»   » ಟ್ರೈಲರ್: 'ಕಾಫಿ ತೋಟ'ದಲ್ಲಿ ನಡೆದ ಕೊಲೆಯ ಸುತ್ತಾ ಮುತ್ತಾ

ಟ್ರೈಲರ್: 'ಕಾಫಿ ತೋಟ'ದಲ್ಲಿ ನಡೆದ ಕೊಲೆಯ ಸುತ್ತಾ ಮುತ್ತಾ

Posted By:
Subscribe to Filmibeat Kannada

'ಮೀರಾ ಮಾಧವ ರಾಘವ' ಚಿತ್ರದ ನಂತರ ಧಾರಾವಾಹಿಗಳಲ್ಲೇ ಬಿಜಿಯಾಗಿದ್ದ ನಿರ್ದೇಶಕ ಟಿ.ಎನ್.ಸೀತಾರಾಂ ಇದೀಗ 'ಕಾಫಿ ತೋಟ' ಚಿತ್ರದ ಮೂಲಕ ಮತ್ತೆ ನಿಮ್ಮೆಲ್ಲರ ಮುಂದೆ ಬಂದಿದ್ದಾರೆ.

ರಾಧಿಕಾ ಚೇತನ್, ರಾಹುಲ್, ರಘು ಮುಖರ್ಜಿ, ಸಂಯುಕ್ತ ಹೊರನಾಡು ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಕಾಫಿ ತೋಟ' ಚಿತ್ರದ ಟ್ರೇಲರ್ ಇಂದು ಬಿಡುಗಡೆಗೊಂಡಿತು. ಬೆಂಗಳೂರಿನ ಎಸ್.ಆರ್.ವಿ ಥಿಯೇಟರ್ ನಲ್ಲಿ ನಡೆದ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಯೋಗರಾಜ್ ಭಟ್ 'ಕಾಫಿ ತೋಟ' ಟ್ರೈಲರ್ ಲಾಂಚ್ ಮಾಡಿದರು.

Watch Kannada Movie 'Kaafi Thota' Trailer

'ಮ'ಕಾರದ ಬಗ್ಗೆ ಟಿ.ಎನ್.ಸೀತಾರಾಂಗೆ ಅಷ್ಟೊಂದು ಮಮಕಾರ ಯಾಕೆ.?

'ಕಾಫಿ ತೋಟ' ಚಿತ್ರದ ಟ್ರೈಲರ್ ನೋಡ್ತಿದ್ಮೇಲೆ, ಸಿನಿಮಾದ ಬಗ್ಗೆ ಇರುವ ನಿರೀಕ್ಷೆ ಸಹಜವಾಗಿಯೇ ಜಾಸ್ತಿ ಆಗುತ್ತೆ. ಒಂದು ಮರ್ಡರ್ ಕೇಸ್ ಹಾಗೂ ಇನ್ನೂರು ಕೋಟಿ ರೂಪಾಯಿ ಆಸ್ತಿ ಸುತ್ತ ಹೆಣೆದಿರುವ ಕಥೆ 'ಕಾಫಿ ತೋಟ' ಎಂದು ಇದೀಗಷ್ಟೇ ರಿಲೀಸ್ ಆಗಿರುವ ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ.

ಸಂದರ್ಶನ: 'ಕಾಫಿ ತೋಟ'ಕ್ಕಾಗಿ ಕಾಲಿವುಡ್ ನಿಂದ ಬಂದ ಉಡುಪಿಯ ಹುಡುಗ ರಾಹುಲ್

ಕಾನೂನು, ಕೋರ್ಟ್ ಸೀನ್ ಗಳು ಸಿ.ಎಸ್.ಪಿ ರವರ ಯು.ಎಸ್.ಪಿ. ಹೀಗಾಗಿ, 'ಕಾಫಿ ತೋಟ'ದಲ್ಲಿಯೂ ಕೋರ್ಟ್ ಸನ್ನಿವೇಶಗಳಿವೆ. ಅಂದ್ಮೇಲೆ, ಟಿ.ಎನ್.ಸೀತಾರಾಂ ರವರ ವಾದಕ್ಕೆ ಫಿದಾ ಆಗಿರುವ ಅಭಿಮಾನಿಗಳಿಗೆ 'ಕಾಫಿ ತೋಟ' ಖಂಡಿತ ರಸದೌತಣವೇ.!

ಸಸ್ಪೆನ್ಸ್ ಥ್ರಿಲ್ಲರ್ 'ಕಾಫಿತೋಟ'ದ ನಿರ್ದೇಶಕ ಸೀತಾರಾಮ್ ಸಂದರ್ಶನ

ಅಶೋಕ್ ಕಶ್ಯಪ್ ರವರ ಛಾಯಾಗ್ರಹಣ 'ಕಾಫಿ ತೋಟ'ವನ್ನ ಇನ್ನಷ್ಟು ಶ್ರೀಮಂತಗೊಳಿಸಿರುವುದು ಟ್ರೈಲರ್ ನಲ್ಲಿಯೇ ಸ್ಪಷ್ಟ. ಅನೂಪ್ ಸೀಳಿನ್, ಮಿಧುನ್ ಮುಕುಂದನ್ ಸಂಗೀತ ನೀಡಿರುವ 'ಕಾಫಿ ತೋಟ' ಚಿತ್ರದ ಟ್ರೈಲರ್ ಇದೋ ಇಲ್ಲಿದೆ ನಿಮಗಾಗಿ...

English summary
TN Seetharam directorial Kannada Movie 'Kaafi Thota' trailer is out. Watch the trailer here...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada