»   » ಟ್ರೈಲರ್: ಮುದ್ದು ರಾಕ್ಷಸಿ ಮೇಲೆ ನಿಮಗೂ ಲವ್ ಆಗೋದು ಗ್ಯಾರಂಟಿ

ಟ್ರೈಲರ್: ಮುದ್ದು ರಾಕ್ಷಸಿ ಮೇಲೆ ನಿಮಗೂ ಲವ್ ಆಗೋದು ಗ್ಯಾರಂಟಿ

Posted By:
Subscribe to Filmibeat Kannada

ಚಂದನವನದ ನಟಿ ಸಿಂಧು ಲೋಕನಾಥ್ ಹಾಗೂ ನವರಸನ್ ಲೀಡ್ ರೋಲ್ ನಲ್ಲಿ ಮಿಂಚಿರುವ 'ರಾಕ್ಷಸಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅದ್ಭುತ ನಿರ್ದೇಶಕ ಮಿಸ್ಕಿನ್ ಅವರ ತಮಿಳು 'ಪಿಸಾಸು' ಚಿತ್ರದ ರಿಮೇಕ್ ಆಗಿರುವ 'ರಾಕ್ಷಸಿ' ಹಾರರ್ ಸಿನಿಮಾ ಅಂತ ಟ್ರೈಲರ್ ನಲ್ಲಿ ತಕ್ಕಮಟ್ಟಿಗೆ ತಿಳಿಯುತ್ತದೆ.

ತಮಿಳಿನ ಖ್ಯಾತ ನಿರ್ದೇಶಕ ಎ ಆರ್ ಮುರುಗದಾಸ್ ಅವರ ಶಿಷ್ಯ ಅಶ್ರಫ್ ಆಕ್ಷನ್-ಕಟ್ ಹೇಳಿರುವ 'ರಾಕ್ಷಸಿ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳಿನ ಖ್ಯಾತ ನಟ ವಿಶಾಲ್ ಹಾಗು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಭಾಗವಹಿಸಿ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಮಾಡಿದ್ದರು.[ರಾಕ್ಷಸಿ ಆಡಿಯೋ ಬಿಡುಗಡೆ ಮಾಡಿದ ಅಪ್ಪು ಮತ್ತು ವಿಶಾಲ್]

ಸಡನ್ ಆಗಿ ದೆವ್ವವೊಂದು ನಿಮ್ಮೆದುರು ಬಂದು ನಿಂತರೆ ನಿಮ್ಮ ಸ್ಥಿತಿ ಹೇಗಿರಬೇಡ ಊಹಿಸಿ. ಒಂದು ತೀವ್ರ ಕ್ಷಣದಲ್ಲಿ ಎಲ್ಲವೂ ಕೆಡುತ್ತದೆ, ನಿಮ್ಮನ್ನೇ ನೀವು ಮರೆತು ಬಿಡಬಹುದು ಅಲ್ವಾ?. ಆದರೆ ನೀವು 'ರಾಕ್ಷಸಿ' ನೋಡಿದರೆ ನಿಮ್ಮನ್ನು ನೀವು ಮರೆಯೋದು ಅಲ್ಲ, ನಿಮಗೆ ದೆವ್ವದ ಮೇಲೆ ಲವ್ ಆಗೋದು ಗ್ಯಾರಂಟಿ.

ಸದ್ಯಕ್ಕೆ ಟ್ರೈಲರ್ ಝಲಕ್ ನಲ್ಲಿ ಮುದ್ದು ಮುದ್ದಾದ 'ರಾಕ್ಷಸಿ'ಯನ್ನು ನೋಡಿ ಆಮೇಲೆ ಸಿನಿಮಾ ತೆರೆ ಕಂಡ ಮೇಲೆ ಪೂರ್ತಿ 'ರಾಕ್ಷಸಿ'ಯ ಆರ್ಭಟವನ್ನು ನೋಡಬಹುದು.

ಶ್ರೀ ಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್ಸ್ ಅರ್ಪಿಸುವ 'ರಾಕ್ಷಸಿ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ..

Watch Kannada movie Rakshasi official trailer

ಇದು ಉಪೇಂದ್ರ ಅವರ ಶ್ ಚಿತ್ರದಲ್ಲಿ ಬರುವ ದೆವ್ವ ಅಲ್ಲ, ಇವಳು ಸಖತ್ ಕಿಲಾಡಿ 'ರಾಕ್ಷಸಿ' ನೀವು ಕೊಂಚ ಯಾಮಾರಿದ್ರು ನಿಮಗೆ ಅವಳ ಮೇಲೆ ಲವ್ ಆಗೋ ಥರಾ ನಿರ್ದೇಶಕರು 'ರಾಕ್ಷಸಿ'ಯನ್ನು ಹೊರತಂದಿದ್ದಾರೆ.

ಒಟ್ನಲ್ಲಿ ಮೊದಲು ನೀವು ಭಯ ಬಿದ್ದರೂ ಒಳ್ಳೆ ಗುಣ ಇರುವ 'ರಾಕ್ಷಸಿ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇನ್ನೇನು ತೆರೆ ಮೇಲೆ ಅಪ್ಪಳಿಸಲಿದೆ. ಸದ್ಯಕ್ಕೆ ಈ ಟ್ರೈಲರ್ ನೋಡಿ..

English summary
Kannada movie 'Rakshasi' official trailer is released. 'Rakshasi' features Kannada actor Navarasan, Kannada Actress Sindhu Lokanath in the lead role. The movie is directed by Ashraf, Watch the trailer here

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada