»   » ''ಥೂ....'ದನ ಕಾಯೋ' ದುನಿಯಾ ವಿಜಿನ ತಂದು''

''ಥೂ....'ದನ ಕಾಯೋ' ದುನಿಯಾ ವಿಜಿನ ತಂದು''

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ್ ಭಟ್ ಮತ್ತು ದುನಿಯಾ ವಿಜಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರ 'ದನ ಕಾಯೋನು'. ಹೆಸರು ಹೇಗೆ ಪಕ್ಕಾ ಲೋಕಲ್ ಆಗಿದೆಯೋ, ಸಿನಿಮಾ ಕೂಡ ಅಷ್ಟೇ ಲೋಕಲ್ ಆಗಿದೆ.

ಅದಕ್ಕೆ ಪುರಾವೆ ಅನ್ನುವಂತೆ ಈಗಾಗಲೇ 'ದನ ಕಾಯೋನು' ಅಡ್ಡದಿಂದ ಕೆಲ ಫೋಟೋಗಳು ರಿಲೀಸ್ ಆಗಿವೆ. ಎಲ್ಲಾ ಫೋಟೋಗಳಲ್ಲೂ ದುನಿಯಾ ವಿಜಿ ಮತ್ತು ಪ್ರಿಯಾಮಣಿ ಹೇಗ್ ಕಾಣ್ತಾರೆ ಅಂತ ನೀವು ನೋಡಿರಬಹುದು. [ಅಯ್ಯಯ್ಯೋ...ಪ್ರಿಯಾಮಣಿ ಯಾಕಿಂಗ್ ಆಗ್ಬುಟ್ರು.!?]

Watch Kannada Movie 'Dana Kayonu' teaser

ಕೈಲಿ ಕೋಲು ಹಿಡಿದು ದುನಿಯಾ ವಿಜಿ 'ಅರೆ ಹ್ಯುಯ್...ಅರೆ ಹ್ಯುಯ್...' ಅಂತ ದನ ಓಡ್ಸ್ತಿದ್ರೆ, ಪ್ರಿಯಾಮಣಿಗೆ ಬೆರಣಿ ತಟ್ಟೋದಷ್ಟೇ ಕೆಲಸ. ಇಬ್ಬರ ಕಾಂಬಿನೇಷನ್ ಸಿನಿಮಾದಲ್ಲಿ ಹೇಗಿದೆ ಅಂತ ತಿಳಿದುಕೊಳ್ಳುವುದಕ್ಕೆ 'ದನ ಕಾಯೋನು' ಚಿತ್ರದ ಈ ಲೇಟೆಸ್ಟ್ ಟೀಸರ್ ನೋಡಿ....

ಹರಕಲು ಇಂಗ್ಲೀಷ್ ನಲ್ಲಿ ದುನಿಯಾ ವಿಜಿ, ಫಾರಿನ್ ಕನ್ಯೆಯರಿಗೆ 'ಗಿಲ್ಲಿದಾಂಡು' ಆಟ ಹೇಳಿಕೊಟ್ಟು, ಪ್ರಿಯಾಮಣಿ ಕಾಲಿಂದ ವದೆ ತಿನ್ನುವ ಈ ಟೀಸರ್ ಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ.

ಹೇಳಿ ಕೇಳಿ ಇದು ಯೋಗರಾಜ್ ಭಟ್ರ ಚಿತ್ರ. 'ಕೋಲು' ಮತ್ತು 'ಹೋಲು' ಬರೀ ಸ್ಯಾಂಪಲ್ ಅಷ್ಟೇ. ಪಿಕ್ಚರ್ ನಲ್ಲಿ ಬಾಕಿ ಇನ್ನೂ ಏನೇನ್ ಇರ್ತಾವೋ ಆ ಭಟ್ರಿಗೇ ಗೊತ್ತು. ಸದ್ಯಕ್ಕೆ ಶೂಟಿಂಗ್ ನಲ್ಲಿ 'ದನ ಕಾಯೋನು' ಬಿಜಿಯಾಗಿದ್ದಾನೆ. ಅದು ಕಂಪ್ಲೀಟ್ ಆಗ್ತಿದ್ಹಂಗೆ ಇಂತಹ ಮತ್ತೊಂದು ಟ್ರೈಲರ್ ಹೊರಬೀಳಲಿದೆ.

English summary
Kannada Actor Duniya Vijay and Priyamani starrer Yogaraj Bhat directorial new movie 'Dana Kayonu' official teaser is out. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada