»   » ನರಸಿಂಹರಾಜು ಮೊಮ್ಮಕ್ಕಳಿಂದ ಥ್ರಿಲ್ಲರ್ ಸಿನ್ಮಾ ಟ್ರೈಲರ್

ನರಸಿಂಹರಾಜು ಮೊಮ್ಮಕ್ಕಳಿಂದ ಥ್ರಿಲ್ಲರ್ ಸಿನ್ಮಾ ಟ್ರೈಲರ್

Posted By:
Subscribe to Filmibeat Kannada

'ಹಾಸ್ಯ ಚಕ್ರವರ್ತಿ' ನರಸಿಂಹರಾಜು ಅವರ ಪುಣ್ಯತಿಥಿಯ ಸಂಸ್ಮರಣೆಯೊಂದಿಗೆ ಅವರ ಮೊಮ್ಮಕ್ಕಳಾದ ಜುಗಾರಿ ಚಿತ್ರ ಖ್ಯಾತಿಯ ಅವಿನಾಶ್ ಹಾಗೂ ಅರವಿಂದ್ ಅವರು 'ಲಾಸ್ಟ್ ಬಸ್ ' ಹೆಸರಿನಲ್ಲಿ ಹೊಚ್ಚ ಹೊಸ ಸಿನಿಮಾವನ್ನು ಕನ್ನಡಿಗರಿಗೆ ನೀಡುತ್ತಿದ್ದಾರೆ. ಥ್ರಿಲ್ಲರ್ ಕೆಟಗೆರಿ ಸೇರಬಲ್ಲ ಚಿತ್ರದ ಟ್ರೈಲರ್ ಮುಂಡಿಟ್ಟಿದ್ದಾರೆ.

ನಿರ್ದೇಶಕ ಅರವಿಂದ್ ಅವರು ಹೇಳುವಂತೆ ಇದು Psychological mystery Thriller ಸಿನಿಮಾ. ಸ್ವಂತ ಕಥೆ, ಅಂತಾರಾಷ್ಟ್ರೀಯ ಗುಣಮಟ್ಟದ ಥ್ರಿಲ್ಲರ್ ಚಿತ್ರ ನೀಡುವ ಹುಮ್ಮಸ್ಸಿನಲ್ಲಿರುವ ಈ ತಂಡಕ್ಕೆ ಹಲವಾರು ಸಮಾನ ಮನಸ್ಕರು ಬೆಂಬಲವಾಗಿ ನಿಂತಿದ್ದಾರೆ. ಅನಂತ್ ಅರಸ್ ಅವರ ಛಾಯಾಗ್ರಾಹಣದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಎಸ್ ಡಿ ಅರವಿಂದ್ ಅವರೇ ಸಂಗೀತ ನೀಡಿದ್ದಾರೆ.[ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರನ್ನು ನೆನೆಯುತ್ತಾ..]

Last Bus

ಜುಲೈ 24ರಂದು ನರಸಿಂಹರಾಜು ಅವರ 93ನೇ ಹುಟ್ಟುಹಬ್ಬದಂದು ಲಾಸ್ಟ್ ಬಸ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಚಿತ್ರದಲ್ಲಿ ಏಳು ಪಾತ್ರಗಳಿದ್ದು, ಮಲೆನಾಡಿನಲ್ಲಿ ಬಹುತೇಕ ಭಾಗ ಚಿತ್ರೀಕರಣಗೊಂಡಿದೆ.

ನರಸಿಂಹರಾಜು ಅವರ ಮೊಮ್ಮಕ್ಕಳಾದ ಅರವಿಂದ್, ಅವಿನಾಶ್ ಸೇರಿದಂತೆ ಬಿ ಕೃಷ್ಣಪ್ಪ, ಗುರುರಾಜ್ ಕುಲಕರ್ಣಿ, ಪ್ರಶಾಂತ್ ಕಲ್ಲೂರ್, ಜಿಎಂಸಿ ರೆಡ್ಡಿ ಚಿತ್ರಕ್ಕೆ ಹಣ ಹೂಡಿದ್ದಾರೆ.

Last Bus movie scene

ದಿನಕರ್ ತೂಗುದೀಪ್ ಅವರು ಚಿತ್ರದ ರಷಸ್, ಪ್ರೋಮೋ ನೋಡಿ ಮೆಚ್ಚಿದ್ದಲ್ಲದೆ ಮೊದಲ ಪ್ರೇಕ್ಷಕನಾಗಿ ವೀಕ್ಷಿಸಿ ಆನಂದಿಸಿ, ಖುಷಿಯಿಂದ ಚಿತ್ರದ ವಿತರಣೆ ಮಾಡುವುದಾಗಿ ಭರವಸೆ ನೀಡಿದರು ಎಂದು ನಿರ್ದೇಶಕ ಅರವಿಂದ್ ಹೇಳಿದರು.

ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಅವಿನಾಶ್ ನರಸಿಂಹ ರಾಜು, ದೀಪಾ ಗೌಡ, ಮಾನಸ ಜೋಶಿ, ಮೇಘಶ್ರೀ ಭಾಗವತರ್, ರಾಜೇಶ್, ರಾಕಾ ಶಂಕರ್ ಮುಂತಾದವರಿದ್ದಾರೆ. ಚಿತ್ರದ ಟ್ರೈಲರ್ ನೋಡಿ ಆನಂದಿಸಿ...


English summary
LAST BUS is a Kannada film created in the new genre of a Psychological Mystery Thriller (PMT). This New Age film based on an Original Story and Presented by a creative team is directed by S D Arvinda of JUGAARI fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada