»   » ರಾಕಿಂಗ್ ಸ್ಟಾರ್ 'ಮಾಸ್ಟರ್ ಪೀಸ್' ಹಾಡುಗಳ ಲಿಸ್ಟ್ ನೋಡಿದ್ರಾ?

ರಾಕಿಂಗ್ ಸ್ಟಾರ್ 'ಮಾಸ್ಟರ್ ಪೀಸ್' ಹಾಡುಗಳ ಲಿಸ್ಟ್ ನೋಡಿದ್ರಾ?

Posted By:
Subscribe to Filmibeat Kannada

ಬಹುನಿರೀಕ್ಷಿತ 'ಮಾಸ್ಟರ್ ಪೀಸ್' ಚಿತ್ರದ ಹಾಡುಗಳ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ರಾಕಿಂಗ್ ಸ್ಟಾರ್ ಯಶ್ ಹಾಗು ಶಾನ್ವಿ ಶ್ರೀವಾಸ್ತವ್ ಲೀಡ್ ರೋಲ್ ನಲ್ಲಿ ಮಿಂಚಿರುವ ಸಿನಿಮಾದ ಹಾಡುಗಳು ಐದು ವಿಭಿನ್ನ ದಿನಗಳಲ್ಲಿ ಬಿಡುಗಡೆ ಕಾಣುತ್ತಿದೆ.

ಒಂದೊಂದು ಹಾಡುಗಳು ಒಂದೊಂದು ದಿನ ರಿಲೀಸ್ ಆಗಲಿದ್ದು, ಡಿಸೆಂಬರ್ 2, 4, 7, 8, ಮತ್ತು 10ನೇ ತಾರೀಖಿನಂದು ಹಾಡುಗಳು ಬಿಡುಗಡೆಯಾಗಲಿವೆ.[ಅಬುಧಾಬಿಗೆ ಹಾರಿದ ರಾಕಿಂಗ್ ಸ್ಟಾರ್ ಯಶ್ ಮತ್ತು ಶಾನ್ವಿ..! ]

Watch Kannada Movie 'Masterpiece' Track list Teaser

ನಿರ್ದೇಶಕ ಮಂಜು ಮಾಂಡವ್ಯ ಬರೆದಿರುವ ಹಾಗೂ ನಟ ಯಶ್ ಮತ್ತು ಕಾಮಿಡಿ ನಟ ಚಿಕ್ಕಣ್ಣ ಹಾಡಿರುವ 'ಅಣ್ಣಂಗೆ ಲವ್ ಆಗಿದೆ', ಹಾಡು ಡಿಸೆಂಬರ್ 2ರಂದು ಭರ್ಜರಿಯಾಗಿ ರಿಲೀಸ್ ಆಗಲಿದೆ.

ನರ್ತನ್ ಬರೆದಿರುವ ಹಾಗೂ ಟಿಪ್ಪು ಮತ್ತು ಇಂದು ನಾಗರಾಜ್ ಹಾಡಿರುವ 'ಐ ಕಾಂಟ್ ವೈಟ್ ಬೇಬಿ' ಹಾಡು ಡಿಸೆಂಬರ್ 4 ರಂದು ಬಿಡುಗಡೆಯಾಗುತ್ತಿದೆ.['ಚಿಕ್ಕಣ್ಣ ನನಗೆ ಸಹೋದರನಿದ್ದಂತೆ': ಎಂದ ರಾಕಿಂಗ್ ಸ್ಟಾರ್!]

ಸಂಗೀತ ರವೀಂದ್ರನಾಥ್ ಅವರ ಕೇಡಿ ನಂ.1 ಮತ್ತು ಘೋಸ್ ಪಿರ್ ಬರೆದಿರುವ, ಕುನಾಲ್ ಗಾಂಜವಾಲಾ ಹಾಡಿರುವ ಜಾಗೋ ರೇ ಜಾಗೋ ಹಾಡು ಡಿಸೆಂಬರ್ 7 ರಂದು ಬಿಡುಗಡೆಯಾಗುತ್ತಿದೆ.

Watch Kannada Movie 'Masterpiece' Track list Teaser

ಇನ್ನು ಕೊನೆಯದಾಗಿ ಚಿತ್ರದ ಟೈಟಲ್ ಸಾಂಗ್ 'ಮಾಸ್ಟರ್ ಪೀಸ್ ಅಟೆನ್ಷನ್ ಪ್ಲೀಸ್' ಎಂಬ ಹಾಡು ಡಿಸೆಂಬರ್ 10 ರಂದು ರಿಲೀಸ್ ಆಗಲಿದ್ದು, ಈ ಹಾಡನ್ನು ನರ್ತನ್ ಅವರು ಬರೆದಿದ್ದಾರೆ.[ಕ್ರಿಸ್ಮಸ್ ಹಬ್ಬಕ್ಕೆ ಯಶ್ 'ಮಾಸ್ಟರ್ ಪೀಸ್' ಗಿಫ್ಟ್]

ಡಿಸೆಂಬರ್ 25 ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ 'ಮಾಸ್ಟರ್ ಪೀಸ್' ಚಿತ್ರ ತೆರೆ ಮೇಲೆ ಅಪ್ಪಳಿಸಲಿದೆ. ಹೊಂಬಾಳೆ ಫಿಲ್ಮ್ಸ್ ಅರ್ಪಿಸುವ ಬಹುನಿರೀಕ್ಷಿತ ಚಿತ್ರದ ಟ್ರ್ಯಾಕ್ ಲಿಸ್ಟ್ ಟೀಸರ್ ಬಿಡುಗಡೆಯಾಗಿದ್ದು, ವಿಡಿಯೋ ಇಲ್ಲಿದೆ ನೋಡಿ..

Watch Kannada Movie 'Masterpiece' Track list Teaser
English summary
Check out the track list of 'Masterpiece'. Starring Rocking Star Yash, Actress Shanvi Srivastava and Music composed by V Harikrishna. The movie is directed by Manju Mandavya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada