»   » ಅಲೌಕಿಕ ತಲೆಗೇರಿದಾಗ ನೀರಮಲು ಹಾಲಮಲು 'ಪರಪಂಚ' ಅಮಲು

ಅಲೌಕಿಕ ತಲೆಗೇರಿದಾಗ ನೀರಮಲು ಹಾಲಮಲು 'ಪರಪಂಚ' ಅಮಲು

Posted By:
Subscribe to Filmibeat Kannada

ದೂದ್ ಪೇಡಾ ದಿಗಂತ್, ಲೂಸ್ ಮಾದ ಯೋಗಿ, ಹಾಗೂ ರಾಗಿಣಿ ದ್ವಿವೇದಿ. ಇವರೆಲ್ಲರೂ ಇದೀಗ 'ವೆಜ್, ನಾನ್ ವೆಜ್, ಅನ್ನುವ ಕ್ಯಾಪ್ಷನ್ ಇಟ್ಟುಕೊಂಡ 'ಪರಪಂಚ'ದ ಮೂಲಕ ಒಂದಾಗಿದ್ದಾರೆ. ಈಗಾಗಲೇ 'ಪರಪಂಚ'ದ ಹಾಡುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಸಖತ್ ರೆಸ್ಪಾನ್ಸ್ ಕೂಡ ಗಿಟ್ಟಿಸಿಕೊಂಡಿದೆ.

ಇದೀಗ ಯೋಗರಾಜ್ ಮೂವಿಸ್ ನ 'ಪರಪಂಚ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ತುಂಬಾ ಮನೋರಂಜನೆಯಿಂದ ಕೂಡಿದೆ. ಈ 'ಪರಪಂಚ'ದಲ್ಲಿ ಒಂದು ಪ್ರಪಂಚನೇ ಇದೆ, ಮೋಸ, ಕಥೆ-ವ್ಯಥೆ, ಸುಖ-ದುಖಃ, ಅಳು-ನಗು ಹೀಗೆ ಒಂಥರಾ ಭಾವನೆಗಳ ಡಿಕ್ಷನರಿನೇ ಇರುವ 'ಪರಪಂಚ' ಚಿತ್ರದ ಟ್ರೈಲರ್ ನೀವೇ ನೋಡಿ...

Watch Kannada movie 'Parapancha' official trailer

ಇಲ್ಲಿ ದಿಗಂತ್ ಪ್ರಕಾರ 'ಪರಪಂಚ' ದಲ್ಲಿ ಇರುವವರು 2 ವರ್ಷಗಳಿಂದ ಕುಡಿದವರ ಬಂಧುಗಳಾಗಿರುತ್ತಾರಂತೆ, 'ಭಗವಂತ ಕೊಟ್ಟ ಲಿವರ್ ಪುಗಸಟ್ಟೆ. ಅದು ದೇಣಿಗೆ ಅದನ್ನು ಯಾಕೆ ಹಾಳು ಮಾಡಿಕೊಳ್ಳುತ್ತಿರಾ ಯಾಕೆ' ಅಂತ ರಂಗಾಯಣ ರಘು ಕುಡಿದವರಿಗೆ ಕ್ಲಾಸ್ ತೆಗೆದುಕೊಳ್ಳುವ ಸನ್ನಿವೇಶ ಅದ್ಧುತವಾಗಿ ಮೂಡಿಬಂದಿದೆ.[ರಾಗಿಣಿ 'ಪರಪಂಚ'ದೊಳ್ ಏನೇನೈತಿ?]

ಇನ್ನೂ ಚಿತ್ರದಲ್ಲಿ ಚೆಸ್ ಬೋರ್ಡ್ ನಂತಿರುವ ಯೋಗರಾಜ್ ಭಟ್ಟರ ಡ್ರೆಸ್ಸ್ ವಿಚಿತ್ರವಾಗಿದೆ, ಮಾತ್ರವಲ್ಲದೆ ಭಟ್ಟರ ಲಿರಿಕ್ಸ್ ಕೂಡಾ ತುಂಬಾ ಡಿಫರೆಂಟಾಗಿದೆ, ಜಾಸ್ತಿ ಹೆಲ್ತಿಗೆ ಇಂಪಾರ್ಟೆಂಟ್ ನೀಡಿರುವ ಇವರು ಇನ್ನೊಂದು ಸಾಂಗ್ ನಲ್ಲಿ ಅರ್ಧ ಡಜನ್ ರೇಷನ್ ಸಾಮಾನಿರುವ ಅಂಗಡಿಯನ್ನೆ ತಂದಿದ್ದಾರೆ.

Watch Kannada movie 'Parapancha' official trailer

ಒಟ್ಟಾರೆ 'ಪರಪಂಚ'ದ ಇಡೀ ಟ್ರೈಲರ್ ನಲ್ಲಿ ಹೈಲೈಟ್ ಆಗೋದು ಅಂದ್ರೆ ರಂಗಾಯಣ ರಘು ಅವರ ಪಂಚ್ ಡೈಲಾಗ್ ಹಾಗೂ ಕಾಮಿಡಿ ಮಾತುಗಳು, ರಂಗಾಯಣ ರಘು ಹಾಗೂ ಭಟ್ಟರ ಕಾಂಬಿನೇಶನ್ 'ಪರಪಂಚ'ದಲ್ಲಿ ಸೂಪರ್ ಆಗಿದೆ.

ಕ್ರಿಶ್ ಜೋಷಿ ಆಕ್ಷನ್-ಕಟ್ ಹೇಳಿರುವ 'ಪರಪಂಚ' ಚಿತ್ರದ ಟ್ರೈಲರ್ ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಯಾವ ಸಂಶಯಾನು ಇಲ್ಲ. ಚಿತ್ರದಲ್ಲಿ ರಾಗಿಣಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು 'ಪರಪಂಚ' ಪ್ರೇಕ್ಷಕರಿಗೆ ಪಕ್ಕಾ ಮನೋರಂಜನೆ ನೀಡುವ ಚಿತ್ರ.

ಭಟ್ರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಪರಪಂಚ'ದಲ್ಲಿ ಲೂಸ್ ಮಾದ ಯೋಗಿ ಪೋಲಿಸ್ ಅಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೀರ್ ಸಮರ್ಥ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಯೋಗರಾಜ್ ಭಟ್, ರಂಗಾಯಣ ರಘು, ಅನಂತ್ ನಾಗ್, ದಿಗಂತ್, ಯೋಗೇಶ್, ಭಾವನಾ, ಮುಂತಾದವರು ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ.

ಫನ್ನು ಅನ್ ಲಿಮಿಟೆಡ್ ಇರುವ 'ಪರಪಂಚ'ದಲ್ಲಿ ಬೇರೆ ಯಾವೆಲ್ಲಾ ಪ್ರಪಂಚ ಇದೆ ಅಂತ ಚಿತ್ರ ತೆರೆ ಕಂಡ ಮೇಲೆ ನೋಡಬೇಕಿದೆ.

English summary
Kannada Movie 'Parapancha' official trailer is released, 'Parapancha' features Kannada actor Diganth, Yogesh, Kannada actress Ragini Dwivedi, Yogaraj Bhat, and Rangayana Raghu in the lead roles. The movie is directed by Krish Joshi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada