»   » 'ಪ್ಲಸ್' ಚಿತ್ರದ ಬೊಂಬಾಟ್ ಹಾಡುಗಳು

'ಪ್ಲಸ್' ಚಿತ್ರದ ಬೊಂಬಾಟ್ ಹಾಡುಗಳು

Posted By:
Subscribe to Filmibeat Kannada

ನಟ ಚೇತನ್ ಚಂದ್ರ ತುಂಬಾ ದಿನಗಳ ಬಳಿಕ ಗಾಂಧಿನಗರದ ಕಡೆ ಮುಖ ಮಾಡಿದ್ದು, ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸೈಕೋ ಥ್ರಿಲ್ಲರ್ ಚಿತ್ರ 'ಪ್ಲಸ್' ಮೂಲಕ ಕಮಾಲ್ ಮಾಡೋಕೆ ಹೊರಟಿದ್ದಾರೆ.

ಸ್ಯಾಂಡಲ್ ವುಡ್ ಹಿರಿಯ ನಟ ಅನಂತ್ ನಾಗ್ ವಿಚಿತ್ರ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ 'ಪ್ಲಸ್' ಚಿತ್ರದಲ್ಲಿ ಏನೇನಿದೆ, ಏನೇನಿಲ್ಲ ಅಂತಿರಾ?. ಮೊದಲು ಈ ಸಾಂಗ್ ನೋಡಿ.

Watch Kannada movie 'Plus' songs

ಸಂಡೇ ಬಂತು.. ಸಂಡೇ ಬಂತು.., ಅಂತೂ ಇಂತೂ ಸಂಡೇ ಬಂತು.. ಅಂತ ಲೂಸಿಯಾ ಬೆಡಗಿ ಶ್ರುತಿ ಹರಿಹರನ್ ಸಖತ್ ಸ್ಟೆಪ್ ಹಾಕಿ ಕುಣಿದು ಪಡ್ಡೆ ಹೈಕಳ ಮೈ ಬೆಚ್ಚಗಾಗಿಸಿದ್ದಾರೆ. ವೀಕೆಂಡ್ ಬಗ್ಗೆ ನೇ ಬರೆದಿರುವ ಹಾಡು ಡೈಲಿ ಆಫೀಸ್ ಕೆಲ್ಸಾ ಅಂತ ಎದ್ದು-ಬಿದ್ದು ಓಡುವವರಿಗೆ ಇದೊಂಥರಾ ಮಜಾ ಕೊಡೋದು ಗ್ಯಾರಂಟಿ.

ಶ್ರುತಿ ಹರಿಹರನ್ ಜೊತೆ ರಿತೇಶ್ ಸ್ಟೆಪ್ ಹಾಕಿದ್ದು, ಈಗಿನ ಜಮಾನದಲ್ಲಿ ಗಾಂಧಿನಗರಕ್ಕೆ ಬಂದಿರುವ ಡಿಫರೆಂಟ್ ಹಾಗೂ ಡೀಸೆಂಟ್ ಐಟಮ್ ಸಾಂಗ್ ಎನ್ನಲು ಅಡ್ಡಿಯಿಲ್ಲ.['ಪ್ಲಸ್; ಚಿತ್ರದಲ್ಲಿ ಮೈನಸ್ ಇಲ್ವೆ, ಇಲ್ವಂತೆ!!]

ಆರು ಥರದ ವಿಭಿನ್ನ ಮಾನಸಿಕ ಖಾಯಿಲೆಯ ಸುತ್ತಾ ಹೆಣೆದಿರುವ 'ಪ್ಲಸ್' ಚಿತ್ರದಲ್ಲಿ ಪಂಚ್ ಡೈಲಾಗ್ ಗಳಿಗೆ ಬರವಿಲ್ಲ. ಜೊತೆಗೆ ನವಿರಾದ ಪ್ರೇಮಕಥೆಯೂ ಚಿತ್ರದಲ್ಲಿ ಇರುವುದರಿಂದ ನಿರ್ದೇಶಕ ಗಡ್ಡ ವಿಜಿಯವರು ಅದಕ್ಕೂ ಒಂದು ಹಾಡನ್ನು ತಯಾರು ಮಾಡಿದ್ದಾರೆ. ಒಂಚೂರು ಅದನ್ನು ಹಾಗೆ ಕೇಳಿಬಿಡಿ.

Watch Kannada movie 'Plus' songs

ಸರಿ ತಪ್ಪು ಕೇಳದ ಮೋಹ. ಹುಳಿ ಉಪ್ಪು ಖಾರದ ದೇಹ, ಕಳ್ಳ ಆಸೆಗೇಕೆ ಕೊನೆಯೇ ಇಲ್ಲಾ ಅಂತ ಬಿ.ಜಿ ಭರತ್ ಅವರು ಕಿವಿಗೆ ಇಂಪು ನೀಡುವ ಸಂಗೀತವನ್ನು 'ಪ್ಲಸ್' ಚಿತ್ರದಲ್ಲಿ ನಿಮಗಾಗಿ ಹೊತ್ತು ತಂದಿದ್ದಾರೆ.

ಅದೇನೆ ಇರಲಿ ಯೋಗರಾಜ್ ಮೂವೀಸ್ ನ 'ಪ್ಲಸ್' ಚಿತ್ರದಲ್ಲಿ ಮೈನಸ್ ಇಲ್ವೆ ಇಲ್ವಂತೆ. ಸದ್ಯಕ್ಕೆ 'ಪ್ಲಸ್' ಕಂಡಿದ್ದು ಇಷ್ಟು. ಈಗ ಹಾಡು ಕೇಳಿ ಎಂಜಾಯ್ ಮಾಡಿ. ಆಮೇಲೆ ಪ್ಲಸ್ಸೋ, ಮೈನಸ್ಸೋ ಅಂತ ಚಿತ್ರ ತೆರೆ ಕಂಡ ಮೇಲೆ ನೋಡೋಣ ಏನಂತೀರಾ.

English summary
Kannada Actress Shruti Hariharan, Shalini, Kannada Actor Ritesh, Chetan Chandra starrer 'Plus' songs are out. The Movie is produced by Yogaraj Bhat and Directed by Gadda Viji.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada