»   » ಸ್ಯಾಂಡಲ್ ವುಡ್ ಗೆ ಮತ್ತೊಂದು 'ಜೈಲ್ ಬ್ರೇಕ್' ಸಿನಿಮಾ ಎಂಟ್ರಿ

ಸ್ಯಾಂಡಲ್ ವುಡ್ ಗೆ ಮತ್ತೊಂದು 'ಜೈಲ್ ಬ್ರೇಕ್' ಸಿನಿಮಾ ಎಂಟ್ರಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಬಂದಿರುವ ಜೈಲ್ ಬ್ರೇಕಿಂಗ್ ಸಿನಿಮಾದಲ್ಲಿ ಇಂದಿಗೂ ನೆನಪಿರುವ ಸಿನಿಮಾ ಅಂದ್ರೆ ಸುಮಾರು ಮೂವತ್ತು ವರ್ಷಗಳ ಹಿಂದೆ ಬಂದ 'ಮಿಂಚಿನ ಓಟ' ಸಿನಿಮಾ. ಅಂದಹಾಗೆ ಇದೀಗ ಅದೇ ತರದ ಸಿನಿಮಾವೊಂದು ಸದ್ದಿಲ್ಲದೆ ಸ್ಯಾಂಡಲ್ ವುಡ್ ಅಂಗಳದಲ್ಲಿ ತಯಾರಾಗುತ್ತಿದೆ.

ಎಲ್ಲಾ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾದ ಹೆಸರೇ 'ದಿ ಪ್ಲ್ಯಾನ್'. ನವ ನಿರ್ದೇಶಕ ಕೀರ್ತಿ ಅವರು ಆಕ್ಷನ್-ಕಟ್ ಹೇಳಿರುವ ಸಿನಿಮಾ ಸೈಲೆಂಟ್ ಆಗಿ ಶೂಟಿಂಗ್ ನಡೆಸಿದ್ದು, ಇದೀಗ ಈ ಸಿನಿಮಾದ ಟ್ರೈಲರ್ ಕೂಡ ಈಗಾಗಲೇ ಬಿಡುಗಡೆಯಾಗಿದೆ.

Watch Kannada Movie 'The Plan' Official Trailer

ಬಹುತೇಕ ಚಿತ್ರೀಕರಣ ಮುಗಿಸಿರುವ 'ದಿ ಪ್ಲ್ಯಾನ್' ಚಿತ್ರತಂಡ ಈಗಾಗಲೇ ಸೆನ್ಸಾರ್ ಅಂಗಳಕ್ಕೆ ಹೋಗಲು ಸಿದ್ಧವಾಗಿ ನಿಂತಿದೆ.

ಇತ್ತೀಚೆಗೆ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ ಅನಂತ್ ನಾಗ್ ಅವರು ಕೆಲವಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದು, ಇದೀಗ ಹೊಸಬರ 'ದಿ ಪ್ಲ್ಯಾನ್' ಚಿತ್ರದಲ್ಲೂ ವಿಭಿನ್ನವಾಗಿ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ.

ನಟ ಅನಂತ್ ನಾಗ್ ಹೇಳುವಂತೆ, ಅವರ ಸಿನಿಮಾ ವೃತ್ತಿ ಜೀವನದಲ್ಲಿ ಇದೊಂದು ವಿಭಿನ್ನವಾದ ಸಿನಿಮಾದ ಜೊತೆಗೆ ಅವರಿಗೆ ಬಹಳ ಸವಾಲಾದ ಸಿನಿಮಾವಂತೆ. ಅಲ್ಲದೇ ಬಹಳ ವರ್ಷಗಳ ನಂತರ ಅನಂತ್ ಅವರು ಖಾಕಿ ಧರಿಸಿದ್ದಾರೆ.

ಒಟ್ನಲ್ಲಿ ಪ್ರಯೋಗಾತ್ಮಕ ಸಿನಿಮಾದ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡಿರುವ ನಿರ್ದೇಶಕ ಕೀರ್ತಿ ಅವರು ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡುವ ಆತುರದಲ್ಲಿದ್ದಾರೆ. ನಟ ಹರೀಶ್ ರಾಯ್ ಅವರು ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ.

ಈಗಾಗಲೇ ಚಿತ್ರದ ಟ್ರೈಲರ್ ಮೂಲಕ ಸಿನಿ ರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿರುವ ಹೊಸಬರ 'ದಿ ಪ್ಲ್ಯಾನ್' ಚಿತ್ರದ ಕುತೂಹಲಭರಿತ ಟ್ರೈಲರ್ ಇಲ್ಲಿದೆ ನೋಡಿ..

Watch Kannada Movie 'The Plan' Official Trailer
English summary
Watch Kannada Movie 'The Plan' Official Trailer. The movie is Directed by Keerthi.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada