»   » ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ - ರಿಕ್ಕಿ ಟ್ರೈಲರ್ ನೋಡಿ

ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ - ರಿಕ್ಕಿ ಟ್ರೈಲರ್ ನೋಡಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಹಾಗು ಹರಿಪ್ರಿಯಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ 'ರಿಕ್ಕಿ' ಚಿತ್ರದ ಭರ್ಜರಿ ಟ್ರೈಲರ್ ಇಂದು ಬಿಡುಗಡೆಯಾಗಿದೆ.

ಇಂದು (ಅಕ್ಟೋಬರ್ 1) ಸಂಜೆ 5 ಘಂಟೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 'ರಿಕ್ಕಿ' ಚಿತ್ರದ ಟ್ರೈಲರ್ ನ್ನು ಬಿಡುಗಡೆ ಮಾಡಿದ್ದಾರೆ. ಸುಮಾರು 3 ನಿಮಿಷ 15 ಸೆಕೆಂಡುಗಳಿರುವ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಆಕ್ಷನ್-ಕಟ್ ಹೇಳಿರುವ ರಿಕ್ಕಿ ಟ್ರೈಲರ್ ಸಖತ್ ಆಗಿ ಮೂಡಿಬಂದಿದೆ. ರಿಕ್ಕಿ ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ..

Watch Kannada movie 'Ricky' Official Trailer

ಎಸ್ ವಿ ಪ್ರೊಡಕ್ಷನ್ಸ್ ಅರ್ಪಿಸುವ ಚಿತ್ರದ ಟ್ರೈಲರ್ ನಲ್ಲಿ "ಬರಡಾದ ಆಗಸಕೆ ಕಾಡಿರುವುದು ಒಂದು ನೆನಪು, ಹುಡುಕಾಟದ ನೆಪದಲ್ಲಿ ಭುವಿಗೆ ಬಂದಿಳಿದು" ಹೀಗೆ ಸುಂದರವಾಗಿರುವ ಕವನದ ಸಾಲುಗಳಿವೆ.

ಜೊತೆಗೆ ನಟ ರಕ್ಷಿತ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿರುವ 'ರಿಕ್ಕಿ' ಚಿತ್ರದ ಟ್ರೈಲರ್ ನೋಡುತ್ತಿದ್ದರೆ, ಚಿತ್ರ ಬದುಕಿನ ವಿಭಿನ್ನ ಜಾಡು ಹಿಡಿದು ಹೋಗುವುದರ ಜೊತೆಗೆ ಕಾಡಿನಲ್ಲಿರುವ ನಕ್ಸಲೈಟ್ ಜನರ ಬದುಕು-ಬವಣೆಯ ಕಥೆಯನ್ನು ಹೇಳ ಹೊರಟಿರಬಹುದು ಎಂಬ ಅನಿಸಿಕೆ ಮೂಡುತ್ತದೆ.

ಒಂದು ಬದುಕಿನ ದುರಂತ, ಒಂದು ಬದುಕಿನ ಸಂಘರ್ಷ ಹಾಗು ಒಂದು ಅಂತಿಮ ಸಮರಗಳ ನಡುವೆ ನಡೆಯುವ ರಿಕ್ಕಿ ಚಿತ್ರದ ಟ್ರೈಲರ್ ಸಖತ್ ಕಲರ್ ಫುಲ್ ಆಗಿದ್ದು, ತುಂಬಾ ರೆಸ್ಪಾನ್ಸ್ ಗಳಿಸುತ್ತಿದೆ.

"ನೆತ್ತರ ಹನಿ ಮಣ್ಣಿಗೆ ಬಿದ್ದು ಆಕಾಶ ಕೆಂಪಾಗಿ ನೋವಿಗೆ ಹೊಸ ಅರ್ಥ ಬಂದು ಮನದಲ್ಲಿ ಈಗ ಕ್ರಾಂತಿಯ ಬೆಂಕಿ, ಸೂರಿನ ಸುಖವಿಲ್ಲ, ನಿದ್ದೆಯ ಕನಸಿಲ್ಲ, ಭಾಷಾತೀ ಈಗ ಗುರಿಯೊಂದೇ ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ". ಅಂತ ಕಿಚ್ಚ ಸುದೀಪ್ ಅವರ ಧ್ವನಿಯಲ್ಲಿ ಸಖತ್ ಆಗಿರೋ ಡೈಲಾಗ್ ಗಳು ಟ್ರೈಲರ್ ನಲ್ಲಿ ಮೂಡಿಬಂದಿದ್ದು, ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸುತ್ತಿದೆ.

"ಶನಿನಾ ಲೆಟರ್ ಹಾಕಿ ಕರೆಸೋದು ಅಲ್ಲದೇ, ಮೆರವಣಿಗೆ ಮಾಡಿ ಹೆಗಲ ಮೇಲೆ ಕೂರಿಸಿದ್ದೀರಾ?, ತಕ್ಕಡಿಯಲ್ಲಿ ಹಾಕಿ ತೂಗೋದು ಬಿಟ್ಟು ಹೆಗಲ ಮೇಲಿರುವ ಭಾರ ಹೋರೋಕೆ ಜನ ಎಷ್ಟು ಬೇಕು ಅಂತ ಲೆಕ್ಕ ಹಾಕಿ' -ಈ ಕಾಡೇನು ನಿಮ್ಮ ಅಪ್ಪನ ಮನೆಯ ಆಸ್ತಿನಾ?. ಹೀಗೆ ರಕ್ಷಿತ್ ಶೆಟ್ಟಿಯವರು ಹೊಡೆಯೋ ಡೈಲಾಗ್ ಟ್ರೈಲರ್ ನಲ್ಲಿ ಸಖತ್ ಹೈಲೈಟ್ ಆಗುತ್ತಿದೆ.

ಒಟ್ನಲ್ಲಿ 'ಉಳಿದವರು ಕಂಡಂತೆ' ಚಿತ್ರದ ನಂತರ ಡಿಫರೆಂಟ್ ಕಥಾಹಂದರವನ್ನು ಒಳಗೊಂಡಿರುವ 'ರಿಕ್ಕಿ' ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಅವರು ಮತ್ತೆ ಗಾಂಧಿನಗರಕ್ಕೆ ವಾಪಸಾಗುತ್ತಿದ್ದು, ಅಭಿಮಾನಿಗಳಿಗೆ ಮತ್ತೆ ಭರ್ಜರಿ ಮನೋರಂಜನೆ ಗ್ಯಾರಂಟಿ.

English summary
Kannada movie 'Ricky' Official Trailer is released, Kannada Actor Rakshit Shetty, Actress Haripriya in the lead role. The movie is directed by Rishab Shetty. Watch the trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada