For Quick Alerts
  ALLOW NOTIFICATIONS  
  For Daily Alerts

  ಸಖತ್ ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಟ್ರೈಲರ್

  By Suneetha
  |

  ನಟಿ ಪ್ರಿಯಾಂಕ ಉಪೇಂದ್ರ ಅವರು 'ಪ್ರಿಯಾಂಕ' ಚಿತ್ರದ ನಂತರ ಮತ್ತೆ ಸಂಪೂರ್ಣ ನಾಯಕಿ ಆಧಾರಿತ 'ಮಮ್ಮಿ-ಸೇವ್ ಮಿ' ಎಂಬ ಹಾರರ್-ಥ್ರಿಲ್ಲರ್ ಚಿತ್ರದ ಮೂಲಕ ಗಾಂಧಿನಗರಕ್ಕೆ ವಾಪಸಾಗಿದ್ದಾರೆ.

  ತುಂಬಾ ಭಯ ಮೂಡಿಸುವ ಜೊತೆಗೆ ಸಾಕಷ್ಟು ಕುತೂಹಲ ಕೆರಳಿಸುವ 'ಮಮ್ಮಿ-ಸೇವ್ ಮಿ' ಚಿತ್ರದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಅವರಿಗೆ ಖ್ಯಾತ ಬಾಲನಟಿ ಯುವಿನಾ ಪಾರ್ಥವಿ ಅವರು ಸಾಥ್ ನೀಡಿದ್ದಾರೆ.[ಚಿತ್ರಗಳಲ್ಲಿ: 'ವಂಡರ್ ಲಾ'ದಲ್ಲಿ ರಿಯಲ್ ಉಪ್ಪಿ ಮೋಜು-ಮಸ್ತಿ]

  ನಿನ್ನೆ (ಜೂನ್ 30) ರಂದು ಬೆಂಗಳೂರಿನ ಇಟಿಎ ಮಾಲ್ ಸಿನಿಪೊಲಿಸ್ ನಲ್ಲಿ ಗಣ್ಯರ ಸಮ್ಮುಖದಲ್ಲಿ ಗ್ರ್ಯಾಂಡ್ ಆಗಿ 'ಮಮ್ಮಿ-ಸೇವ್ ಮಿ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಸಮಾರಂಭದಲ್ಲಿ ನಟ ರಿಯಲ್ ಸ್ಟಾರ್ ಉಪೇಂದ್ರ, ನಟಿ ತಾರಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

  'ಮಮ್ಮಿ-ಸೇವ್ ಮಿ' ಚಿತ್ರಕ್ಕೆ ನಿರ್ದೇಶಕ ಲೋಹಿತ್ ಅವರು ಆಕ್ಷನ್-ಕಟ್ ಹೇಳಿದ್ದು, ಕೆ ರವಿಕುಮಾರ್ ಅವರು ಬಂಡವಾಳ ಹೂಡಿದ್ದಾರೆ.

  ಅಂದಹಾಗೆ ಈ ಚಿತ್ರದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಅವರು 7 ತಿಂಗಳ ಗರ್ಭಿಣಿ ಪಾತ್ರ ವಹಿಸಿದ್ದು, ಬಾಲನಟಿ ಯುವಿನಾ ಪಾರ್ಥವಿ ಪ್ರಿಯಾಂಕ ಅವರ ಮಗಳ ಪಾತ್ರ ವಹಿಸಿದ್ದಾರೆ.[ಚಿತ್ರಗಳು: ಅಮೆರಿಕದಲ್ಲಿ ಬೇಸಿಗೆ ರಜೆ ಎಂಜಾಯ್ ಮಾಡುತ್ತಿರುವ ಉಪ್ಪಿ ಕುಟುಂಬ]

  ಇತ್ತೀಚೆಗೆ ಹಾರರ್ ಸಿನಿಮಾಗಳ ಅಬ್ಬರ ಜಾಸ್ತಿಯಾಗಿದ್ದು, 'ಕರ್ವ' ತೆರೆಕಂಡು ಯಶಸ್ವಿ ಕಾಣುತ್ತಿರುವ ಬೆನ್ನಲ್ಲೇ ಇಂದು 'ನಾನಿ' ತೆರೆ ಕಂಡಿದೆ. ಇದೀಗ ಇವೆಲ್ಲದರ ಸಾಲಿಗೆ ಹೊಸ ಸೇರ್ಪಡೆ 'ಮಮ್ಮಿ-ಸೇವ್ ಮಿ' ಚಿತ್ರ.

  ಟ್ರೈಲರ್ ನೋಡುತ್ತಿದ್ದರೆ, ಕುತೂಹಲದ ಜೊತೆ-ಜೊತೆಗೆ ಸಾಕಷ್ಟು ಭಯ ಕೂಡ ಹುಟ್ಟುತ್ತದೆ. ರೋಮಾಂಚನಕಾರಿ 'ಮಮ್ಮಿ-ಸೇವ್ ಮಿ' ಟ್ರೈಲರ್ ನೀವೂ ನೋಡಿ ಭಯಪಡಿ...

  English summary
  Watch Kannada Movie 'Mummy-Savi Me' official Trailer. it is a supernatural horror thriller Movie, starring Priyanka Upendra, Yuvina Parthavi and others. Directed by Lohith and produced by K Ravikumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X