»   » ಟ್ರೈಲರ್: ಸಿಂಹದಂತೆ ಘರ್ಜಿಸಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

ಟ್ರೈಲರ್: ಸಿಂಹದಂತೆ ಘರ್ಜಿಸಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada

ಎಲ್ಲರ ಅಚ್ಚುಮೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಿಗ್ ಸಿನಿಮಾ 'ಜಗ್ಗುದಾದಾ' ಬಗ್ಗೆ ಅಭಿಮಾನಿಗಳು ಸೇರಿದಂತೆ ಸಿನಿ ಪ್ರೀಯರಲ್ಲೂ ಸಾಕಷ್ಟು ಕುತೂಹಲ ಇದೆ. ನವ ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಜಗ್ಗುದಾದಾ' ಬಿಡುಗಡೆಗೆ ಸಿದ್ಧವಾಗಿದೆ.

ಇದೇ (ಜೂನ್) ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿರುವ ಚಿತ್ರತಂಡ ಇದೀಗ ಲೇಟೆಸ್ಟ್ ಆಗಿ ಚಿತ್ರದ ಭರ್ಜರಿ ಟ್ರೈಲರ್ ಬಿಡುಗಡೆ ಮಾಡಿದೆ. ಟ್ರೈಲರ್ ನಲ್ಲಿ ದರ್ಶನ್ ಅವರು ಅಕ್ಷರಶಃ ಸಿಂಹದಂತೆ ಘರ್ಜನೆ ಮಾಡಿದ್ದಾರೆ.['ಜಗ್ಗುದಾದಾ' ದರ್ಶನ್ ಗೆ ತಲೆಕೆಡಿಸಿದ 'ಆ' ಹುಡುಗಿ ಯಾರು?]


Watch Kannada Movie 'Jaggu Dada' Official Trailer

ಈ ಬಾರಿ ಕೊಂಚ ಡಿಫರೆಂಟ್ ಆಗಿ ಕಾಣಿಸಿಕೊಂಡಿರುವ ದರ್ಶನ್ ಅವರು ಸಖತ್ ಸ್ಟೈಲ್ ಆಗಿ ಡೈಲಾಗ್ ಡೆಲಿವರಿ ಮಾಡಿದ್ದಾರೆ. 'ಹವಾ ಹೀಟ್ ಇರೋವರೆಗೂ ಮಾತ್ರ ಇರುತ್ತೆ, ಉಸಿರು ನಿಂತ ಮೇಲೂ ಹೆಸರು ಇರಬೇಕು ಅಂದ್ರೆ ದಮ್ ಇರಬೇಕಲೈ' ಅಂತ ಸಖತ್ ಆಗಿ ದರ್ಶನ್ ಡೈಲಾಗ್ ಹೊಡೆದಿದ್ದಾರೆ.['ಜಗ್ಗುದಾದಾ'ದಲ್ಲಿ ದರ್ಶನ್ ರ ಗೆಳೆಯನ ಪಾತ್ರ ಮಾಡುತ್ತಿರುವವರು ಇವರೇ]


ಒಟ್ನಲ್ಲಿ ಪವರ್, ಫೈರ್ ಹಾಗೂ ಧೂಳೆಬ್ಬಿಸುವ ಆಕ್ಷನ್ ಇರೋ 'ಜಗ್ಗುದಾದಾ' ಟ್ರೈಲರ್ ನಲ್ಲಿ ದರ್ಶನ್ ಅವರು ಚಿಂದಿ ಉಡಾಯ್ಸಿದ್ದಾರೆ. ಜಬರ್ದಸ್ತ್ ಆಗಿರೋ ಈ ಟ್ರೈಲರ್ ನೋಡ್ತಾ ಇದ್ರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯೋದು ಗ್ಯಾರೆಂಟಿ.[ದರ್ಶನ್ 'ಜಗ್ಗುದಾದಾ' ಬಿಡುಗಡೆಗೆ ದಿನಗಣನೆ ಶುರು ಗುರು.!]


ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟಿ ದೀಕ್ಷಾ ಸೇಠ್, ನಟ ಸೃಜನ್ ಲೋಕೇಶ್, ಅನಂತ್ ನಾಗ್, ರಚಿತಾ ರಾಮ್, ರವಿಶಂಕರ್ ಮುಂತಾದವರು ಕಾಣಿಸಿಕೊಂಡಿರುವ 'ಜಗ್ಗುದಾದಾ' ಚಿತ್ರದ ಕಲರ್ ಫುಲ್ ಟ್ರೈಲರ್ ಇಲ್ಲಿದೆ ನೋಡಿ.....


Watch Kannada Movie 'Jaggu Dada' Official Trailer
English summary
Watch Kannada Movie 'Jaggu Dada' Official Trailer, starring Challenging Star Darshan, Actress Deeksha Seth, Actor Srujan Lokesh and others. The movie is Directed by Raghavendra Hegde. Music Composed by V Harikrishna.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada