»   » ರೋಚಕ, ಕೌತುಕ, ಮನಮೋಹಕ 'ಸಂತೆಯಲ್ಲಿ ನಿಂತ ಕಬೀರ' ಟ್ರೈಲರ್

ರೋಚಕ, ಕೌತುಕ, ಮನಮೋಹಕ 'ಸಂತೆಯಲ್ಲಿ ನಿಂತ ಕಬೀರ' ಟ್ರೈಲರ್

Posted By:
Subscribe to Filmibeat Kannada

ಭಕ್ತಿ ಪ್ರಧಾನ ಚಿತ್ರವಾದ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕಾಣಿಸಿಕೊಂಡಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರದ ಆಡಿಯೋ ಬಿಡುಗಡೆ ಕೂಡ ಆಗಿದೆ.

'ಬೀಷ್ಮ್ ಸಾಹ್ನಿ ಅವರ ನಾಟಕ ಕೃತಿ ಆಧಾರಿತ' 'ಸಂತೆಯಲ್ಲಿ ನಿಂತ ಕಬೀರ' ಸಿನಿಮಾ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಸಿನಿಮಾ ಜೀವನದಲ್ಲಿ ಒಂದು ವಿಶಿಷ್ಟ ಮಜಲು ಆಗಲಿದೆ ಅನ್ನೋದು ಎಲ್ಲರ ಅಭಿಪ್ರಾಯ. ಇದಕ್ಕೆ ಉತ್ತಮ ನಿದರ್ಶನ ಎಂದರೆ ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟ್ರೈಲರ್.[ಆಡಿಯೋ ವಿಮರ್ಶೆ: 'ಸಂತೆಯಲ್ಲಿ ನಿಂತ ಕಬೀರ' ಹಾಡುಗಳು ಸೂಪರ್]


Watch Kannada Movie 'Santheyalli Nintha Kabira' Theatrical Trailer

'ಕಬಡ್ಡಿ' ಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಇಂದ್ರಬಾಬು ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದು, ಸಂತ ಕಬೀರನ ಬದುಕಿನ ಪುಟಗಳನ್ನು ತುಂಬಾ ಸಿಂಪಲ್ ಆಗಿ ಮತ್ತು ಸುಂದರವಾಗಿ ಕನ್ನಡದ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಸಿನಿಮಾ ಮಾಡಲಾಗಿದೆ.


'ಶಿವಲಿಂಗ' ಚಿತ್ರದ ಭರ್ಜರಿ ಯಶಸ್ಸಿನಲ್ಲಿರುವ ಶಿವಣ್ಣ ಅವರಿಗೆ 'ಸಂತೆಯಲ್ಲಿ ನಿಂತ ಕಬೀರ' ಸಿನಿಮಾ ಮತ್ತೊಂದು ಬ್ರೇಕ್ ಕೊಡೋದು ಗ್ಯಾರೆಂಟಿ ಅಂತಿದ್ದಾರೆ ಶಿವಣ್ಣ ಅವರ ಅಭಿಮಾನಿ ದೇವರುಗಳು.[ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಶಿವಣ್ಣನ 'ಸಂತೆಯಲ್ಲಿ ನಿಂತ ಕಬೀರ']


Watch Kannada Movie 'Santheyalli Nintha Kabira' Theatrical Trailer

ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಸನುಷಾ ಅವರು ಕಾಣಿಸಿಕೊಂಡಿದ್ದು, ಇನ್ನುಳಿದಂತೆ ತಮಿಳು ನಟ ಶರತ್ ಕುಮಾರ್, ಅವಿನಾಶ್, ಅನಂತ್ ನಾಗ್ ಹಾಗೂ ಒಂದು ಹಾಡಿನಲ್ಲಿ ನಟಿ ಸಂಜನಾ ಗರ್ಲಾನಿ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ.


ಸಿಂಪಲ್ ಮತ್ತು ಸೈಲೆಂಟ್ ಆಗಿ ಸಾಕಷ್ಟು ಕುತೂಹಲ ಕೆರಳಿಸುವ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ...


Watch Kannada Movie 'Santheyalli Nintha Kabira' Theatrical Trailer

English summary
Watch Kannada Movie 'Santheyalli Nintha Kabira' Theatrical Trailer. Starring Shiva Rajkumar, Sharath Kumar, Sanusha and Others. The movie is directed by Indra Babu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada