»   » ಟ್ರೈಲರ್ ಹೇಗಿದೆ.? ಒಮ್ಮೆ 'Zooಮ್' ಮಾಡಿ ನೋಡಿ ಹೇಳಿ...

ಟ್ರೈಲರ್ ಹೇಗಿದೆ.? ಒಮ್ಮೆ 'Zooಮ್' ಮಾಡಿ ನೋಡಿ ಹೇಳಿ...

Posted By:
Subscribe to Filmibeat Kannada

ಹಿಂದೆಂದಿಗಿಂತಲೂ ಸೂಪರ್ ಸ್ಟೈಲಿಶ್ ಲುಕ್ ನಲ್ಲಿ 'ಗೋಲ್ಡನ್ ಸ್ಟಾರ್' ಗಣೇಶ್, ಇದುವರೆಗೂ ಕಾಣಿಸಿಕೊಳ್ಳದ ಡಿಫರೆಂಟ್ ಗೆಟಪ್ ನಲ್ಲಿ 'ಸ್ಯಾಂಡಲ್ ವುಡ್ ಪ್ರಿನ್ಸೆಸ್' ರಾಧಿಕಾ ಪಂಡಿತ್, ಇವರ ಮಧ್ಯೆ ಮೊದಲ ಬಾರಿಗೆ 'ಸಿಂಗಲ್ ಮೀನಿಂಗ್' ಮಾತಾಡುವ ಕಾಶೀನಾಥ್....ಇಂತಹ ಹತ್ತು ಹಲವು ಸರ್ ಪ್ರೈಸ್ ನೊಂದಿಗೆ ತೆರೆಗೆ ಬರಲು ಸಿದ್ಧವಾಗಿರುವ ಸಿನಿಮಾ 'Zooಮ್'.

ಈಗಾಗಲೇ ಗಾಂಧಿನಗರದ ಗಲ್ಲಿಗಳಲ್ಲಿ ಬೇಜಾನ್ ಟಾಕ್ ಆಗಿರುವ 'Zooಮ್' ಚಿತ್ರದ ಟ್ರೈಲರ್ ನಿನ್ನೆ (ಜೂನ್ 12) ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಯ್ತು.


ಮೊದಲ ಬಾರಿಗೆ ಜೋಡಿಯಾಗಿರುವ ಗಣೇಶ್-ರಾಧಿಕಾ ಪಂಡಿತ್ ಕೆಮಿಸ್ಟ್ರಿ-ಬಯಾಲಜಿ ಹೇಗಿದೆ ಅಂತ ನೋಡ್ಬೇಕಾ.? ಹಾಗಾದ್ರೆ, 'Zooಮ್' ಮಾಡಿ ನೋಡಿ.....


watch-ganesh-starrer-kannada-movie-zoom-trailer

ಮೊದಲ ನೋಟಕ್ಕೆ 'Zooಮ್' ಸಿನಿಮಾ ಸೂಪರ್ ಸ್ಟೈಲಿಶ್ ಆಗಿದೆ. ಅದಕ್ಕೆಲ್ಲಾ ಗಣೇಶ್ ಹಾಗೂ ರಾಧಿಕಾ ಪಂಡಿತ್ ಮೇಕ್ ಓವರ್ ಕಾರಣ. ['ಇಟಲಿ' ದಿನಪತ್ರಿಕೆಯಲ್ಲಿ ಗಣೇಶ್-ರಾಧಿಕಾ ಪಂಡಿತ್ ಸುದ್ದಿ!]


ಹೇಳಿ ಕೇಳಿ, ಇದು ಗಣೇಶ್ ಸಿನಿಮಾ. ಹೀಗಾಗಿ, ಗಣಿ ಇಲ್ಲಿ ಪಟ-ಪಟ ಅಂತ ಮಾತಾಡ್ತಾರೆ. ಅವರಿಗೆ 'ಸಿಂಗಲ್ ಮೀನಿಂಗ್' ಕಾಶೀನಾಥ್, 'ಡಬಲ್ ಮೀನಿಂಗ್' ಸಾಧು ಮಹರಾಜ್ ಸಾಥ್ ನೀಡಿದ್ದಾರೆ.


ಬರೀ ಮಾತಷ್ಟೇ ಅಲ್ಲ, 'Zooಮ್' ಚಿತ್ರದಲ್ಲಿ ಗಣೇಶ್ ಸೂಪರ್ ಸ್ಟಂಟ್ಸ್ ಮಾಡಿದ್ದಾರೆ. ಅದಕ್ಕೆ ಈ ಟ್ರೈಲರ್ರೇ ಸಾಕ್ಷಿ. ['ZOOಮ್' ಚಿತ್ರಕ್ಕೆ 'ಗಾನ ಕೋಗಿಲೆ' ಆದರು ನಟಿ ರಾಧಿಕಾ ಪಂಡಿತ್!]


ಪ್ರತಿ ಫ್ರೇಮ್ ಕೂಡ ರಿಚ್ ಆಗಿ ಕಟ್ಟಿಕೊಡುವಲ್ಲಿ ಸ್ಟೈಲಿಶ್ ನಿರ್ದೇಶಕ ಪ್ರಶಾಂತ್ ರಾಜ್ ಶ್ರಮ ಟ್ರೈಲರ್ ನಲ್ಲಿ ಎದ್ದು ಕಾಣುತ್ತೆ.


ಎಸ್.ಎಸ್.ಥಮನ್ ಸಂಗೀತ ನೀಡಿರುವ 'Zooಮ್' ಸಿನಿಮಾ ಜುಲೈ ಒಂದರಂದು ಬಿಡುಗಡೆ ಆಗಲಿದೆ. ಅಲ್ಲಿವರೆಗೂ, ಟ್ರೈಲರ್ ನೋಡಿ ಖುಷಿ ಪಡಿ....

English summary
Golden Star Ganesh and Radhika Pandit starrer Kannada Movie 'Zoom' theatrical trailer is out. At the first glance, 'Zoom' trailer looks stylish. The movie is directed by Prashant Raj.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada