»   » ರಮ್ಯಾ ಮೇಡಂ ಮತ್ತೆ ತೆರೆಮೇಲೆ ಮಿಂಚಿಂಗು..!

ರಮ್ಯಾ ಮೇಡಂ ಮತ್ತೆ ತೆರೆಮೇಲೆ ಮಿಂಚಿಂಗು..!

Posted By:
Subscribe to Filmibeat Kannada

ಅಬ್ಬಬ್ಬಾ...! ಈ ಕ್ಷಣಕ್ಕಾಗಿ ಸ್ಯಾಂಡಲ್ ವುಡ್ ಕ್ವೀನ್ ಅಭಿಮಾನಿಗಳು ಅದೆಷ್ಟು ದಿನ ಕಾದಿದ್ರೋ...'ಆರ್ಯನ್' ಚಿತ್ರದ ನಂತ್ರ ಲಕ್ಕಿ ಸ್ಟಾರ್ ರಮ್ಯಾನ ತೆರೆಮೇಲೆ ಯಾವಾಗಪ್ಪಾ ನೋಡೋದು ಅಂತ ತುದಿಗಾಲಲ್ಲಿ ನಿಂತಿದ್ದ ಅಭಿಮಾನಿಗಳಿಗೆ ಇಂದು 'ದಿಲ್ KA ರಾಜ' ಚಿತ್ರತಂಡದಿಂದ ಸರ್ಪ್ರೈಸ್ ಸಿಕ್ಕಿದೆ.

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೊತೆ ಮಂಡ್ಯದ ರಾಣಿ ರಮ್ಯಾ ನಟಿಸಿರುವ ಚಿತ್ರ 'ದಿಲ್ KA ರಾಜ'. ಮಾಜಿ ಸಂಸದೆ ರಮ್ಯಾ ಇಲ್ಲದೆ ವರ್ಷದಿಂದ ಶೂಟಿಂಗ್ ಅರ್ಧಕ್ಕೆ ನಿಂತಿದ್ದ 'ದಿಲ್ KA ರಾಜ' ಚಿತ್ರದ ಟ್ರೈಲರ್ ಈಗ ಬಿಡುಗಡೆ ಆಗಿದೆ ನೋಡಿ.....

Watch Kannada Movie 'Dil Ka Raja' Trailer

ಸಲ್ವಾರ್ ತೊಟ್ಟು ಪಕ್ಕಾ ಪಕ್ಕದ ಮನೆ ಹುಡುಗಿ ರೇಂಜಲ್ಲಿ 'ದಿಲ್ KA ರಾಜ' ಚಿತ್ರದಲ್ಲಿ ರಮ್ಯಾ ಮಿಂಚಿದ್ದಾರೆ. ಇನ್ನೂ ಚಾಕಲೇಟ್ ಬಾಯ್ ಇಮೇಜ್ ಇದ್ದರೂ, ಕೊಂಚ ಆಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದಾರೆ. [ಲಕ್ಕಿ ಸ್ಟಾರ್ ರಮ್ಯಾ ಬೆಂಗಳೂರಿಗೆ ಸುಸ್ವಾಗತ]

ಮೊದಲ ನೋಟಕ್ಕೆ 'ದಿಲ್ KA ರಾಜ' ಪಕ್ಕಾ ಲವ್ ಸ್ಟೋರಿ ಸಬ್ಜೆಕ್ಟ್ ಅನ್ನೋದು ಕನ್ಫರ್ಮ್. ಟಾಲಿವುಡ್ ನ ಸೂಪರ್ ಹಿಟ್ ಸಿನಿಮಾಗಳಾದ 'ಸೈ', 'ಅರುಂಧತಿ', 'ಛತ್ರಪತಿ', 'ಯಮದೊಂಗ', 'ಮಗಧೀರ', 'ಈಗ', 'ಬಾಹುಬಲಿ'ದಂತಹ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಕೆ.ಕೆ.ಸೆಂಧಿಲ್ ಕುಮಾರ್ 'ದಿಲ್ KA ರಾಜ' ಚಿತ್ರವನ್ನ ಕ್ಯಾಮರಾ ಕಂಗಳಲ್ಲಿ ಸೊಗಸಾಗಿ ಸೆರೆಹಿಡಿದಿದ್ದಾರೆ. ['ದಿಲ್ ಕಾ ರಾಜಾ'ನಿಗೆ ಮರುಜನ್ಮ ಕೊಡ್ತಾರಾ ರಮ್ಯಾ?]

Watch Kannada Movie 'Dil Ka Raja' Trailer

ಎಸ್.ಎಸ್.ವಿ.ಪ್ರೊಡಕ್ಷನ್ಸ್ ಬ್ಯಾನರ್ ನಡಿ 'ದಿಲ್ KA ರಾಜ' ಚಿತ್ರ ರೆಡಿಯಾಗುತ್ತಿದೆ. ಸೋಮನಾಥ್.ಪಿ.ಪಾಟೀಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರಿಗೆ ಬಂದಿಳಿದಿರುವ ರಮ್ಯಾ, 'ದಿಲ್ KA ರಾಜ' ಸೆಟ್ ಗೆ ಎಂಟ್ರಿಕೊಟ್ರೆ, ಆದಷ್ಟು ಬೇಗ ದೊಡ್ಡ ಪರದೆ ಮೇಲೆ ರಾಜ-ರಾಣಿಯ ಪ್ರೇಮಕಥೆಯನ್ನ ನೀವು ನೋಡಬಹುದು.

English summary
Sandalwood Queen Ramya and Dynamic Prince Prajwal Devaraj starrer 'Dil Ka Raja' trailer is out. The movie is directed by Somanath.P.Patil. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada