»   » ಟೀಸರ್: ಪ್ರೇಮದ ಕಾಣಿಕೆ ಜೊತೆಗೆ ಬಂದ 'ಜೆಸ್ಸಿ'

ಟೀಸರ್: ಪ್ರೇಮದ ಕಾಣಿಕೆ ಜೊತೆಗೆ ಬಂದ 'ಜೆಸ್ಸಿ'

Posted By:
Subscribe to Filmibeat Kannada

ಲವ್ಲೀ ಹಿಟ್ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದಲ್ಲಿ ಹೊಸ ಚಿತ್ರ 'ಜೆಸ್ಸಿ' ಸೆಟ್ಟೇರಿ, ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ ಅಂತ ಇದೇ ಫಿಲ್ಮಿ ಬೀಟಲ್ಲಿ ನಿಮಗೆ ನಾವೇ ಹೇಳಿದ್ವಿ ತಾನೇ.

ಇದೀಗ 'ಡೈರೆಕ್ಟರ್ ಸ್ಪೆಷಲ್' ಹುಡುಗ ಧನಂಜಯ ಮತ್ತು 'ಪ್ಯಾರ್ಗೆ ಆಗ್ಬುಟೈತೆ' ಹುಡುಗಿ ಪಾರುಲ್ ಯಾದವ್ ಸ್ಪೆಷಲ್ ಆಗಿ ಕಾಣಿಸಿಕೊಂಡಿರುವ 'ಜೆಸ್ಸಿ' ಚಿತ್ರದ ಪ್ರೋಮೋ ಬಿಡುಗಡೆಯಾಗಿದ್ದು ಸಖತ್ ಲವ್ಲೀಯಾಗಿ ಮೂಡಿಬಂದಿದೆ.[ಪವನ್ ಒಡೆಯರ್ 'ಜೆಸ್ಸಿ' ಚಿತ್ರದ ಫಸ್ಟ್ ಲುಕ್ ಔಟ್ ]

'ಜೆಸ್ಸಿ' ಚಿತ್ರದಲ್ಲಿ ನಮ್ಮ ನಾಯಕನ ಹೆಸರು, 'ಜೆಸ್ಸಿಗಿಫ್ಟ್'.ಇದ್ಯಾವುದೋ ಮ್ಯೂಸಿಕ್ ಡೈರೆಕ್ಟರ್ ಹೆಸರು ಅನ್ಕೊಂಡ್ರಾ. ಅಲ್ಲಾ 'ಜೆಸ್ಸಿ' ಚಿತ್ರದ ಹೆಸರೇ ನಮ್ಮ ಹೀರೋ ಹೆಸರು. 'ಜೆಸ್ಸಿ', 'ಗಿಫ್ಟ್ ಆಫ್ ಲವ್' ಅಂತ ಅಡಿಬರಹ ಇರುವ ಈ ಚಿತ್ರದಲ್ಲಿ ಸುಂದರವಾದ ಸಿಂಪಲ್ ಡೈಲಾಗ್ ಗಳು ಕೂಡಾ ಇದೆ.

dhananjay

'ಈ ಭೂಮಿ ಮೇಲೆ ಹುಡುಗ ಆಗಿ ಹುಟ್ಟಿದ ಮೇಲೆ ಲವ್ ಮಾಡೋದು 18 ವರ್ಷ ಆದ ಮೇಲೆ ಓಟ್ ಹಾಕುವಷ್ಟೇ ಇಂಪಾರ್ಟೆಂಟ್' ನನಗೆ ಅವಳನ್ನು ನೋಡಿ ತುಂಬಾನೇ ಲವ್ ಆಗಿದ್ದು, ಯಾವಾಗ ಗೊತ್ತಾ ಅಂತ ಸಿಂಪಲ್ಲಾಗಿ ಡೈಲಾಗ್ ಹೊಡಿಯುತ್ತ, ನಮ್ಮ ಹೀರೋ ಹಾಡಿನ ಮೂಲಕ ತನ್ನ ಪ್ರೀತಿಯ ಹುಡುಗಿ ನಂದಿನಿಯನ್ನು ಪರಿಚಯ ಮಾಡಿಕೊಡುವ ಸ್ಟೈಲ್ ಪ್ರೊಮೋದಲ್ಲಿ ತುಂಬಾನೇ ಸೊಗಸಾಗಿ ಮೂಡಿಬಂದಿದೆ.

ಇನ್ನೂ ಇಂದು ದೇಶದೆಲ್ಲೆಡೆ ಭರ್ಜರಿಯಾಗಿ ತೆರೆಕಂಡಿರುವ ಬಹುನಿರೀಕ್ಷಿತ ತೆಲುಗು ಚಿತ್ರ 'ಬಾಹುಬಲಿ' ಪ್ರದರ್ಶನ ಪ್ರಾರಂಭದ ಮೊದಲು ಈಗಾಗಲೇ ಬಿಡುಗಡೆಯಾಗಿರುವ 'ಜೆಸ್ಸಿ' ಚಿತ್ರದ ಪ್ರೋಮೋವನ್ನು ಎಲ್ಲಾ ಥಿಯೇಟರ್ ಗಳಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.

ಧನಂಜಯ್, ಪಾರುಲ್ ಯಾದವ್ ಹಾಗೂ ರಘುಮುಖರ್ಜಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಜೆಸ್ಸಿ' ತ್ರಿಕೋನ ಪ್ರೇಮಕಥೆ ಇರುವ ಚಿತ್ರ. ಅನೂಪ್ ಸೀಳಿನ್ ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದಲ್ಲಿ ಅವಿನಾಶ್, ರಾಮಕೃಷ್ಣ, ಚಿಕ್ಕಣ್ಣ ಮುಂತಾದವರ ತಾರಾ ಬಳಗವಿದೆ. ಪವನ್ ಒಡೆಯರ್ 'ಗೂಗ್ಲಿ' ಹಿಟ್ ಆದಂತೆ 'ಜೆಸ್ಸಿ' ಕೂಡ ಅದೇ ಲಿಸ್ಟ್ ಗೆ ಸೇರತ್ತಾ ಅನ್ನೋದನ್ನ ಚಿತ್ರ ತೆರೆ ಕಾಣುವವರೆಗೆ ಕಾಯಬೇಕಿದೆ.

ಸಖತ್ ಕ್ಯೂಟ್ ಆಗಿ ಹಾಡಿನ ಮೂಲಕ ತನ್ನ ಪ್ರೀತಿಯ ಹುಡುಗಿಯ ಪರಿಚಯ ಮಾಡಿಕೊಡುವ 'ಜೆಸ್ಸಿ' ಚಿತ್ರದ ಪ್ರೋಮೋ ನೀವೇ ನೋಡಿ.

English summary
Watch Kannada movie 'Jessie' Official Promo, Jessie' features Kannada actor Dhananjaya, Parul Yadav and Raghu Mukherjee in the lead roles. The movie is directed by Pavan Wadeyar of 'Googli' fame.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada