»   » ಹೊಸ ವರ್ಷಕ್ಕೆ ಜೂ.ಎನ್.ಟಿ.ಆರ್ ಕೊಟ್ಟ ಉಡುಗೊರೆ

ಹೊಸ ವರ್ಷಕ್ಕೆ ಜೂ.ಎನ್.ಟಿ.ಆರ್ ಕೊಟ್ಟ ಉಡುಗೊರೆ

Posted By:
Subscribe to Filmibeat Kannada

ಹೊಸ ವರ್ಷ ಬಂದೇ ಬಿಟ್ಟಿದೆ. ಎಲ್ಲರ ಮೊಗದಲ್ಲೂ ಹೊಸ ಹರ್ಷ ಹರಿದಾಡುತ್ತಿದೆ. ಈ ಹರ್ಷವನ್ನ ಇಮ್ಮಡಿಗೊಳಿಸುವುದಕ್ಕೆ ಏನೇನ್ ಉಡುಗೊರೆ ಕೊಡಬಹುದು.? ಯಾರ್ಯಾರು ಏನೇನು ಕೊಡ್ತೀರೋ, ಬಿಡ್ತೀರೋ. ಜೂ.ಎನ್.ಟಿ.ಆರ್ ಮಾತ್ರ, ತಮ್ಮ ಅಭಿಮಾನಿಗಳಿಗೆ ಹೈ ವೋಲ್ಟೇಜ್ ಗಿಫ್ಟ್ ಕೊಟ್ಟಿದ್ದಾರೆ.

ಅದೇನಪ್ಪಾ ಅಂದ್ರೆ, ಹೊಸ ವರ್ಷದ ಪ್ರಯುಕ್ತ ಜೂ.ಎನ್.ಟಿ.ಆರ್, ತಮ್ಮ ಹೊಚ್ಚ ಹೊಸ 'ಟೆಂಪರ್' ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. 'ರಭಸ' ಚಿತ್ರದ ನಂತ್ರ ಜೂ.ಎನ್.ಟಿ.ಆರ್ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರವೇ ಈ 'ಟೆಂಪರ್'.

jr.ntr

ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ 'ಟೆಂಪರ್' ಚಿತ್ರದಲ್ಲಿ ಮಿಂಚುತ್ತಿರುವ ಜೂ.ಎನ್.ಟಿ.ಆರ್, ಚಿತ್ರಕ್ಕೋಸ್ಕರ ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿದ್ದ 'ಟೆಂಪರ್' ಚಿತ್ರದ ಪೋಸ್ಟರ್ ನಲ್ಲಿ ಟಾಲಿವುಡ್ ನ ಮರಿ ಹುಲಿಯ ಘರ್ಜನೆ ಜೋರಾಗಿ ಕಂಡು ಬಂದಿತ್ತು. ಇದೀಗ ರಿಲೀಸ್ ಆಗಿರುವ ಟೀಸರ್ ನಲ್ಲಿ ಜೂನಿಯರ್ ಟೈಗರ್ ಅಕ್ಷರಶಃ ಆರ್ಭಟಿಸಿದ್ದಾರೆ. ['ಟೆಂಪರ್' ರೈಸ್ ಆದ ಜೂ.ಎನ್.ಟಿ.ಆರ್ ಮಾಡಿದ್ದೇನು?]

ಟೈಟಲ್ ಗೆ ತಕ್ಕ ಹಾಗೆ ಟೆಂಪರ್ ರೇಸ್ ಮಾಡಿಕೊಂಡಿರುವ ಜೂ.ಎನ್.ಟಿ.ಆರ್, ವಿಲನ್ ಗಳಿಗೆ ಬುಲ್ಲೆಟ್ ವೇಗದಲ್ಲಿ ಡೈಲಾಗ್ಸ್ ಹೊಡೆದು ಬಿಸಿ ಮುಟ್ಟಿಸಿರುವ ಟೀಸರ್ ಇದೀಗ ಬಿಡುಗಡೆ ಆಗಿದೆ. ಅದ್ರಲ್ಲೂ, ಜೂ.ಎನ್.ಟಿ.ಆರ್ ಗೆ ಪ್ರಕಾಶ್ ರಾಜ್ ಟಾಂಗ್ ಕೊಡೋದ್ರಿಂದ 'ಟೆಂಪರ್', ಅಭಿಮಾನಿಗಳ ಹಾರ್ಟ್ ಬೀಟ್ ರೇಸ್ ಮಾಡಿದೆ.

Watch Jr.NTR starrer Temper movie teaser1

'ಬಾದ್ ಷಾ' ಮತ್ತು 'ಬೃಂದಾವನ' ಚಿತ್ರಗಳ ನಂತ್ರ ಜೂ.ಎನ್.ಟಿ.ಆರ್ ಗೆ 'ಟೆಂಪರ್' ಚಿತ್ರದಲ್ಲಿ ಮತ್ತೆ ಜೋಡಿಯಾಗಿರುವುದು ಕಾಜಲ್ ಅಗರ್ ವಾಲ್. ಹಿಟ್ ಡೈರೆಕ್ಟರ್ ಪುರಿ ಜಗನ್ನಾಥ್ ನಿರ್ದೇಶನದಲ್ಲಿ 'ಟೆಂಪರ್' ರೆಡಿಯಾಗುತ್ತಿರುವುದಕ್ಕೆ ಸಿನಿಮಾದ ಬಗ್ಗೆ ಕುತೂಹಲ ಜಾಸ್ತಿ.

ಈಗಾಗಲೇ ಬಿರುಸಿನಿಂದ ಚಿತ್ರೀಕರಣ ನಡೆಸುತ್ತಿರುವ 'ಟೆಂಪರ್' ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಟೀಸರ್ ನಲ್ಲೇ ಇಷ್ಟೆಲ್ಲಾ ಬಿಲ್ಡಪ್ ತೆಗೆದುಕೊಂಡಿರುವ ಜೂ.ಎನ್.ಟಿ.ಆರ್, ಇನ್ನೂ ಸಿನಿಮಾದಲ್ಲಿ ಹೇಗೆಲ್ಲಾ ಆರ್ಭಟಿಸಬಹುದು ಅಂತ ಸ್ವಲ್ಪ ಊಹಿಸಿಕೊಳ್ಳಿ.

English summary
Jr.NTR's brand new movie Temper teaser is out. Puri Jagannadh directorial venture Temper teaser is a treat for Tarak Fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada