»   » ಒನ್ ಇಂಡಿಯಾ ಕಛೇರಿಯಲ್ಲಿ 'ಕಾಫಿ ತೋಟ' ತಂಡದ ಫೇಸ್ ಬುಕ್ ಲೈವ್

ಒನ್ ಇಂಡಿಯಾ ಕಛೇರಿಯಲ್ಲಿ 'ಕಾಫಿ ತೋಟ' ತಂಡದ ಫೇಸ್ ಬುಕ್ ಲೈವ್

Posted By:
Subscribe to Filmibeat Kannada

ಹತ್ತು ವರ್ಷಗಳ ಸುದೀರ್ಘ ಗ್ಯಾಪ್ ನ ನಂತರ ನಿರ್ದೇಶಕ ಟಿ.ಎನ್.ಸೀತಾರಾಂ 'ಕಾಫಿ ತೋಟ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೊಂದಿರುವ 'ಕಾಫಿ ತೋಟ' ಸಿನಿಮಾ ಸದ್ಯದಲ್ಲಿಯೇ ನಿಮ್ಮೆಲ್ಲರ ಮುಂದೆ ಬರಲಿದೆ.

'ಕಾಫಿ ತೋಟ' ಸಿನಿಮಾದ ಪ್ರಮೋಷನ್ ನಿಮಿತ್ತ ನಿರ್ದೇಶಕ ಟಿ.ಎನ್.ಸೀತಾರಾಂ, ನಟಿ ರಾಧಿಕಾ ಚೇತನ್, ನಟ ರಾಹುಲ್ ಹಾಗೂ ಸುಂದರ್ ರಾಜ್ ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಂದು ನಿಮ್ಮ ಫಿಲ್ಮಿಬೀಟ್ ಕನ್ನಡ/ಒನ್ ಇಂಡಿಯಾ ಕಛೇರಿಗೆ ಭೇಟಿ ನೀಡಿದ್ದರು.

Watch 'Kaafi Thota' Facebook live in Filmibeat Kannada FB Page

'ಶಿರಸಿಭವನ'ದಿಂದ 'ಕಾಫಿ ತೋಟ'ಕ್ಕೆ ತೇಜಸ್ವಿನಿ ಅಕ್ಕ

ಅಂದು 'ಕಾಫಿ ತೋಟ' ತಂಡದೊಂದಿಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪುಟದಲ್ಲಿ ಲೈವ್ ಮಾಡಿದ್ವಿ.

ಓದುಗರು ಕೇಳಿದ ಅನೇಕ ಪ್ರಶ್ನೆಗಳಿಗೆ ಟಿ.ಎನ್.ಸೀತಾರಾಂ, ರಾಧಿಕಾ ಚೇತನ್ ಹಾಗೂ ರಾಹುಲ್ ಮುಕ್ತವಾಗಿ ಉತ್ತರ ನೀಡಿದರು. ಸಾವಿರಾರು ಓದುಗರು 'ಕಾಫಿ ತೋಟ' ತಂಡದ ಫೇಸ್ ಬುಕ್ ಲೈವ್ ನ ವೀಕ್ಷಿಸಿ, ಚಿತ್ರಕ್ಕೆ ಶುಭ ಹಾರೈಸಿದರು.

ಸಸ್ಪೆನ್ಸ್ ಥ್ರಿಲ್ಲರ್ 'ಕಾಫಿತೋಟ'ದ ನಿರ್ದೇಶಕ ಸೀತಾರಾಮ್ ಸಂದರ್ಶನ

ಒಂದು ವೇಳೆ, 'ಕಾಫಿ ತೋಟ' ತಂಡದ ಫೇಸ್ ಬುಕ್ ಲೈವ್ ನ ನೀವು ನೋಡಿಲ್ಲ ಅಂದ್ರೆ, ಈಗ ಮಿಸ್ ಮಾಡಿಕೊಳ್ಳಬೇಡಿ....

ಅಂದ್ಹಾಗೆ, ಇಂದು (ಭಾನುವಾರ, ಆಗಸ್ಟ್ 6) 'ಕಾಫಿ ತೋಟ' ಚಿತ್ರದ ಟ್ರೈಲರ್ ನ ರಾಕಿಂಗ್ ಸ್ಟಾರ್ ಯಶ್ ಹಾಗೂ ಯೋಗರಾಜ್ ಭಟ್ ಬಿಡುಗಡೆ ಮಾಡಲಿದ್ದಾರೆ.

English summary
Watch TN Seetharam directorial 'Kaafi Thota' Facebook live in Filmibeat Kannada FB Page

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada