»   » ಕೆಂದುಟಿಯ 'ವಿಸ್ಮಯ' ಲಿಪ್ ಸ್ಟಿಕ್ ಚಿತ್ರದ ಟ್ರೈಲರ್

ಕೆಂದುಟಿಯ 'ವಿಸ್ಮಯ' ಲಿಪ್ ಸ್ಟಿಕ್ ಚಿತ್ರದ ಟ್ರೈಲರ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ 'ರಂಗಿತರಂಗ' ಅದ್ಯಾವ ಘಳಿಗೇಲಿ ಕಾಲಿಡ್ತೋ ಆ ನಂತರ ಹೊಸಬರ ಚಿತ್ರಗಳಿಗೆ ರೆಕ್ಕೆ ಬಲಿತಂತಾಗಿದೆ. ನಾವೀಗ ಯಾಕೆ ಈ ಪೀಠಿಕೆ ಹಾಕುತ್ತಿದ್ದೇವೆ ಅಂದ್ರೆ ಇದೀಗ ಮತ್ತೊಂದು ಹೊಸಬರ ಚಿತ್ರ 'ಲಿಪ್ ಸ್ಟಿಕ್' ಅನ್ನೋ ವಿಚಿತ್ರ ಟೈಟಲ್ ಹಿಡಿದು ಗಾಂಧಿನಗರಕ್ಕೆ ಕಾಲಿಡ್ತಾ ಇದೆ.

ಈಗಾಗಲೇ 'ಲಿಪ್ ಸ್ಟಿಕ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಭಾರೀ ಕುತೂಹಲ ಮೂಡಿಸುತ್ತಿದೆ. ತುಂಬಾ ವಿಚಿತ್ರವಾಗಿರುವ 'ಲಿಪ್ ಸ್ಟಿಕ್' ಚಿತ್ರದ ಟ್ರೈಲರ್ ನ ಒಂದು ಸಣ್ಣ ಝಲಕ್ ಇಲ್ಲಿದೆ ನೋಡಿ....

Watch Kannada movie official trailer

ಅಲ್ಟಿಮೇಟ್ ಮೂವೀಸ್ ಅರ್ಪಿಸುವ 'ಲಿಪ್ ಸ್ಟಿಕ್' ಚಿತ್ರದ ಟ್ರೈಲರ್ ನಲ್ಲಿ ಹುಚ್ಚು ಪ್ರಪಂಚದ ಬಗ್ಗೆ ಹೇಳ ಹೊರಟಿರುವ ನಿರ್ದೇಶಕ ಅಂಶಿ ಉಮೇಶ್ ಬೃಹತ್ ಪಟ್ಟಣವೊಂದರ ಮುಖವಾಡದ ಹಿಂದಿನ ಕಥೆ ಹೇಳಲು ಹೊರಟಿದ್ದಾರೆ ಅನಿಸುತ್ತದೆ.

ಒಟ್ಟಾರೆ ಹೇಳಬೇಕೆಂದರೆ 'ಲಿಪ್ ಸ್ಟಿಕ್' ಹೊನ್ನು-ಹೆಣ್ಣಿನ ಸುತ್ತ ಸುತ್ತುವ ಕಥೆಯಾಗಿರಬಹುದು ಅಂತ ನಮ್ಮ ಅನಿಸಿಕೆ. ಟ್ರೈಲರ್ ನಲ್ಲಿ ಮರ್ಡರ್ ಮಿಸ್ಟರಿ ಯಂತೆ ಕಂಡು ಬರುವ 'ಲಿಪ್ ಸ್ಟಿಕ್' ಪ್ರೇಕ್ಷಕರಿಗೆ ಕುತೂಹಲವನ್ನಂತು ಉಂಟು ಮಾಡುವುದು ಖಂಡಿತ.

ನಾನು ವಿಸ್ಮಯ ಅನ್ನೋ ಒಂದು ಹೆಣ್ಣಿನ ಬದುಕಿನ ಹೂರಣವೇ ಈ 'ಲಿಪ್ ಸ್ಟಿಕ್' ಇರಬಹುದು. ಚಿತ್ರಕ್ಕೆ ಮನು ಬಿಲ್ಲೆಮನೆ ಹಾಗೂ ಹೇಮಾವತಿ ಬಂಡವಾಳ ಹೂಡಿದ್ದಾರೆ. ತಾರಾಗಣದಲ್ಲಿ ಯಾರು ಯಾರು ಇದ್ದಾರೆ ಅನ್ನೋದನ್ನ ಹೊಸ ನಿರ್ದೇಶಕ ಉಮೇಶ್ ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ.

ಸಖತ್ ಸಸ್ಪೆನ್ಸ್ ಆಗಿರುವ 'ಲಿಪ್ ಸ್ಟಿಕ್' 'ರಂಗಿತರಂಗ' ದಂತೆ ಪ್ರೇಕ್ಷಕನನ್ನು ಕಮಾಲ್ ಮಾಡುತ್ತೋ ಇಲ್ವೋ ಅನೋದನ್ನ ಚಿತ್ರ ತೆರೆ ಕಂಡ ಮೇಲೆ ಹೇಳಬಹುದು ಅಲ್ಲಿಯವರೆಗೆ 'ಲಿಪ್ ಸ್ಟಿಕ್' ನ ಹೆಚ್ಚಿನ ಅಪ್ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Kannada Movie 'Lipstick' official trailer is released. The movie is produced by Manu Billemane and directed by Amshi Umesh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada