For Quick Alerts
  ALLOW NOTIFICATIONS  
  For Daily Alerts

  ಉಪ್ಪಿ ಮೇನಿಯಾ ಕಂಡ ನಿರ್ಮಾಪಕಿ ಪ್ರಿಯಾಂಕಾ ರಿಯಾಕ್ಷನ್

  By Suneetha
  |

  ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ಚಿತ್ರ 'ಉಪ್ಪಿ 2' ಬಿಡುಗಡೆಯಾದ ದಿನ ಅಭಿಮಾನಿಗಳ ಸಂಭ್ರಮ ಸಡಗರದ ಬಗ್ಗೆ ಪ್ರಿಯಾಂಕ ಉಪೇಂದ್ರ ಅವರು ಮಾತನಾಡಿದ್ದು, ಉಪ್ಪಿ ಮೇನಿಯಾ ಕಂಡು ಪ್ರಿಯಾಂಕ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

  'ಉಪ್ಪಿ 2' ಚಿತ್ರಕ್ಕೆ ಬಂಡವಾಳ ಹಾಕಿರುವ ಪ್ರಿಯಾಂಕ ಉಪೇಂದ್ರ ಅವರು ಚಿತ್ರಬಿಡುಗಡೆಯಾಗುವ ದಿನ ಚಿತ್ರಮಂದಿರಕ್ಕೆ ಬಂದು ಅಲ್ಲಿ ಅಭಿಮಾನಿಗಳ ಸಂಭ್ರಮ ಕಂಡು ತಾವು ಸಂತಸ ಪಟ್ಟು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಸಂತಸ ವನ್ನು ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ ನೋಡಿ.. [ಏಯ್, ನೀನೊಬ್ನೆನಾ ಕುಡಿಯೋದು, ನಿನಗಿಂತ ಜಾಸ್ತಿ ಕುಡಿತೀವಿ!]

  "ನಮಸ್ಕಾರ ನಾನು ಇವತ್ತು ಇಲ್ಲಿ ಅಭಿಮಾನಿಗಳಿಗೋಸ್ಕರ ಬಂದಿದ್ದೀನಿ ಜೊತೆಗೆ ಅಭಿಮಾನಿಗಳ ಜೊತೆ ಚಿತ್ರ ನೋಡಲು, ನಾನೂ ಉಪ್ಪಿ ಅವರ ಅಭಿಮಾನಿಯಾಗಿ ಬಂದಿದ್ದೇನೆ, ಇಲ್ಲಿ ಅಭಿಮಾನಿಗಳ ಸಂಭ್ರಮ, ಸಂತಸ ನೋಡಿ ತುಂಬಾ ಖುಷಿಯಾಗ್ತಾ ಇದೆ. ಈಗಲೂ ಅಭಿಮಾನಿಗಳು ಡಾನ್ಸ್ ಮಾಡುತ್ತಿದ್ದಾರೆ.[ಐಎಂಡಿಬಿ ರೇಟಿಂಗ್ ನಲ್ಲಿ ಉಪ್ಪಿಗಿಂತ ರುಚಿ ಬೇರೆ ಇಲ್ಲ!]

  ಇದು ನಮ್ಮ ಫಸ್ಟ್ ಪ್ರೊಡಕ್ಷನ್ ಆದ್ರಿಂದ ತುಂಬಾ ನಿರೀಕ್ಷೆಗಳು ಇತ್ತು, ತುಂಬಾ ಖುಷಿಯಾಗ್ತ ಇದೆ, ಯಾಕಂದ್ರೆ ಚಿತ್ರಮಂದಿರದ ಎದುರುಗಡೆ ಒಂಥರಾ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದಾರೆ.

  ತುಂಬಾ ದಿನಗಳಿಂದ ಆಸೆ ಇತ್ತು ಅಭಿಮಾನಿಗಳೊಂದಿಗೆ ಫಸ್ಟ್ ಶೋ ನೋಡಲು ಸೋ ಅದಕ್ಕೆ ಬಂದಿದ್ದೀನಿ, 'ಉಪ್ಪಿ 2' ಸತತ ಎರಡು ವರ್ಷಗಳ ಹಾರ್ಡ್ ವರ್ಕ್ ತುಂಬಾ ಪ್ರೀತಿಯಿಂದ ಚಿತ್ರ ನೋಡಲು ಬಂದಿದ್ದೀನಿ, ಎದೆ ತುಂಬಿ ಹೋಗುತ್ತಿದೆ. ಎಲ್ಲರೂ ಇಷ್ಟ ಪಡುತ್ತಿದ್ದಾರೆ, ಇನ್ನೂ ಕೆಲವರು ಇನ್ನೊಂದು ಬಾರಿ ನೋಡಿ ಅರ್ಥ ಮಾಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ.[ವಿಮರ್ಶಕರ ಪ್ರಕಾರ ಉಪ್ಪಿಟ್ಟು ರುಚಿ ಹೇಗಿದೆ?]

  ಒಟ್ಟಾರೆ ಅಭಿಮಾನಿಗಳಿಗೆ ಉಪ್ಪಿ ಮೇಲಿರುವ ಈ ಪ್ರೀತಿ, ಅಭಿಮಾನ ನೋಡಿ ತುಂಬಾ ಸಂತೋಷ ಆಗುತ್ತಿದೆ. ಎಲ್ಲರಿಗೂ ತುಂಬಾ ತುಂಬಾ ಧನ್ಯವಾದ ಎಂದು ಪ್ರಿಯಾಂಕ ಅವರು ತುಂಬಿದ ಮನಸ್ಸಿನಿಂದ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ.

  ಅಂತೂ ಇಂತೂ ಈ ವರ್ಷ ಎಲ್ಲಿ ಹೋದರೂ 'ಉಪ್ಪಿ-ಟ್ಟು' ಮೇನಿಯಾ ಜೊತೆಗೆ ಗಾಂಧಿನಗರದಲ್ಲಂತೂ ಉಪ್ಪಿ ಬಗ್ಗೆ ಮಾತು-ಕತೆ ಜೊತೆಗೆ ಚರ್ಚೆಗಳು ನಡೆಯುತ್ತಿದೆ. ಒಟ್ನಲ್ಲಿ ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಲ್ವಾ, ನೀವೇನಂತೀರಾ.

  English summary
  Watch & Enjoy an Exclusive Interview Of Priyanka Upendra. First Day First Show Review of Kannada Movie 'Uppi2'. 'Upendra 2' Starring Upendra, Kristina Akheeva, Parul Yadav which is Directed by Upendra. Fans Celebrations, Public Response, Audience Review and Response of Uppi2 Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X