»   » ವೀರಪ್ಪನ್ ಕೊಲ್ಲೋಕೆ ಶಿವರಾಜ್ ಕುಮಾರ್ ಸಿದ್ಧ

ವೀರಪ್ಪನ್ ಕೊಲ್ಲೋಕೆ ಶಿವರಾಜ್ ಕುಮಾರ್ ಸಿದ್ಧ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಪ್ರಿನ್ಸ್ ಶಿವಣ್ಣ ಅಭಿನಯದ ಬಹುನಿರೀಕ್ಷಿತ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. 'ಕರುನಾಡ ಚಕ್ರವರ್ತಿ' ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಬಿಡುಗಡೆಯಾದ 'ಕಿಲ್ಲಿಂಗ್ ವೀರಪ್ಪನ್' ಟ್ರೈಲರ್ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

ಬಿಡುಗಡೆಯಾದ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಟ್ರೈಲರ್ ನೀವೇ ನೋಡಿ...

Watch Kannada movie 'Killing Veerappan' official trailer


ವಿವಾದಾತ್ಮಕ ನಿರ್ದೇಶಕ ಎಂದೇ ಫೇಮಸ್ ಆಗಿರುವ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಕ್ಷನ್-ಕಟ್ ಹೇಳಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಪೋಸ್ಟರ್ ಗಳೇ ಬಹಳ ಕುತೂಹಲ ಹುಟ್ಟಿಸಿದ್ದವು. ಇದೀಗ ಟ್ರೈಲರ್ ಸರದಿ.

ಜಿ.ಆರ್. ಪಿಕ್ಚರ್ಸ್ ಅರ್ಪಿಸುವ, ಎ. ಜೆಡ್-3, ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರ ಪ್ರಕೃತಿ ರಮಣೀಯ ಪರಿಸರವಾದ ಯಲ್ಲಾಪುರದ ಕಾಡುಗಳಲ್ಲಿ ಚಿತ್ರೀಕರಣಗೊಂಡಿದೆ. ಪ್ರತಿಯೊಂದು ಶಾಟ್ ಗಳು ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಕಾಡಿನ ಸುಂದರ ದೃಶ್ಯಗಳನ್ನು ಕ್ಯಾಮರಾ ಕಣ್ಣಿನಲ್ಲಿ ಅದ್ಭುತವಾಗಿ ಸೆರೆ ಹಿಡಿಯಲಾಗಿದೆ.

Watch Kannada movie 'Killing Veerappan' official trailer

ತುಂಬಾ ಡೇಂಜರಸ್ ವ್ಯಕಿಯಾದ ಕಾಡುಗಳ್ಳ ವೀರಪ್ಪನ್ ನಿಜ ಜೀವನಾಧರಿತ ಕಥೆಯನ್ನು ಒಳಗೊಂಡಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಶಿವರಾಜ್ ಕುಮಾರ್, ಪಾರುಲ್ ಯಾದವ್, ಯಜ್ಞಾ ಶೆಟ್ಟಿ, ಸಂದೀಪ್ ಭಾರದ್ವಾಜ್, ಸಂಚಾರಿ ವಿಜಯ್ ಮುಂತಾದವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸ್ಪೆಷಲ್ ಪೋಲಿಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವರಾಜ್ ಕುಮಾರ್ ಖಡಕ್ ಆಗಿ ಮಿಂಚಿದ್ದಾರೆ. ಇನ್ನೂ ವೀರಪ್ಪನ್ ಪಾತ್ರ ಮಾಡುತ್ತಿರುವ ಸಂದೀಪ್ ಭಾರದ್ವಾಜ್ ನಟನೆ ಟ್ರೈಲರ್ ನಲ್ಲಿ ಸಖತ್ ಆಗಿ ಮೂಡಿ ಬಂದಿದೆ.

ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಚಿತ್ರ 'ಕಿಲ್ಲಿಂಗ್ ವೀರಪ್ಪನ್' ತಮಿಳು, ತೆಲುಗು ಭಾಷೆಗಳಿಗೂ ಡಬ್ ಆಗುತ್ತಿದೆ. ಇನ್ನೂ ಚಿತ್ರ ಹೇಗಿರಬಹುದು ಎನ್ನುವ ಅಭಿಮಾನಿಗಳ ಕುತೂಹಲಕ್ಕೆ ಚಿತ್ರ ತೆರೆ ಕಂಡ ಮೇಲೆ ಉತ್ತರ ದೊರೆಯಬೇಕಿದೆ.

English summary
Kannada Movie 'Killing Veerappan'official Trailer is released, 'Killing Veerappan' features Kannada actor shivarajkumar, Kannada actress parul yadav and yagna shetty in the lead role, The movie is directed by Ram Gopal Varma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada