»   » 'ರನ್ ಆಂಟನಿ' ಟೀಸರ್ ಬಹಳ ಥ್ರಿಲ್ಲಿಂಗಾಗಿದೆ ಕಣ್ರೀ..!

'ರನ್ ಆಂಟನಿ' ಟೀಸರ್ ಬಹಳ ಥ್ರಿಲ್ಲಿಂಗಾಗಿದೆ ಕಣ್ರೀ..!

Posted By:
Subscribe to Filmibeat Kannada

ದೊಡ್ಮನೆಯ ಮತ್ತೊಂದು ಕುಡಿಯಾದ ವಿನಯ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಸಿನಿಮಾ 'ರನ್ ಆಂಟನಿ'ಯ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ನಿನ್ನೆ (ಏಪ್ರಿಲ್ 29) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಚಕ್ರವ್ಯೂಹ' ಚಿತ್ರ ಬಿಡುಗಡೆ ಆದಾಗ 'ರನ್ ಆಂಟನಿ' ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿದ್ದು, ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.[ನಾಳೆ 'ಚಕ್ರವ್ಯೂಹ' ಸಿನಿಮಾ ನೋಡ್ತೀರಾ? ಒಂದು ಸರ್ ಪ್ರೈಸ್ ಕಾದಿದೆ.!]


Watch Kannada Movie 'Run Antony' official Teaser

ಸಿನಿ ಜರ್ನಿಯಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭ ಮಾಡಿರುವ ನಟ ವಿನಯ್ ರಾಜ್ ಕುಮಾರ್ ಅವರು 'ರನ್ ಆಂಟನಿ' ಎಂಬ ವಿಭಿನ್ನ ಥ್ರಿಲ್ಲರ್ ಸಿನಿಮಾದ ಮೂಲಕ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ.['ರಾಜ್ ಉತ್ಸವ': ಸ್ವಚ್ಛತಾ ಆಂದೋಲನ ಮಾಡಿದ 'ದೊಡ್ಮನೆ ಹುಡುಗರು']


ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟೀಸರ್ ಅನ್ನು ನೋಡುತ್ತಿದ್ದರೆ, ಸಿನಿಮಾ ಬಹಳ ಡಿಫರೆಂಟ್ ಹಾಗೂ ಮಿಸ್ಟರಿ ಕಥೆಯನ್ನು ಆಧರಿಸಿರಬಹುದು ಅನ್ನೋ ಅನುಮಾನ ಕಾಡುತ್ತದೆ. ಚಿತ್ರದ ಜಬರ್ದಸ್ತ್ ಟೀಸರ್ ಇಲ್ಲಿದೆ ನೋಡಿ...


Watch Kannada Movie 'Run Antony' official Teaser

ಇನ್ನು ನವ ನಿರ್ದೇಶಕ ರಘು ಶಾಸ್ತ್ರಿ ಆಕ್ಷನ್-ಕಟ್ ಹೇಳಿರುವ 'ರನ್ ಆಂಟನಿ' ಚಿತ್ರದಲ್ಲಿ ನಟಿಯರಾದ ರುಕ್ಸಾರ್ ಮತ್ತು ಸುಶ್ಮಿತಾ ಎಂಬ ಹೊಸ ಪ್ರತಿಭೆಗಳು ವಿನಯ್ ರಾಜ್ ಕುಮಾರ್ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ.[ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಕಣ್ಣೀರು ಹಾಕಿದ 'ರನ್ ಆಂಟನಿ' ತಂಡ]


ಸದ್ಯಕ್ಕೆ ಬಿಡುಗಡೆ ಆಗಿರುವ ಟೀಸರ್ ನಲ್ಲಿ ಆರಂಭದಿಂದಲೇ ಪೊಲೀಸರ ವಾಕಿ-ಟಾಕಿ ಶಬ್ದ ಕೇಳುತ್ತಿದ್ದು, ಅಂತೂ ಭರ್ಜರಿಯಾಗಿ ಚಿತ್ರದಲ್ಲಿ ಪೊಲೀಸ್ ಚೇಸಿಂಗ್ ದೃಶ್ಯಗಳು ಇರಬಹುದು ಅನಿಸುತ್ತದೆ. ಅದೇನೇ ಇರಲಿ ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಅಲ್ಲಿಯವರೆಗೆ ಈ ಟೀಸರ್ ನೋಡಿ ಎಂಜಾಯ್ ಮಾಡಿ...

English summary
Watch Kannada Movie 'Run Antony' official Teaser. Kannada Actor Vinay Rajkumar, Actress Rukhsar, Actress Sushmitha in the lead role. The movie is directed by Raghu Shastry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada