For Quick Alerts
  ALLOW NOTIFICATIONS  
  For Daily Alerts

  ಕಾಮನ್ ಮ್ಯಾನ್ ಆದ ಶಿವಣ್ಣನ ಸ್ಟೈಲ್ ನೋಡ್ರಲ್ಲಾ.!

  By Suneetha
  |

  ಎಲ್ಲರ ಮೆಚ್ಚಿನ ಶಿವಣ್ಣ ಅವರಿಗೆ ಇಂದು (ಜುಲೈ 12) ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಕೂಡ ಬಹಳ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ಶಿವಣ್ಣನ ಮನೆಮುಂದೆ ಜಮಾಯಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ.

  ಅಂದಹಾಗೆ ಶಿವಣ್ಣ ಅವರ ಹುಟ್ಟುಹಬ್ಬದ ದಿನದಂದು 'ಶ್ರೀಕಂಠ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಅದರಂತೆ ಜುಲೈ 11ರಂದು ರಾತ್ರಿ 11.50ರ ಸುಮಾರಿಗೆ ಶಿವಣ್ಣ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ 'ಶ್ರೀಕಂಠ' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.[ಚಿತ್ರರಂಗದಲ್ಲಿ ಶಿವಣ್ಣನಿಗಿರುವ ಬೇಡಿಕೆಯ ಹಿಂದಿರುವ ಗುಟ್ಟೇನು]

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಸಾಮಾನ್ಯ ಮನುಷ್ಯನಾಗಿ (ಕಾಮನ್ ಮ್ಯಾನ್) ಹಾಗೂ ಸಿಂಪಲ್ ವ್ಯಕ್ತಿತ್ವವುಳ್ಳ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಶ್ರೀಕಂಠ' ಚಿತ್ರದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದ್ದು, ಚಿತ್ರತಂಡ ಟಾಕಿ ಪೋರ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

  ಈ ಮೋಷನ್ ಪೋಸ್ಟರ್ ಮೂಲಕ ಶಿವಣ್ಣ ಅವರನ್ನು ಪರಿಚಯ ಮಾಡಿದ್ದು ಒಂದೆಡೆಯಾದರೆ, 'ಶ್ರೀಕಂಠ' ಮೋಷನ್ ಪೋಸ್ಟರ್ ನಲ್ಲಿ ಜನಸಾಮಾನ್ಯರ ಪರಿಸ್ಥಿತಿಯನ್ನು ಎತ್ತಿ ತೋರಿಸಲಾಗಿದೆ. ಇಂದು ಸಮಾಜದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಶಿವಣ್ಣ ಅವರು 'ಶ್ರೀಕಂಠ'ನ ಅವತಾರ ತಾಳಿರಬಹುದು ಅನ್ನೋ ಅನುಮಾನ ಮೂಡುತ್ತಿದೆ.[ಅಂದು 'ಬಂಗಾರದ ಮನುಷ್ಯ': ಇಂದು 'ಶಂಕರ್ ಗುರು'.!]

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಒಬ್ಬ ಜನ ಸಾಮಾನ್ಯನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಶಿವಣ್ಣ ಅವರಿಗೆ ನಟ ವಿಜಯ ರಾಘವೇಂದ್ರ ಅವರು ಸಾಥ್ ನೀಡಿದ್ದಾರೆ. ಜೊತೆಗೆ ಶಿವರಾಜ್ ಕುಮಾರ್ ಅವರ ಜೊತೆ ನಾಯಕಿಯಾಗಿ ಮಲಯಾಳಂ ನಟಿ ಚಾಂದಿನಿ ಶ್ರೀಧರನ್ ಅವರು ಅಭಿನಯಿಸಿದ್ದಾರೆ.[ಶಿವಣ್ಣ-ಗೀತಾ; ಜೊತೆಯಾಗಿ..ಹಿತವಾಗಿ..ಕೂಡಿ ಬಾಳಿ..ಹೀಗೆ ಎಂದೂ..]

  'ಶ್ರಾವಣಿ ಸುಬ್ರಮಣ್ಯ' ಚಿತ್ರದ ಖ್ಯಾತಿಯ ನಿರ್ದೇಶಕ ಮಂಜು ಸ್ವರಾಜ್ ಅವರು ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಮಹಾಶೈಲ ಸಿನಿಬಂಧ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಬಿ.ಮಹದೇವ್ ಮತ್ತು ಎಂ.ಎಸ್ ಮನುಗೌಡ ಅವರು ಬಂಡವಾಳ ಹೂಡಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ಇಲ್ಲಿದೆ ನೋಡಿ...

  English summary
  Watch Actor Shiva Rajkumar and Actress Chandini Sreedharan starrer Kannada Movie 'Srikanta' official Motion Poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X