»   » 'ರಿಕ್ತ' ಇದು ಸಂಚಾರಿ ವಿಜಯ್ ಬತ್ತಳಿಕೆಯಿಂದ ಹೊರಟ ಹೊಸ ಬಾಣ

'ರಿಕ್ತ' ಇದು ಸಂಚಾರಿ ವಿಜಯ್ ಬತ್ತಳಿಕೆಯಿಂದ ಹೊರಟ ಹೊಸ ಬಾಣ

Posted By:
Subscribe to Filmibeat Kannada

ಅಪರೂಪದ ನಟ ಸಂಚಾರಿ ವಿಜಯ್ ಅವರು 'ನಾನು ಅವನಲ್ಲ ಅವಳು' ಚಿತ್ರದ ನಂತರ ಅವರ ಬತ್ತಳಿಕೆಯಿಂದ ಮಗದೊಂದು ವಿಭಿನ್ನ ಸಿನಿಮಾ ಹೊರಬರುತ್ತಿದೆ. 'ನಾನು ಅವನಲ್ಲ ಅವಳು' ಚಿತ್ರದಲ್ಲಿ ಮಂಗಳಮುಖಿಯರ ಜೀವನದ ಬಗ್ಗೆ ಹೇಳಿದ್ದ ಸಂಚಾರಿ ವಿಜಯ್ ಅವರು ಇದೀಗ 'ರಿಕ್ತ' ಎಂಬ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ.

ನವ ನಿರ್ದೇಶಕ ಅಮೃತ್ ಕುಮಾರ್ ಅವರು ಆಕ್ಷನ್-ಕಟ್ ಹೇಳಿರುವ 'ರಿಕ್ತ' ಎಂಬ ಸಿನಿಮಾದಲ್ಲಿ ಸಂಚಾರಿ ವಿಜಯ್ ಅವರು ಬರೋಬ್ಬರಿ 4 ವಿಭಿನ್ನ ಶೇಡ್ ನಲ್ಲಿ ಮಿಂಚಿದ್ದಾರೆ. ಹಾರರ್ ಜೊತೆಗೆ ಕಾಮಿಡಿ ಇರುವ ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸುತ್ತಿದೆ.[4 ವಿಭಿನ್ನ ಶೇಡ್ ನಲ್ಲಿ ಸಂಚಾರಿ ವಿಜಯ್ ಹೊಸ ಅವತಾರ]

Watch Kannada Movie 'Riktha' official trailer

ತುಂಬಾ ಕಡಿಮೆ ಬಜೆಟ್ ನಲ್ಲಿ 'ರಿಕ್ತ' ಸಿನಿಮಾ ತಯಾರಾಗಿದ್ದು, ಈ ಚಿತ್ರದಲ್ಲಿ ಸಂಚಾರಿ ವಿಜಯ್ ಅವರ ಜೊತೆ ನಾಯಕಿಯಾಗಿ ನಟಿ ಅದ್ವಿಕಾ ಅವರು ಮಿಂಚಿದ್ದಾರೆ. ನಟ ಸಂಚಾರಿ ವಿಜಯ್ ಅವರು ಈ ಚಿತ್ರದಲ್ಲಿ ಚಿಕ್ಕ ಹುಡುಗನ ಪಾತ್ರದಲ್ಲಿ, ಲವರ್ ಬಾಯ್, ಕಾಮಿಡಿಯನ್ ಹಾಗು ದೆವ್ವದ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ...

Watch Kannada Movie 'Riktha' official trailer

ಚಿತ್ರದ ಟ್ರೈಲರ್ ನೋಡುತ್ತಿದ್ದರೆ, ಸಣ್ಣಗೆ ಭಯ ಹುಟ್ಟುತ್ತಿದ್ದು, ಸೇಡು ತೀರಿಸಿಕೊಳ್ಳುವ ದೆವ್ವದ ಕಥೆ ಇರಬಹುದು ಅನ್ನೋ ಅನುಮಾನ ಕಾಡುತ್ತದೆ. ಯಾವ ಪಾತ್ರಕ್ಕೂ ಸೈ ಎನ್ನುವ ನಟ ಸಂಚಾರಿ ವಿಜಯ್ ಅವರು 'ರಿಕ್ತ' ಸಿನಿಮಾದಲ್ಲೂ ವಿಭಿನ್ನವಾಗಿ ಮಿಂಚಿದ್ದು, ಪ್ರೇಕ್ಷಕರ ಮನ ಗೆಲ್ಲೋದು ಗ್ಯಾರೆಂಟಿ ಅನಿಸುತ್ತಿದೆ.[2014ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ವಿಜಯ್ ಶ್ರೇಷ್ಠ ನಟ]

Watch Kannada Movie 'Riktha' official trailer

ಅದೇನೇ ಇರಲಿ ಸದ್ಯದಲ್ಲೇ ಈ ಸಿನಿಮಾ ತೆರೆ ಕಾಣಲಿದ್ದು, ಇದು ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಸದ್ಯಕ್ಕೆ ಬಿಡುಗಡೆ ಆಗಿರುವ ಟ್ರೈಲರ್ ನೋಡಿ ಎಂಜಾಯ್ ಮಾಡಿ...

English summary
Watch Kannada Movie 'Riktha' official trailer. Starring Kannada Actor Sanchari Vijay, Actress Advika and others in the lead role. The movie is directed by Amruth Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada