»   » 'ಮಂಡ್ಯ' ದಿಂದ 'ಮುಂಬೈ' ಹೊರಟ 'ಮಂಡ್ಯ' ಹೈಕಳು

'ಮಂಡ್ಯ' ದಿಂದ 'ಮುಂಬೈ' ಹೊರಟ 'ಮಂಡ್ಯ' ಹೈಕಳು

Posted By:
Subscribe to Filmibeat Kannada

'ಜೋಶ್', 'ಅಯೋಧ್ಯಪುರಂ', ಚಿತ್ರದ ಬಳಿಕ ಹೇಳ ಹೆಸರಿಲ್ಲದಂತೆ ಮಾಯವಾಗಿದ್ದ ರಾಕೇಶ್ ಅಡಿಗ ಇದೀಗ ಮತ್ತೆ ಗಾಂಧಿನಗರದಲ್ಲಿ ಪತ್ತೆಯಾಗಿದ್ದಾರೆ. 'ಮನಸಾಲಜಿ' 'ಪರಿ' 'ಮಂದಹಾಸ' ಮುಂತಾದ ಚಿತ್ರಗಳು ಮಕಾಡೆ ಮಲಗಿದ ನಂತರ ಇದೀಗ ಹೊಸ ಚಿತ್ರ 'ಮಂಡ್ಯ ಟು ಮುಂಬೈ' ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಹೌದು ನಿರ್ದೇಶಕ ವಾರ್ಧಿಕ್ ಜೋಸೆಫ್ ಆಕ್ಷನ್-ಕಟ್ ಹೇಳಿರುವ 'ಮಂಡ್ಯ ಟು ಮುಂಬೈ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ಮಾಸ್ ಲುಕ್ ನಲ್ಲಿ ಮೂಡಿಬಂದಿದೆ.

ಬಿಡುಗಡೆಯಾಗಿರುವ 'ಮಂಡ್ಯ ಟು ಮುಂಬೈ' ಚಿತ್ರದ ಟ್ರೈಲರ್ ನೀವೇ ನೋಡಿ...

Watch Kannada movie 'Mandya To Mumbai' official trailer

'ಮಂಡ್ಯ ಹುಡುಗರು, ಭಯ ಅನ್ನೋದೇ ಇಲ್ಲ, ಕಣ್ಣ್ಮುಚ್ಚಿ ಕಣ್ಣು ತೆಗೆಯೋವಷ್ಟರಲ್ಲಿ ದೇಹ ಇರತ್ತೆ. ಜೀವ ಇರೋದಿಲ್ಲಾ' ಅಂತ ಕಿಚ್ಚ ಸುದೀಪ್ ವಾಯ್ಸ್ ನಲ್ಲಿ 'ಮಂಡ್ಯ ಟು ಮುಂಬೈ' ಚಿತ್ರದ ಪಾತ್ರ ಪರಿಚಯಿಸುವ ಭಾಗದ ಡೈಲಾಗ್ ಗಳು ಮಾಸ್ ಲುಕ್ ನಲ್ಲಿ ಬಂದಿದೆ.

ಆಕ್ಷನ್-ಥ್ರಿಲ್ಲರ್, ರೋಮ್ಯಾನ್ಸ್, ಹಾಗೇನೆ ಕಾಮಿಡಿಯಾಗಿರುವ ಚಿತ್ರದಲ್ಲಿ ಸಖತ್ ಕ್ಯೂಟ್ ಹಾಗೂ ಹಾರ್ಟ್ ಗೆ ಕಚಗುಳಿಯಿಡುವ ಹಾಡುಗಳು ಪ್ರೇಕ್ಷಕರ ಮನಸೂರೆಗೊಳ್ಳುತ್ತವೆ. 'ಮಂಡ್ಯ ಟು ಮುಂಬೈ' ಚಿತ್ರದಲ್ಲಿ ಸಂಜನಾ, ರಾಕೇಶ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಎಂದಿನಂತೆ ಸಾಧುಕೋಕಿಲ ಕಾಮಿಡಿ ಪ್ರೀಯರಿಗೆ ಮನೋರಂಜನೆ ನೀಡಲಿದ್ದಾರೆ. 'ಮಂಡ್ಯ ಟು ಮುಂಬೈ' ಚಿತ್ರದ ಮೂಲಕ ಇನ್ನಾದರೂ ರಾಕೇಶ್ ಅದೃಷ್ಟ ಖುಲಾಯಿಸುತ್ತಾ ಅನ್ನೋದನ್ನ ಚಿತ್ರ ತೆರೆಗೆ ಬಂದ ಮೇಲೆ ನೋಡಬೇಕಿದೆ.

English summary
Kannada Movie 'Mandya To Mumbai' official Trailer is released, 'Mandya To Mumbai' features Kannada actor Rakesh Adiga, actress Sanjjanaa in lead role, The movie is directed by Vaardhik Joseph. Watch the trailer here

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada