»   » ಉಪ್ಪಿ Unknownu ನಾನೇಶ್ವರನಾದ ಟೀಸರ್ ನೋಡಿ

ಉಪ್ಪಿ Unknownu ನಾನೇಶ್ವರನಾದ ಟೀಸರ್ ನೋಡಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ತಮ್ಮ 'ಉಪ್ಪಿಟ್ಟು' ಗೆ ಅದು ಏನೇನೋ ಕಸರತ್ತು ಮಾಡ್ತಾರೆ ಅಂತ ನೀವು ಈ ಮೊದಲು ಓದಿದ್ದೀರಿ, ಕೇಳಿದ್ದೀರಿ, ಅಲ್ವಾ. ಈ ಮೊದಲು 'ಉಪ್ಪಿ 2' ಚಿತ್ರದ ಖಾಲಿ ಪೋಸ್ಟರ್ ಜೊತೆಗೆ ಉಲ್ಟಾ ಪೋಸ್ಟರ್ ರಿಲೀಸ್ ಮಾಡಿ ಸುದ್ದಿ ಮಾಡಿದ್ರೂ, ಆನಂತರ ಟ್ರೈಲರ್ ಇಲ್ಲ ಅಂತ ಹೇಳಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ರು, ಇದೀಗ ಡಿಫರೆಂಟ್ ಟೀಸರ್ ಸರದಿ.

ಇದೀಗ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ 'ಉಪ್ಪಿ 2' ಚಿತ್ರದ ಡಿಫರೆಂಟ್ ಉಲ್ಟಾ ಟೀಸರ್ ಬಿಡುಗಡೆ ಮಾಡಿ ಪ್ರೇಕ್ಷಕರಿಗೆ ಮತ್ತೊಮ್ಮೆ ಕನ್ ಫ್ಯೂಶನ್ ಸೃಷ್ಟಿ ಮಾಡಿದ್ದಾರೆ.[ಬಿಸಿ-ಬಿಸಿ ಉಪ್ಪಿಟ್ಟಿಗೆ ಬಗೆ-ಬಗೆ ಪ್ರಚಾರ]


ಪ್ರಿಯಾಂಕ ಉಪೇಂದ್ರ ಬಂಡವಾಳ ಹಾಕಿರುವ, ರಿಯಲ್ ಸ್ಟಾರ್ ಉಪೇಂದ್ರ, ಕ್ರಿಸ್ಟಿನಾ ಆಖಿವಾ ಮತ್ತು ಪಾರುಲ್ ಯಾದವ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಉಪ್ಪಿ 2' ಚಿತ್ರದ ಟೀಸರ್ ಇಲ್ಲಿದೆ ನೋಡಿ....


Watch Kannada movie 'Uppi 2' official Teaser

ರಿಯಲ್ ಸ್ಟಾರ್ ಉಪೇಂದ್ರ ಅಘೋರಿಗಳಂತೆ ವೇಷ ಹಾಕಿ, ಕಣ್ಣಿಗೊಂದು ಕಲರ್ ಫುಲ್ ಕೂಲಿಂಗ್ ಗ್ಲಾಸ್ ಹಾಕಿಕೊಂಡು ತಲೆ ಕೆಳಗಾಗಿ ಕಾಲು ಮೇಲೆ ಮಾಡಿ ಶೀರ್ಷಾಸನ ಮಾಡಿ ಅಘೋರಿಗಳ ಮಧ್ಯದಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಟೀಸರ್ ಇದೀಗ ಗಾಂಧಿನಗರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.


ಈ ಆಡಿಯೋ ಟೀಸರ್ ನಲ್ಲಿ ನಾನು ಯಾರು, ನಾನು ಅವನಾ ಎಂಬುದರ ಬಗ್ಗೆ ಉಪ್ಪಿ Unknownu ಪ್ರಶ್ನಿಸುತ್ತಾ ಕೊನೆ ಅಸ್ಪಷ್ಟವಾಗಿ ಅಹಂ ನಾನೇಶ್ವರ ಎನ್ನುವಾಗ ಉಪ್ಪಿ2 ಟೈಟಲ್ ಬರುತ್ತದೆ [ಉಪ್ಪಿ 2 ಹವಾಕ್ಕೆ ಬೆಚ್ಚಿದ ತೆಲುಗಿನ ಪ್ರಿನ್ಸ್ ಮಹೇಶ್]


ಅಸಲಿಗೆ ಉಪ್ಪಿ ಅದೇನು ಮಾಡಕ್ಕೆ ಹೊರಟಿದ್ದಾರೆ ಅನ್ನೋದು ಸದ್ಯದ ಮಟ್ಟಿಗೆ ಎಲ್ಲರಿಗೂ ಕುತೂಹಲದ ಜೊತೆಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.


ಒಟ್ಟಾರೆ ಹೇಳಬೇಕೆಂದರೆ ಇಷ್ಟೆಲ್ಲಾ ಕ್ರಿಯೇಟಿವಿಟಿ ಕಂಡಾಗ ಉಪೇಂದ್ರ ಅವರು ಪ್ರೇಕ್ಷಕರಿಗೆ ಅದೇನೋ ಹೊಸತು ತೋರಿಸಲು ಪ್ರಯತ್ನ ಪಟ್ಟಿರುವುದು ಸ್ಪಷ್ಟವಾಗುತ್ತಿದೆ.


ಈ ಮೊದಲು ಉಪ್ಪಿ 2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮಿ' ಹಾಡಿನ ಮೂಲಕ ಇಡೀ ಗಾಂಧಿನಗರದಲ್ಲಿ ಕೋಲಾಹಲ ಎಬ್ಬಿಸಿದ ರಿಯಲ್ ಸ್ಟಾರ್ ಇದೀಗ ಡಿಫರೆಂಟ್ ಟೀಸರ್ ಮೂಲಕ ಅದೇನನ್ನು ಹೇಳ ಹೊರಟಿದ್ದಾರೆ ಅನ್ನೋದು ಇನ್ನೂ ಸ್ಪಷ್ಟವಾಗುತ್ತಿಲ್ಲ.[250 ಚಿತ್ರ ಮಂದಿರಗಳಲ್ಲಿ 'ಉಪ್ಪಿ 2' ಲಭ್ಯ]


ಉಪೇಂದ್ರ ಹೋಮ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ 'ಉಪ್ಪಿ 2' ಚಿತ್ರಕ್ಕೆ ಗುರುಕಿರಣ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅಂತೂ ಇಂತೂ ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನೋದನ್ನ ರಿಯಲ್ ಸ್ಟಾರ್ ಮತ್ತೊಮ್ಮೆ ತೋರಿಸಲು ಹೊರಟಿದ್ದಾರೆ.


ಅದೇನೇ ಇರಲಿ ಒಟ್ನಲ್ಲಿ 'ಉಪ್ಪಿ 2' ನ ಸ್ಪೆಷಾಲಿಟಿ ಏನು ಅಂತ ಗೊತ್ತಾಗಬೇಕಿದ್ರೆ ಆಗಸ್ಟ್ 14 ಚಿತ್ರ ತೆರೆ ಕಾಣುವವರೆಗೂ ಅಭಿಮಾನಿ ಬಳಗದವರು ಕೊಂಚ ತಾಳ್ಮೆಯಿಂದ ಕಾಯಲೇಬೇಕು.

English summary
Kannada movie 'Uppi 2' official Teaser is released. 'Uppi 2' features Kannada actor Upendra, Actress Kristina Akheeva, Kannada Actress Parul Yadav in the lead role. The movie is directed by Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada