»   » ಮಾಡೋಕ್ ಬೇರೆ ಕೆಲ್ಸ ಇಲ್ಲ: ಯೂಟ್ಯೂಬ್ ನಲ್ಲಿ ಕಬಾಲಿ 'ತಿಥಿ'

ಮಾಡೋಕ್ ಬೇರೆ ಕೆಲ್ಸ ಇಲ್ಲ: ಯೂಟ್ಯೂಬ್ ನಲ್ಲಿ ಕಬಾಲಿ 'ತಿಥಿ'

Posted By:
Subscribe to Filmibeat Kannada

'ಕಬಾಲಿ ಡಾ..' ಅಂತ ರಜನಿ ಬಾಯಲ್ಲಿ ಸೂಪರ್ ಸ್ಟೈಲಿಶ್ ಆಗಿ ಬಂದಿರುವ ಡೈಲಾಗ್ ವರ್ಲ್ಡ್ ಫೇಮಸ್ ಆಗುತ್ತೆ ಅಂದ್ರೆ, ರಜನಿ ಮತ್ತು ಅವರ ಸ್ಟೈಲ್ ಗೆ ಇರುವ ಕ್ರೇಜ್ ನ ಒಮ್ಮೆ ಊಹಿಸಿಕೊಳ್ಳಿ....

ರಜನಿಕಾಂತ್ ಹೇಳಿ ಕೇಳಿ ಸೂಪರ್ ಸ್ಟಾರ್...ಅವರಿಗೆ ಕ್ರೇಜ್ ಇರಬೇಕಾದ್ದೆ ಬಿಡಿ. ಆದ್ರೆ, ನಮ್ಮ 'ತಿಥಿ' ಸಿನಿಮಾದ ಕಲಾವಿದರನ್ನ ನೋಡಿ...ಯಾವುದೇ ಸ್ಟಾರ್ ವಾಲ್ಯು ಇಲ್ಲದ ಗಡ್ಡಪ್ಪ ಮತ್ತು ಸೆಂಚುರಿಗೌಡ ಪಾತ್ರಧಾರಿಗಳು ವಿಶ್ವದಾದ್ಯಂತ ಪ್ರಸಿದ್ಧಿ ಪಡೆಯುತ್ತಿದ್ದಾರೆ. [ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

ರಜನಿಕಾಂತ್ ಜೊತೆ 'ತಿಥಿ' ಚಿತ್ರದ ಗಡ್ಡಪ್ಪ ಮತ್ತು ಸೆಂಚುರಿ ಗೌಡ ರವರಿಗೆ ನಟಿಸುವ ಅವಕಾಶ ಸಿಗುತ್ತೋ, ಸಿಗಲ್ವೋ ಸದ್ಯಕ್ಕೆ ಹೇಳುವುದು ಕಷ್ಟ. ಆದ್ರೆ, 'ಮಾಡೋಕೆ ಬೇರೆ ಕೆಲಸ ಇಲ್ದೇ' ಇರೋರು ಈಗಾಗಲೇ ರಜನಿ ಮತ್ತು ಗಡ್ಡಪ್ಪ ರವರನ್ನು ಒಂದು ಮಾಡಿ ಕೆಲ ತರ್ಲೆ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದಾರೆ. ಅಂತಹ ವಿಡಿಯೋಗಳ ಕಲೆಕ್ಷನ್ ಇಲ್ಲಿದೆ ನೋಡಿ....

'ಕಬಾಲಿ' ಸ್ಟೈಲ್ ನಲ್ಲಿ ಗಡ್ಡಪ್ಪ.!

ಸೂಪರ್ ಸ್ಟಾರ್ ರಜನಿಕಾಂತ್ ರವರ 'ಕಬಾಲಿ' ಸ್ಟೈಲ್ ನೋಡಿದ್ದೀರಾ. ಆದ್ರೆ, ಗಡ್ಡಪ್ಪ 'ಕಬಾಲಿ' ಸ್ಟೈಲ್ ನಲ್ಲಿ ಬಂದ್ರೆ ಹೇಗಿರುತ್ತೆ ಗೊತ್ತಾ.? ಗೊತ್ತಿಲ್ಲ ಅಂದ್ರೆ, ಈ ವಿಡಿಯೋ ನೋಡಿ....ನಕ್ಕುಬಿಡಿ....

ಮಜವಾದ ವಿಡಿಯೋ ಇಲ್ಲಿದೆ ನೋಡಿ....

'ತಿಥಿ' ಚಿತ್ರದ ಕೆಲ ತುಣುಕುಗಳ ಜೊತೆ 'ಕಬಾಲಿ' ಡೈಲಾಗ್ ರೀಮಿಕ್ಸ್ ಮಾಡಿರುವ ಮಜವಾದ ವಿಡಿಯೋ ಇಲ್ಲಿದೆ ನೋಡಿ....

ಗಡ್ಡಪ್ಪ-ಕಬಾಲಿ ಜುಗಲ್ಬಂದಿ.!

'ತಿಥಿ' ಚಿತ್ರದ ಗಡ್ಡಪ್ಪ ಮತ್ತು 'ಕಬಾಲಿ' ರಜನಿಕಾಂತ್ ನಡುವೆ ಸಂಭಾಷಣೆ ಆದ್ರೆ ಹೇಗಿರುತ್ತೆ ಎಂಬ ಸಣ್ಣ ಝಲಕ್ ಇಲ್ಲಿದೆ ನೋಡಿ....

ಕನ್ನಡದ 'ಕಬಾಲಿ'

ಕನ್ನಡದ 'ಕಬಾಲಿ' ಯಾರು ಅಂತ ತಿಳಿದುಕೊಳ್ಳಬೇಕಾದರೆ, ನೀವು ಈ ವಿಡಿಯೋ ನೋಡಲೇಬೇಕು.!

English summary
You just can't stop laughing watching 'Kabali' teaser spoof remixed with Kannada Movie 'Thithi'. Just have a look at the videos.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada