For Quick Alerts
  ALLOW NOTIFICATIONS  
  For Daily Alerts

  'ನೀರ್ ದೋಸೆ'ಯಲ್ಲಿ ಎಂತೆಂಥಾ ಡೈಲಾಗುಗಳಿವೆ ಗೊತ್ತಾ?

  By Suneetha
  |

  ಇವ್ನದು ವೋಲ್ಟೇಜ್' ಆದ್ರೆ ಅವ್ಳ್ ದು ಭಯಂಕರ 'ಮೈಲೇಜ್', ನಮ್ಮಲ್ಲಿ ಪ್ರಾಡಕ್ಟ್ ಯಾವ ರೀತಿ ಇರುತ್ತೋ ಅದೇ ರೀತಿ 'ಪ್ಯಾಕಿಂಗು' ಕೂಡ ಇರುತ್ತೆ. ಇಂತಹ ಸಖತ್ ಪಂಚಿಂಗ್-ಸಿಂಗಲ್ ಮೀನಿಂಗ್ ಡೈಲಾಗ್ ನಿಮಗೆ ಬೇಕಿದ್ರೆ ಬಿಸಿಬಿಸಿ 'ನೀರ್ ದೋಸೆ' ಟ್ರೈಲರ್ ನೋಡಿ.

  'ಸಿದ್ಲಿಂಗು' ನೋಡಿದವರು ಪಂಚಿಂಗ್ ಡೈಲಾಗ್ ಕೇಳಿ ತುಂಬಾ ಎಂಜಾಯ್ ಮಾಡಿರಬಹುದು. ಅದೇ ರೀತಿ ಬಿಸಿಬಿಸಿ 'ನೀರ್ ದೋಸೆ' ಯಲ್ಲೂ ಸಖತ್ ಕರೆಂಟ್, ಬಲ್ಬ್, ಸ್ವಿಚ್ಚ್ ಗಳು ಹಾಗೆ ಸಿಂಗಲ್ ಮೀನಿಂಗ್ ಇರೋ ಡೈಲಾಗ್ ಗಳು ಓಡಾಡಿವೆ. ಜಗ್ಗೇಶ್ ಅವರಂತೂ ಡೈಲಾಗ್ ಮೂಲಕ ಚಿಂದಿ ಉಡಾಯಿಸಿದ್ದಾರೆ.['ನೀರ್ ದೋಸೆ' ಅಂದ್ರೇನು, ಅವರಿವರು ಕಂಡಂತೆ 'ನೀರ್ ದೋಸೆ']

  'ನೀರ್ ದೋಸೆ' ಟ್ರೈಲರ್ ನೋಡುತ್ತಿದ್ದರೆ, 'ಸಿದ್ಲಿಂಗು'ಗಿಂತಲೂ ಈ ಬಾರಿ 'ನೀರ್ ದೋಸೆ'ಯಲ್ಲಿ ಅಭಿಮಾನಿಗಳಿಗೆ ಡಬಲ್ ಮೀನಿಂಗ್ ಡೈಲಾಗ್ ಗಳ ಜೊತೆಗೆ ಭರಪೂರ ಮನರಂಜನೆ ನೀಡಿದ್ದಾರೆ. ಅಲ್ಲಿ ಕಡ್ಲೆಕಾಯಿ ಹಿಡ್ಕೊಂಡ್ರೆ, ಇಲ್ಲಿ ಅವರೆಕಾಯಿ ಹಿಡಿದಿದ್ದಾರೆ.

  ಒಟ್ನಲ್ಲಿ ಈ ಚಿತ್ರದಲ್ಲಿ ಬರೀ ಡೈಲಾಗ್ ಗಳದೇ ದರ್ಬಾರ್ ಅಂದ್ರೂ ತಪ್ಪಿಲ್ಲ. ಮುಖವಾಡದ ಬದುಕು, ಮಣ್ಣಾಗುವ ಸೂತ್ರಗಳು, ಕಳಚಿಕೊಳ್ಳುವ ರಾಕ್ಷಸತನ, ಹಾದರದಲ್ಲೂ ಪರಿಶುದ್ಧತೆ, ಮನಸ್ಸಿಲ್ಲದ ಸೂಳೆಗಾರಿಕೆ ಇವೆಲ್ಲವನ್ನೂ ಒಂದು ಕೊಲಾಜ್ ತರ ಸಿನಿಮಾ ಮಾಡಿರುವ ನಿರ್ದೇಶಕ ವಿಜಯ್ ಪ್ರಸಾದ್ ಅವರು ಮಾತನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.

  ಸದ್ಯಕ್ಕೆ ಬಿಡುಗಡೆ ಆಗಿರುವ ಟ್ರೈಲರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದ್ದು, 'ನೀರ್ ದೋಸೆ' ಡೈಲಾಗ್ ಗಳ ಸ್ಯಾಂಪಲ್ ಕಲೆಕ್ಷನ್ಸ್ ಇಲ್ಲಿದೆ ನೋಡಿ..

  'ಇವ್ನದು 'ವೋಲ್ಟೇಜ್'- ಅವ್ಳ್ ದು 'ಮೈಲೇಜ್'

  'ಇವ್ನದು 'ವೋಲ್ಟೇಜ್'- ಅವ್ಳ್ ದು 'ಮೈಲೇಜ್'

  "ಹೆಣ್ಣಿಗೆ ಸ್ವಿಚ್ಚ್ ಹಾಕೋರು ಬೇಕು, ಗಂಡಿಗೆ ಬೆಳಕು ಕೊಡೋ ಬಲ್ಬ್ ಬೇಕು. ಮದುವೆ ಆದ ಮೇಲೆ ಇಂತಹ ಒಪ್ಪಂದದ ಮೇಲೆ ವಿದ್ಯುತ್ ಹರಿತಾನೇ ಇರುತ್ತೆ"-ಇದು ಜಗ್ಗು ಅಲಿಯಾಸ್ ಜಗ್ಗೇಶ್ ಹೊಡಿಯೋ ಡೈಲಾಗ್.

  ತಗೊಂಡ್ರೆ 'ಮಾತ್ರೆ' ಮಾಡುಸ್ತಾಳೆ 'ಯಾತ್ರೆ'

  ತಗೊಂಡ್ರೆ 'ಮಾತ್ರೆ' ಮಾಡುಸ್ತಾಳೆ 'ಯಾತ್ರೆ'

  ನಟಿ ಹರಿಪ್ರಿಯಾ-ದತ್ತಣ್ಣ ಅವರ ಮಾತು-ಕತೆ:
  ಹರಿಪ್ರಿಯ: "ಹೌದು ಈ ವಯಸ್ಸಿಗೆ ಸ್ಟ್ರೆಂತ್ ಹೇಗೆ?
  ದತ್ತಣ್ಣ: ನೀವು ಜ್ವರ ಬಂದ್ರೆ ಏನ್ ಮಾಡ್ತೀರಾ?.
  ಹರಿಪ್ರಿಯ: ಮಾತ್ರೆ ತಗೊತೀನಿ
  ದತ್ತಣ್ಣ: ನಾನೂ ಅಷ್ಟೇ ಮಾತ್ರೆ ತಗೊತೀನಿ.

  ಪ್ರಾಡಕ್ಟ್ ಇದ್ದಂಗೆ 'ಪ್ಯಾಕಿಂಗು'

  ಪ್ರಾಡಕ್ಟ್ ಇದ್ದಂಗೆ 'ಪ್ಯಾಕಿಂಗು'

  ಜಗ್ಗೇಶ್-ದತ್ತಣ್ಣ ಮಾತು-ಕತೆ
  ದತ್ತಣ್ಣ: "ಜಗ್ಗು"
  ಜಗ್ಗೇಶ್: 'ಏನ್ ಶಾನುಭೋಗ್ರೇ'
  ದತ್ತಣ್ಣ: "ಆ ಪಿ.ಜಿ ಓನರ್ ಹೆಂಡ್ತಿ, ಎಷ್ಟ್ ಹೈಟ್ ಆಗಿ ರವಿಕೆ ಹೊಲಿಸಿಕೊಂಡಿದ್ದಾಳೆ"
  ಜಗ್ಗೇಶ್: 'ಏನ್ ಮಾತ್ರೆ ತಗೊಂಡ್ರಾ'.?

  ಜಗ್ಗೇಶ್-ದತ್ತಣ್ಣ ಮಾತು-ಕತೆ

  ಜಗ್ಗೇಶ್-ದತ್ತಣ್ಣ ಮಾತು-ಕತೆ

  ದತ್ತಣ್ಣ: ಈ ಮಸಾಲ್ ದೋಸೆ ಸಿನಿಮಾದಿಂದ ಅರ್ಧಕ್ಕೆ ಹೊರಗಡೆ ಹೋಗಿದ್ದಾಳಲ್ಲಾ, ಆ ಚಿತ್ರನಟಿ ಸೌಮ್ಯ, ಆಯಮ್ಮ ಹೆಂಗೋ.?
  ಜಗ್ಗೇಶ್: ಅವರು ಒಂಥರಾ ಅವರೆಕಾಯಿ ಇದ್ದಂಗೆ, ಹುಳ ಇದ್ರೂ ಸೊಗಡು ಜಾಸ್ತಿ.

  ಸಿಂಗಲ್ ಮೀನಿಂಗ್ ಡೈಲಾಗ್

  ಸಿಂಗಲ್ ಮೀನಿಂಗ್ ಡೈಲಾಗ್

  - ಬುಕ್ಕಲ್ಲಿ ಜಯಮಾಲಿನಿ ಫೋಟೋ ಯಾಕೋ ಇಟ್ಕೊಂಡಿದ್ದೀಯಾ?.
  - ನನಗೆ ಆಯಮ್ಮನ ಕುಂಡಿ ಕಂಡ್ರೆ ತುಂಬಾ ಇಷ್ಟ.

  ಅನಾನಸ್ ಹಣ್ಣಿಗೂ ಹೋಲಿಕೆ

  ಅನಾನಸ್ ಹಣ್ಣಿಗೂ ಹೋಲಿಕೆ

  - ಯಾಕೋ ನೀನು ರಾಜಲಕ್ಷ್ಮಿ ಮೇಡಂನ ಕಂಡ್ರೆ ಹಂಗೆ ಉರಿದು ಬೀಳ್ತೀಯಾ?.
  - ಹೇ ಅಯಮ್ಮ ಒಂಥರಾ ಅನಾನಸ್ ಹಣ್ಣಿದ್ದಂಗೆ, ಎತ್ಲಾಗೂ ನೋಡಿದ್ರೂ ಮುಳ್ಳು-ಮುಳ್ಳು.

  ಶಾರದಾಮಣಿ -ಜಗ್ಗು

  ಶಾರದಾಮಣಿ -ಜಗ್ಗು

  ದತ್ತಣ್ಣ: ಹಾಗಾದ್ರೆ ನಿನಗೆ ಶಾರದಾಮಣಿ ನಿನಗೆ ಒಪ್ಪಿಗೇನಾ.?
  ಜಗ್ಗೇಶ್: ನಮಗೆ ಹಣ್ಣು ಇಷ್ಟ ಆದ ಮೇಲೇನೇ ಸಿಪ್ಪಿ ಸುಲಿಯೋದು.

  ಕೊಟ್ಟಿಗೆಗೆ ಬಂದ್ರೆ ಗೊತ್ತಾಗೋದು ತಾನೆ

  ಕೊಟ್ಟಿಗೆಗೆ ಬಂದ್ರೆ ಗೊತ್ತಾಗೋದು ತಾನೆ

  ಸುಮನಾ: ಗಡಿಯಾರದಲ್ಲಿ ಮುಳ್ಳಿದೆ ತಾನೆ
  ಜಗ್ಗೇಶ್: ಇದೆ
  ಸುಮನಾ: ಹಾಗಾದ್ರೆ ಕರೆಕ್ಟ್ ಆಗಿ ಟೈಮ್ ಹೇಳ್ರಿ. ಹೆದ್ರಿಕೆ ಯಾಕೆ.
  ಜಗ್ಗೇಶ್: ನೀವು ಹೆಸರಿಗಷ್ಟೇ ಹಸು, ಗುಮ್ಮಿದ್ರೆ ಎತ್ತೆ.
  ಸುಮನಾ: ಕೊಟ್ಟಿಗೆ ಮನೆಗೆ ಬಂದಾಗ ಹುಷಾರು.

  ಸ್ವೆಟರ್ ಬೇರೆಯವರು ಹಾಕಿದ್ರೆ ಚೆನ್ನ

  ಸ್ವೆಟರ್ ಬೇರೆಯವರು ಹಾಕಿದ್ರೆ ಚೆನ್ನ

  ಜಗ್ಗೇಶ್: ಸ್ವೆಟರನ್ನ ನೀವು ಬೇಕಾದ್ರೆ ಹಾಕ್ಕೋಬೋದು, ಇಲ್ಲಾ ಬೇರೆಯವರ ಕೈಯಲ್ಲಿ ಹಾಕಿಸ್ಕೋಬೋದು.
  ಹರಿಪ್ರಿಯ: ಹಾಕೊಡೋರು ಕೋಡೋ ದುಡ್ಡಿಗಿಂತ ರೆಡಿಮೆಡ್ ಕಡಿಮೆಗೆ ಸಿಗುತ್ತಲ್ವಾ.
  ಜಗ್ಗೇಶ್: ಆದ್ರೂ ಹಾಕಿಸಿಕೊಳ್ಳೋದ್ರಲ್ಲಿ ಸಿಗೋ ಮಜಾ ರೆಡಿಮೆಡ್ ನಲ್ಲಿ ಸಿಗಲ್ಲ ಬಿಡಿ.

  ಪ್ರಾಬ್ಲಂ ಯಾರದು.?

  ಪ್ರಾಬ್ಲಂ ಯಾರದು.?

  ಜಗ್ಗೇಶ್: ಏರ್ ಟೆಲ್ ನಲ್ಲಿ ಮಾತಾಡಬೇಕಾದ್ರೆ, ಅಪ್ಪ ಅನ್ಸುತ್ತೆ, ಡೊಕೊಮೊದಲ್ಲಿ ಮಾತಾಡುವಾಗ ಡ್ಯಾಡಿ ಅನ್ಸುತ್ತೆ. ಈಗ ಹೇಳಿ ಪ್ರಾಬ್ಲಂ ಹ್ಯಾಂಡ್ ಸೆಟ್ ದ, ಇಲ್ಲ ನೆಟ್ ವರ್ಕ್ ದ.
  - ಮಡಿಕೊಂಡು ಇರೋರ್ದ್ ಸರ್.

  ನೀವೋಂಥರಾ ಒನಿಡಾ ಟಿವಿ ಇದ್ದಂತೆ

  ನೀವೋಂಥರಾ ಒನಿಡಾ ಟಿವಿ ಇದ್ದಂತೆ

  ಜಗ್ಗೇಶ್: ಏನ್ ಹಾಗ್ ನೋಡ್ತಿದ್ದೀರಾ?
  ಸುಮನಾ: ನೀವೊಂಥರಾ ಒನಿಡಾ ಟಿವಿ ಇದ್ದ ಹಾಗೆ, ನೆಟ್ಟ ಕಣ್ಣನ್ನು ಕೀಳಲಾಗದು.

  ಟ್ರೈಲರ್ ನೋಡಿ ನಕ್ಕು ಬಿಡಿ...

  ಟ್ರೈಲರ್ ನೋಡಿ ನಕ್ಕು ಬಿಡಿ...

  'ಮೌನ, ತಾಳ್ಮೆ, ಸಹನೆ ದೌರ್ಬಲ್ಯವಲ್ಲ. ಅವು ಅಸ್ತ್ರ. ಎಂಬ ಅಡಿಬರಹದಲ್ಲಿ ಮೂಡಿಬರುತ್ತಿರುವ 'ನೀರ್ ದೋಸೆ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ....

  English summary
  Watch Kannada movie 'Neer Dose' Official Trailer, starring Actor Jaggesh, Actress Hariprriya, Actress Suman Ranganathan, Dattanna and others. Directed by Vijaya Prasad. Music Composed by J Anoop Seelin.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X