾಡುತ್ತಿರುವುದರಿಂದ ದುನಿಯಾ ವಿಜಿ 'ಫ್ರೀ ಕಾಲ್ ಶೀಟ್' ಕೊಟ್ಟಿರುವುದು ಚಿತ್ರದ ಮತ್ತೊಂದು ಸ್ಪೆಷಾಲಿಟಿ. [ದುನಿಯಾ ವಿಜಿ ಅಪ್ಪ, ವೆಸ್ಟ್ ಇಂಡೀಸ್ ಕ್ರಿಕೆಟ್ ಟೀಂ ಓಪನರ್!]

ಈಗಾಗಲೇ ರಿಲೀಸ್ ಆಗಿರುವ ಅರ್ಜುನ್ ಜನ್ಯ ಮ್ಯೂಸಿಕ್ ಮಾಡಿರುವ ಹಾಡುಗಳು ಗಾಂಧಿನಗರದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ಇದೀಗ ಟ್ರೇಲರ್ ಸರದಿ....(ಫಿಲ್ಮಿಬೀಟ್ ಕನ್ನಡ)

Jackson Trailer
English summary
Duniya Vijay starrer 'Jackson' official trailer is out and looks promising.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada